ಸೋಮವಾರ, ಏಪ್ರಿಲ್ 12, 2021
26 °C

ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ ರೂಬಿಕ್ ಕ್ಯೂಬ್ ಜೋಡಿಸಿದ ಬಾಲಕಿ | 13ನೇ ವಯಸ್ಸಿಗೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸಾಧನೆ

ಇಂಧೋರ್: 13 ವರ್ಷದ ಬಾಲಕಿ ತನಿಷ್ಕಾ ಸುಜಿತ್ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ರೂಬಿಕ್ ಕ್ಯೂ ಪಜಲ್ ಜೋಡಿಸುವ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಬರೆದಿದ್ದಾರೆ. 11ನೇ ವಯಸ್ಸಿಗೆ 10ನೇ ತರಗತಿ ಮತ್ತು 12ನೇ ವಯಸ್ಸಿಗೆ 12ನೇ ತರಗತಿ ಪಾಸ್ ಮಾಡಿದ ಹೆಗ್ಗಳಿಕೆ ಕೂಡ ತನಿಷ್ಕಾ ಅವರಿಗಿದೆ. 13ನೇ ವಯಸ್ಸಿಗೆ ಇದೀಗ ದೇವಿ ಅಹಿಲ್ಯಾ ವಿಶ್ವ ವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.