ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ತಲೆಕೆಳಗಾಗಿ ಸಿಕ್ಕಿಬಿದ್ದಿದ್ದ 30 ಮಂದಿಯ ರಕ್ಷಣೆ

Published 16 ಜೂನ್ 2024, 2:52 IST
Last Updated 16 ಜೂನ್ 2024, 2:52 IST
ಅಕ್ಷರ ಗಾತ್ರ

ಪೋರ್ಟ್‌ಲ್ಯಾಂಡ್: ಅಮೆರಿಕದ ಓರೆಗನ್ ಸ್ಟೇಟ್‌ನಲ್ಲಿರುವ ಶತಮಾನದಷ್ಟು ಹಳೆಯದಾದ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ರೈಡ್ ವೇಳೆ ತಲೆಕೆಳಗಾಗಿ ಸಿಕ್ಕಿಬಿದ್ದಿದ್ದ 30 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓಕ್ಸ್ ಪಾರ್ಕ್‌ನಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಸುಮಾರು ಅರ್ಧ ಗಂಟೆ ಕಾಲ 30 ಜನರು ರೈಡ್ ವೇಳೆ ಆಕಾಶದಲ್ಲೇ ತಲೆಕೆಳಗಾಗಿ ಸಿಕ್ಕಿಹಾಕಿಕೊಂಡಿದ್ದರು. ಅವರನ್ನು ಪೋರ್ಟ್‌ಲ್ಯಾಂಡ್‌ನ ಫೈರ್ ಆ್ಯಂಡ್ ರೆಸ್ಕ್ಯೂ ವಿಭಾಗ ರಕ್ಷಿಸಿದೆ.

ಮ್ಯಾನುವೆಲ್ ಆಗಿ ರೈಡರ್ ಅನ್ನು ಮೇಲಿಂದ ಕೆಳಕ್ಕಿಳಿಸಲಾಯಿತು. ಯಾರಿಗೂ ಗಾಯವಾಗಿಲ್ಲ. ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ ಎಂದು ಅದು ಹೇಳಿದೆ.

ಪ್ರಸ್ತುತ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

1905ರಲ್ಲಿ ಓಕ್ಸ್ ಪಾರ್ಕ್ ತೆರೆಯಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT