ಶುಕ್ರವಾರ, ಸೆಪ್ಟೆಂಬರ್ 17, 2021
29 °C

ವಿಡಿಯೊ: ಪ್ಲಾಸ್ಟಿಕ್‌ ಬಾಟಲ್‌ ಬಿರಡೆ ತೆಗೆದ ಜೇನ್ನೊಣಗಳು; ಹೌಹಾರಿದ ನೆಟ್ಟಿಗರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎರಡು ಜೇನ್ನೊಣಗಳು ಪ್ಲಾಸ್ಟಿಕ್‌ ಬಾಟಲಿಯ ಬಿರಡೆ ತೆರೆದವು ಎಂದು ಹೇಳಿದರೆ ನಂಬುವುದು ಕಷ್ಟ. ಆದರೆ ಅವು ಕ್ಯಾಪ್‌ ತೆಗೆಯುತ್ತಿರುವ ವಿಡಿಯೊವನ್ನು ನೋಡಿದರೆ ಯಾರಾದರೂ ನಂಬಲೇ ಬೇಕು!

ಹೌದು. ಬ್ರೆಜಿಲ್‌ನ ಎರಡು ಜೇನ್ನೊಣಗಳು ಪ್ಲಾಸ್ಟಿಕ್‌ ಬಾಟಲಿಯ ಬಿರಡೆ ತೆಗೆಯುವ ಮೂಲಕ ವಿಶ್ವದಾಖಲೆ ಮಾಡಿವೆ. ಬ್ರೆಜಿಲ್‌ನ ಅಧಿಕೃತ ಸುದ್ದಿ ತಾಣ ‘ವೈರಲ್‌ ಹಾಗ್‌’ ಈ ವಿಡಿಯೊ ಸುದ್ದಿಯನ್ನು ಪ್ರಕಟಿಸಿದೆ. 

ಬ್ರೆಜಿಲ್‌ನ ಸಾಹೊ ಪೌಲೊ ಎಂಬುವರು ಜೇನು ನೋಣಗಳು ಬಿರಡೆ ತೆಗೆಯುವುದನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಇದನ್ನೇ ‘ವೈರಲ್‌ ಹಾಗ್‌’ ವೆಬ್‌ಸೈಟ್‌ ಸುದ್ದಿ ರೂಪದಲ್ಲಿ ಪ್ರಕಟಿಸಿದೆ.

ಸಾಹೊ ಪೌಲೊ ತಮ್ಮ ಕಚೇರಿಯಲ್ಲಿ ಊಟ ಮಾಡುವಾಗ ಸೋಡಾ ಬಾಟಲಿಯ ಬಿರಡೆಯನ್ನು ಸಡಿಲಗೊಳಿಸಿ ಇಟ್ಟಿದ್ದರು. ಈ ವೇಳೆ ಹಾರಿ ಬಂದ ಎರಡು ಜೇನ್ನೊಣಗಳು ಬಾಟಲಿಯ ಬಿರಡೆಯ ಕೆಳಗೆ ವಿರುದ್ಧ ದಿಕ್ಕಿನಲ್ಲಿ ಕೂತು ಮುಂಗಾಲುಗಳಿಂದ ಬಿರಡೆಯನ್ನು ತೆಗೆದಿರುವುದು ವೈರಲ್‌ ಆದ ವಿಡಿಯೊದಲ್ಲಿದೆ.

ಎರಡು ಜೇನ್ನೊಣಗಳು ನನ್ನ ಸೋಡಾವನ್ನು ಕದಿಯಲು ಬಂದಿವೆ ಎಂದು ಸಾಹೊ ಪೌಲ್‌ ಟ್ವೀಟ್‌ ಮಾಡಿ ವಿಡಿಯೊವನ್ನು ಪ್ರಕಟಿಸಿದ್ದರು.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಎರಡು ಜೇನ್ನೊಣಗಳ ಜಾಣ್ಮೆ ಮತ್ತು ಸಾಹಸಕ್ಕೆ ನೆಟ್ಟಿಗರು ಹೌಹಾರಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು