ಪುಲ್ವಾಮಾ ದಾಳಿ: ವಿಶ್ವಸಂಸ್ಥೆ ಮಧ್ಯಪ್ರವೇಶಕ್ಕೆ ಪಾಕಿಸ್ತಾನ ಮನವಿ

ಶನಿವಾರ, ಮೇ 25, 2019
32 °C

ಪುಲ್ವಾಮಾ ದಾಳಿ: ವಿಶ್ವಸಂಸ್ಥೆ ಮಧ್ಯಪ್ರವೇಶಕ್ಕೆ ಪಾಕಿಸ್ತಾನ ಮನವಿ

Published:
Updated:
Prajavani

ಇಸ್ಲಾಮಾಬಾದ್‌: ಪುಲ್ವಾಮಾ ದಾಳಿ ನಂತರ ಭಾರತದೊಂದಿಗೆ ಸಂಬಂಧ ಸಂಪೂರ್ಣ ಹದಗೆಟ್ಟಿದ್ದು, ಉಭಯ ದೇಶಗಳ ನಡುವೆ ಮಾತುಕತೆ ಏರ್ಪಡಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು ಎಂದು ಪಾಕಿಸ್ತಾನ ಮನವಿ ಮಾಡಿದೆ.

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ಅವರಿಗೆ ಪಾಕಿಸ್ತಾನ ವಿದೇಶಾಂಗ ಸಚಿವ ಮೊಹಮ್ಮದ್‌ ಖುರೇಶಿ ಈ ಕುರಿತು ಸೋಮವಾರ ಪತ್ರ ಕಳುಹಿಸಿದ್ದಾರೆ.

‘ಇದು ಬಹಳ ತುರ್ತಿನ ವಿಷಯವಾಗಿದೆ. ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಭಾರತೀಯ ಪಡೆಗಳು ಪಾಕಿಸ್ತಾನದ ಮೇಲೆ ದಾಳಿ ಮಾಡುವ ಭೀತಿ ಇದೆ. ಈ ನಿಟ್ಟಿನಲ್ಲಿ, ಉಭಯ ದೇಶಗಳ ನಡುವಿನ ಸಂಘರ್ಷ ವಾತಾವರಣವನ್ನು ಕಡಿಮೆ ಮಾಡಿ, ಮಾತುಕತೆಗೆ ವೇದಿಕೆ ಸಿದ್ಧಗೊಳಿಸಬೇಕು’ ಎಂದು ಅವರು ವಿಶ್ವಸಂಸ್ಥೆಯನ್ನು ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !