ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಚಂದಾದಾರರ ಸಂಖ್ಯೆ ಹೆಚ್ಚಳ

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದೇಶದಲ್ಲಿ ಸದ್ಯ 885 ದಶಲಕ್ಷ ಮೊಬೈಲ್ ಚಂದಾದಾರಾರರಿದ್ದು, ಈ  ಸಂಖ್ಯೆ ದ್ವಿಗುಣ ವೇಗದಲ್ಲಿ ಬೆಳೆಯುತ್ತಿದೆ ಎನ್ನುತ್ತದೆ ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ವರದಿ. ಆದರೆ, 37 ಸಾವಿರ ಹಳ್ಳಿಗಳಿಗೆ ಇನ್ನೂ ಮೊಬೈಲ್ ಸಂಪರ್ಕ ಇಲ್ಲ ಎನ್ನುವುದು ನಂಬಲೇಬೇಕಾದ ಸಂಗತಿ.

ಮಾರ್ಚ್ ಅಂತ್ಯದ ವೇಳೆಗೆ ಈ ಹಳ್ಳಿಗಳಲ್ಲಿ ಅರ್ಧದಷ್ಟು ಭಾಗಗಳಿಗೆ  ಮೊಬೈಲ್ ಸಂಪರ್ಕ ಬರುವ ನಿರೀಕ್ಷೆ ಇದೆ. ಕಳೆದ ಜುಲೈ ಅಂತ್ಯದ ವರೆಗಿನ ವರದಿ ಪ್ರಕಾರ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ತನ್ನ ಸಂಪರ್ಕ ಜಾಲ ವಿಸ್ತರಿಸಿದೆ.

ದೇಶದ ಸುಮಾರು 33,620 ನಗರಗಳು ಬಿಎಸ್‌ಎನ್‌ಎಲ್ ಸೇವಾ ವ್ಯಾಪ್ತಿಗೆ ಬಂದಿವೆ. ಆದರೆ, 2001ರ ರಾಷ್ಟ್ರೀಯ ಸಮೀಕ್ಷೆ ಪ್ರಕಾರ ದೇಶದಲ್ಲಿ 5,93,731 ಜನವಸತಿ ಹಳ್ಳಿಗಳಿವೆ.

ಸದ್ಯ ದೇಶದ ಒಟ್ಟು ಮೊಬೈಲ್ ದೂರವಾಣಿ ಮಾರುಕಟ್ಟೆಗೆ ಗ್ರಾಮೀಣ ಭಾಗದ ಕೊಡುಗೆ ಶೇ 66ರಷ್ಟಿದೆ. ಚಂದಾದಾರರ ದೃಷ್ಟಿಯಿಂದ ಶೇ 33ರಷ್ಟು ಪಾಲು ಇದೆ.

ಗ್ರಾಮೀಣ ಭಾರತದಲ್ಲಿ ಮೊಬೈಲ್ ಮೂಲಸೌಕರ್ಯವನ್ನು ವಿಸ್ತರಿಸಲು ಯೂನಿವರ್ಸಲ್ ಸರ್ವೀಸ್ ಓಬ್ಲಿಗೇಷನ್ ಫಂಡ್(ಯುಎಸ್‌ಒ) ಸಬ್ಸಿಡಿ ನೆರವು ನೀಡುತ್ತದೆ.

2000 ಜನಸಂಖ್ಯೆಗಿಂತ ಹೆಚ್ಚಿನ ಜನಸಂಖ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಅವುಗಳನ್ನು ಮೊಬೈಲ್ ಸೇವಾ ವ್ಯಾಪ್ತಿಗೆ ತರಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಮಿಲಿಂದ್ ದೇವುರಾ ಹೇಳಿದ್ದಾರೆ.

ದೂರ ಸಂಪರ್ಕ ಇಲಾಖೆಗೆ ಗ್ರಾಮೀಣ ಭಾಗಗಳಲ್ಲಿ ಅಂತರ್ಜಾಲ ಸಂಪರ್ಕ ವಿಸ್ತರಿಸಲು 20 ಕೋಟಿ ಮೊತ್ತದಲ್ಲಿ ಯೋಜನೆ ರೂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT