ಭಾನುವಾರ, ಜೂಲೈ 5, 2020
28 °C

ಪರೀಕ್ಷೆಗಳಲ್ಲಿ ಅಂಗವಿಕಲರಿಗೆ ಒಂದು ಗಂಟೆ ಹೆಚ್ಚು ಅವಧಿ

ಸಂದೇಶ್ ಎಂ ಎಸ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉನ್ನತ ಶಿಕ್ಷಣ ಸಂಸ್ಥೆಗಳು ನಡೆಸುವ ಮೂರು ಗಂಟೆಗಳ ಅವಧಿಯ ಪರೀಕ್ಷೆಗಳಲ್ಲಿ ಅಂಗ ವಿಕಲರಿಗೆ ಒಂದು ಗಂಟೆ ಹೆಚ್ಚುವರಿ ಪರಿಹಾರಾತ್ಮಕ ಸಮಯ ನೀಡಬೇಕು ಎಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ(ಯುಜಿಸಿ) ಸೂಚನೆ ನೀಡಿದೆ.

ಅಂಗವಿಕಲರು ಸ್ವತಃ ಅಥವಾ ಬರಹಗಾರರ ಮೂಲಕ ಉತ್ತರ ಬರೆಸುವುದಾದರೂ ಈ ಅವಕಾಶ ಕಲ್ಪಿಸಬೇಕು ಎಂದು ಯುಜಿಸಿ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.

‘ಬೆಂಚ್‌ಮಾರ್ಕ್‌ ಡಿಸೆಬಿಲಿಟಿ’ ಯವರಿಗೆ ಈ ಸೌಲಭ್ಯ ಸಿಗುತ್ತದೆ. ಇದಕ್ಕಾಗಿ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಮಾತ್ರ ಬರಹಗಾರರನ್ನು ಬಳಸಿಕೊಳ್ಳಲು ಸಾಧ್ಯ.  ಒಂದು ಗಂಟೆ ಅವಧಿ ಪರೀಕ್ಷೆಯಲ್ಲಿ ಹೆಚ್ಚುವರಿ ಸಮಯ 20 ನಿಮಿಷಗಳಿಗಿಂತಲೂ ಕಡಿಮೆ ಇರಬಾರದು. ಒಂದು ವೇಳೆ ಪರೀಕ್ಷೆ ಒಂದು ಗಂಟೆಗಿಂತಲೂ ಕಡಿಮೆ ಅವಧಿಯದ್ದಾಗಿದ್ದರೆ, ಹೆಚ್ಚುವರಿ ಸಮಯ ಐದು ನಿಮಿಷಕ್ಕಿಂತ ಕಡಿಮೆ ಇರಬಾರದು ಎಂದು ಹೇಳಿದೆ.

‘ಯುಜಿಸಿಯ ಈ ನಿರ್ಧಾರ ಉತ್ತಮವಾದುದು. ಇದು ನಮ್ಮ ಅತ್ಯಂತ ಹಳೆಯ ಬೇಡಿಕೆಯೂ ಆಗಿತ್ತು. ಮೂರು ಗಂಟೆ ಅವಧಿಯ ಪರೀಕ್ಷೆಯಲ್ಲಿ ಪ್ರಶ್ನೆಗೆ ಉತ್ತರವನ್ನು ಯೋಚಿಸಿ, ಅದನ್ನು ಬರಹಗಾರನಿಗೆ ತಿಳಿಸಿ ಬರೆಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಒಂದು ಗಂಟೆ ಹೆಚ್ಚುವರಿ ಸಮಯ ನೀಡಲು ಸುತ್ತೋಲೆ ಹೊರಡಿಸಿರುವುದರಿಂದ ಬಹಳಷ್ಟು ಅನುಕೂಲವಾಗುತ್ತದೆ’ ಎಂದು ದೃಷ್ಟಿಹೀನ ಮುನಿಯಪ್ಪ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು