ಖಶೋಗ್ಗಿ ಹತ್ಯೆ ಪ್ರಕರಣ: ಇಬ್ಬರು ಸೌದಿ ಪ್ರಜೆಗಳ ಬಂಧನ ಕೋರಿ ಅರ್ಜಿ

7

ಖಶೋಗ್ಗಿ ಹತ್ಯೆ ಪ್ರಕರಣ: ಇಬ್ಬರು ಸೌದಿ ಪ್ರಜೆಗಳ ಬಂಧನ ಕೋರಿ ಅರ್ಜಿ

Published:
Updated:
Deccan Herald

ಇಸ್ತಾಂಬುಲ್‌: ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌದಿ ಅರೇಬಿಯಾದ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರ ಇಬ್ಬರು ಆಪ್ತರ ವಿರುದ್ಧ ಬಂಧನ ವಾರಂಟ್‌ ಹೊರಡಿಸುವಂತೆ ಟರ್ಕಿ ಕೋರಿದೆ.

ಸೌದಿ ಪ್ರಜೆಗಳಾದ ಅಹಮ್ಮದ್‌ ಅಲ್‌ ಅಸ್ಸರಿ ಮತ್ತು ಸೌದ್‌ ಅಲ್‌ ಖಹ್ತನಿ ವಿರುದ್ಧ ಬಂಧನ ವಾರಂಟ್‌ ಹೊರಡಿಸುವಂತೆ ಕೋರಿ ಇಸ್ತಾಂಬುಲ್‌ನ ಸರ್ಕಾರಿ ವಕೀಲರ ಕಚೇರಿಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

 ಈ ಇಬ್ಬರು ಖಶೋಗ್ಗಿ ಹತ್ಯೆಯ ಸೂತ್ರಧಾರರು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !