2ಡಿ ವಿಡಿಯೊವನ್ನು ತಕ್ಷಣವೇ 3ಡಿ ಆಗಿ ಪರಿವರ್ತಿಸುವ ಹೊಸ ತಂತ್ರಾಂಶ ಅಭಿವೃದ್ಧಿಗೊಂಡಿದೆ. ಇದು ‘3ಡಿ’ ಜಮಾನಾ. ಮಕ್ಕಳಿಂದ ಹಿಡಿದು ವಯಸ್ಕರಿಗೂ ತ್ರಿಡಿ ಚಿತ್ರಗಳು, ವಿಡಿಯೊ ಬಹಳ ಇಷ್ಟ. ಹೀಗಾಗಿ, ಪ್ರತಿಯೊಬ್ಬರ ಮನೆಯಲ್ಲಿರುವ ಟಿವಿಯೂ ‘3ಡಿ’ ತಂತ್ರಜ್ಞಾನ ಒಳಗೊಂಡಿರುತ್ತದೆ. ಆದರೆ, ಕೆಲವರಿಗೆ ತಮ್ಮ ಬಳಿ ಇರುವ ‘2ಡಿ’ ವಿಡಿಯೊ, ವಿಡಿಯೊ ಗೇಮ್ಗಳನ್ನು ಇದರಲ್ಲಿ ನೋಡಲಾಗುವುದಿಲ್ಲ ಎಂಬ ಬೇಸರವಿರುತ್ತದೆ.

ಈ ಸಮಸ್ಯೆ ಬಗೆಹರಿಸಲೆಂದೇ ಮೆಸಾಚುಸೇಟ್ ತಂತ್ರಜ್ಞಾನ ಸಂಸ್ಥೆಯ (ಎಂಐಟಿ) ತಂತ್ರಜ್ಞರು ಹೊಸ ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಾಂಶದ ಮೂಲಕ 2ಡಿ ವಿಡಿಯೊಗಳನ್ನು ಕೆಲವೇ ಕ್ಷಣಗಳಲ್ಲಿ 3ಡಿ ವಿಡಿಯೊಗಳನ್ನು ಪರಿವರ್ತಿಸಬಹುದು ಎಂದು ಎಂಐಟಿಯ ಸಂಶೋಧಕ ಪ್ರಾಧ್ಯಾಪಕರಾದ ಒಜಿಸಿಚ್ ಮಟುಸ್ಕಿ ತಿಳಿಸಿದ್ದಾರೆ.

ಈ ಹಿಂದೆ ತಂತ್ರಾಂಶ ಅಭಿವೃದ್ಧಿಕಾರರು 2ಡಿ ವಿಡಿಯೊಗಳನ್ನು 3ಡಿಗೆ ಬದಲಾಯಿಸುವ ತಂತ್ರಾಂಶ ಗಳನ್ನು ಅಭಿವೃದ್ಧಿಪಡಿಸಿದ್ದರು. ಆ ಸಾಫ್ಟ್ವೇರ್ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದೀಗ ಅಮೆರಿಕದ ಎಂಐಟಿ ಸಂಸ್ಥೆ ಮತ್ತು ಕಾತಾರ್ ಕಂಪ್ಯೂಟಿಂಗ್ ಸಂಶೋಧನಾ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಸಾಫ್ಟ್ವೇರ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಟುಸ್ಕಿ ತಿಳಿಸಿದ್ದಾರೆ.

ಈ ಸಾಫ್ಟ್ವೇರ್ ಅನ್ನು ಖರೀದಿಸುವ ಗ್ರಾಹಕರು ತಮ್ಮ ಮನೆಗಳಲ್ಲಿರುವ 3ಡಿ ಸೌಲಭ್ಯ ಹೊಂದಿರುವ ಟಿವಿ ಅಥವಾ ಕಂಪ್ಯೂಟರ್ಗಳ ಮೂಲಕ 2ಡಿ ವಿಡಿಯೊಗಳನ್ನು 3ಡಿಗೆ ಬದಲಾಯಿಸಿಕೊಂಡು ಆನಂದಿಸ ಬಹುದು. ಈ ಆ್ಯಪ್ನಲ್ಲಿರುವ ವಿಡಿಯೊ ಪರಿವರ್ತಕ ಕಿಂಡಿಯಲ್ಲಿ 2ಡಿ ವಿಡಿಯೊಗಳನ್ನು ಅಪ್ಲೋಡ್ ಮಾಡಬೇಕು. ಆ ವಿಡಿಯೊದ ದೃಶ್ಯ ಮತ್ತು ಧ್ವನಿ ಕೆಲವೇ ಕ್ಷಣಗಳಲ್ಲಿ ಪರಿವರ್ತನೆಯಾಗುತ್ತದೆ.

ಬದಲಾಗಿರುವ ವಿಡಿಯೊಗಳು 3ಡಿ ವಿಡಿಯೊದಷ್ಟೆ ಗುಣ ಮಟ್ಟವನ್ನು ಹೊಂದಿರುತ್ತವೆ. ಆಡಿಯೊವನ್ನು ಕೂಡ ನಿಖರವಾಗಿ ಮತ್ತು ಸ್ಪಷ್ಟವಾಗಿ ಆಲಿಸಬಹುದು. 3ಡಿ ಮ್ಯಾಪ್ ಮೂಲಕ ವಿಡಿಯೊ ಗೇಮ್ಗಳನ್ನು ಪರಿವರ್ತಿಸಿಕೊಂಡು ಆಡಬಹುದಾಗಿದೆ. 3ಡಿ ಪರದೆಯ ಮೇಲೆ 2ಡಿ ವಿಡಿಯೊಗಳನ್ನು ನೋಡಲಾಗುತ್ತಿಲ್ಲ ಎಂಬ ಕೊರಗನ್ನು ಈ ಆ್ಯಪ್ ನಿವಾರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.