ರಾಯಚೂರಿನ ಜಹೀರಾಬಾದ್ ಬಡಾವಣೆ ನಿವಾಸಿ ಹುಲಗಪ್ಪ ಹಣಮಂತಪ್ಪ ಮ್ಯಾದರ್ ಅವರು ಟ್ಯಾಗೋರ್ ಸ್ಮಾರಕ ಮಹಾವಿದ್ಯಾಲಯದಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದರು. ನಿವೃತ್ತಿಯಾಗಿ ಏಳು ವರ್ಷಗಳಾದರೂ ಚಿತ್ರಕಲೆಯಲ್ಲಿ ತಮ್ಮ ಸಾಧನೆ ಮಾಡುವುದನ್ನು ಮಾತ್ರ ಬಿಟ್ಟಿಲ್ಲ. ಚುಕ್ಕಿ ಚಿತ್ರಗಳನ್ನು ಇಳಿಸುವುದು ಇವರಿಗೆ ಕರಗತವಾಗಿರುವ ವಿದ್ಯೆ.