ಶುಕ್ರವಾರ, ಏಪ್ರಿಲ್ 16, 2021
31 °C

ಹೊಗೆಸೊಪ್ಪು ಕೃಷಿ ಚಟುವಟಿಕೆ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಣನೂರು: ಈಚೆಗೆ ಸುರಿದ ವರ್ಷಧಾರೆಯಿಂದ ಕೊಣನೂರು ಮತ್ತು ರಾಮನಾಥಪುರ ಹೋಬಳಿ ವ್ಯಾಪ್ತಿಯಲ್ಲಿ ಹೊಗೆಸೊಪ್ಪು ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಮುಂಗಾರು ಪೂರ್ವ ಮಳೆಯ ಕೊರತೆಯಿಂದಾಗಿ ಕಂಗೆಟ್ಟಿದ್ದ ರೈತರ ಮೊಗದಲ್ಲೀಗ ಮಂದಹಾಸ ಮೂಡಿದ್ದು, ರೈತರು ಜಮೀನುಗಳತ್ತ ತೆರಳಿ ಕೃಷಿ ಕಾಯಕವನ್ನು ಬಿರುಸುಗೊಳಿಸಿದ್ದಾರೆ.

ವಾಣಿಜ್ಯ ಬೆಳೆಯಾದ ಹೊಗೆಸೊಪ್ಪು ನಾಟಿಗೆ ರಾಮನಾಥಪುರ ಭಾಗದಲ್ಲಿ ಮಳೆಯಿಲ್ಲದೆ, ಸಸಿ ಮಡಿ ಬೆಳೆಸಿದ್ದ ತಂಬಾಕು ಗಿಡಗಳು ಅತಿಯಾಗಿ ಬೆಳೆದು ಕರಿಕಡ್ಡಿ ಕಾಯಿಲೆ, ಕೀಟಬಾಧೆಗೆ ತುತ್ತಾಗಿ ನಾಶವಾಗುವ ಹಂತಕ್ಕೆ ತಲುಪಿದ್ದವು. ಕೆಲ ದಿನಗಳ ಹಿಂದೆ ಒಂದೆರೆಡು ಸಲ ಬಿದ್ದ ಮಳೆಗೆ ನಾಟಿಯಾಗಿದ್ದ ಸಸಿಗಳು ಸಹ, ಜಮೀನಿನಲ್ಲಿ ಶೀತಾಂಶವಿಲ್ಲದೆ ಬಿಸಿಲಿನ ತಾಪಕ್ಕೆ ಒಣಗುತ್ತಿದ್ದವು.

‘ಇದೀಗ ತಡವಾಗಿ ವರ್ಷಧಾರೆಯಾಗಿದ್ದು, ಸಕಾಲದಲ್ಲಿ ತಂಬಾಕು ನಾಟಿಗೆ ಹಿನ್ನಡೆಯಾಗಿದೆ. ಇದರಿಂದ ಇಳುವರಿ ಪ್ರಮಾಣವೂ ತಗ್ಗಲಿದೆ. ಈ ವೇಳೆಗಾಗಲೇ ನಾಟಿ ಮುಗಿಯಬೇಕಿತ್ತು. ಕಟ್ಟೇಪುರ ನಾಲಾ ಪ್ರದೇಶದಲ್ಲಿ ನಾಟಿ ಮಾಡುವ ಸಮಯವೂ ಮೀರಿದ್ದು, ಈ ಸಲ ಅಪಾರ ರೈತರು ತಂಬಾಕು ಬೆಳೆ ನಷ್ಟ ಅನುಭವಿಸಬೇಕಾದ ಸ್ಥಿತಿ ತಲೆದೋರಿದೆ’ ಎನ್ನುತ್ತಾರೆ ಸರಗೂರಿನ ಹೊಗೆಸೊಪ್ಪು ಬೆಳೆಗಾರ ಮಂಜೇಗೌಡ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು