ಏಡ್ಸ್‌ಗೆ ಚಿಕಿತ್ಸೆ: ಬಹುಪಾಲು ‍ಔಷಧಿ ಭಾರತದಿಂದಲೇ ಪೂರೈಕೆ

ಶುಕ್ರವಾರ, ಜೂನ್ 21, 2019
24 °C

ಏಡ್ಸ್‌ಗೆ ಚಿಕಿತ್ಸೆ: ಬಹುಪಾಲು ‍ಔಷಧಿ ಭಾರತದಿಂದಲೇ ಪೂರೈಕೆ

Published:
Updated:

ವಿಶ್ವಸಂಸ್ಥೆ(ಪಿಟಿಐ): ಏಡ್ಸ್‌ಗೆ ಚಿಕಿತ್ಸೆ ನೀಡುವ ಔಷಧಿಯನ್ನು ಈಗ ಭಾರತವೇ ಬಹುಪಾಲು ‍ಪೂರೈಸುತ್ತಿದೆ.

ಆ್ಯಂಟಿ ರಿಟ್ರೊವೈರಲ್ ಔಷಧಿಯನ್ನು ಜಗತ್ತಿನ ಒಟ್ಟು ಮೂರನೇ ಎರಡರಷ್ಟು ಭಾರತವೇ ಪೂರೈಸುವ ಮೂಲಕ ಏಡ್ಸ್‌ ನಿಯಂತ್ರಿಸುವ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

‘ಭಾರತದ ಫಾರ್ಮಾಸುಟಿಕಲ್‌ ಉದ್ಯಮವು ಜಾಗತಿಕವಾಗಿ ಉಪಯೋಗಿಸುವ ಆ್ಯಂಟಿ ರಿಟ್ರೊವೈರಲ್ ಔಷಧಿಯನ್ನು ಅಪಾರ ಪ್ರಮಾಣದಲ್ಲಿ ಪೂರೈಸುತ್ತಿದೆ. ಇದರಿಂದ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವಾಗುತ್ತಿದೆ. ಈ ಮೂಲಕ ಎಚ್‌ಐವಿ ನಿಯಂತ್ರಿಸುವ ವಿಷಯದಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಮಿಷನ್‌ನ ಕಾರ್ಯದರ್ಶಿ ಪೌಲೋಮಿ ತ್ರಿಪಾಠಿ ಇಲ್ಲಿ ನಡೆದ ಸಾಮಾನ್ಯ ಅಧಿವೇಶನದಲ್ಲಿ ತಿಳಿಸಿದ್ದಾರೆ.

‘ಆದರೆ, 2030ರ ವೇಳೆಗೆ ಏಚ್‌ಐವಿ ನಿರ್ಮೂಲನೆ ಮಾಡುವ ಗುರಿ ಸಾಧಿಸಲು ತೊಡಕುಗಳಿವೆ. 1995ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಎಚ್‌ಐವಿ ರೋಗಿಗಳಿದ್ದರು. ಈಗ ರೋಗಿಗಳ ಸಂಖ್ಯೆ ಶೇಕಡ 80ರಷ್ಟು ಕಡಿಮೆಯಾಗಿದೆ. ಜತೆಗೆ ಈ ಕಾಯಿಲೆಯಿಂದ ಸಾವಿಗೀಡಾಗುವವರ ಸಂಖ್ಯೆಯಲ್ಲೂ ಕಡಿಮೆಯಾಗಿದೆ. ಕ್ಷಯ ರೋಗದಿಂದ ಸಾವಿಗೀಡಾಗುವವರ ಸಂಖ್ಯೆಯಲ್ಲೂ ಶೇಕಡ 84ರಷ್ಟು ಇಳಿಮುಖವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !