ಶನಿವಾರ, ಅಕ್ಟೋಬರ್ 16, 2021
22 °C

Watch: ಗರಿ ಗರಿ ನಿಪ್ಪಟ್ಟನ್ನು ಮಾಡುವ ವಿಧಾನ

ನಿಪ್ಪಟ್ಟು

ಬೇಕಾಗುವ ಸಾಮಗ್ರಿಗಳು: ಅಕ್ಕಿಹಿಟ್ಟು – ಅರ್ಧ ಕಪ್‌, ರವೆ – 1 ಚಮಚ, ಮೈದಾ – 1 ಚಮಚ, ಹುರಿಗಡಲೆ – 2 ಚಮಚ, ಶೇಂಗಾಬೀಜ – 2 ಚಮಚ, ಒಣಕೊಬ್ಬರಿ ತುರಿ – ಸ್ವಲ್ಪ, ಬಿಳಿಎಳ್ಳು – 2 ಚಮಚ, ಮೆಣಸು – 3 ಅಥವಾ ಖಾರದ ಪುಡಿ – 1 ಚಮಚ, ಕರಿಬೇವು, ಜೀರಿಗೆ– 1 ಚಮಚ, ಎಣ್ಣೆ– ಕರಿಯಲು, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಮಿಕ್ಸಿ ಜಾರಿಗೆ ಹುರಿಗಡಲೆ, ಶೇಂಗಾ, ಒಣ ಮೆಣಸು, ಕಾಯಿತುರಿ ಹಾಕಿ ನೀರು ಸೇರಿಸದೆ ತರಿತರಿಯಾಗಿ ರುಬ್ಬಿಕೊಳ್ಳಿ. ಅದನ್ನು ಪಾತ್ರೆಗೆ ಹಾಕಿ ಅದಕ್ಕೆ ಅಕ್ಕಿಹಿಟ್ಟು, ರವೆ, ಮೈದಾಹಿಟ್ಟು, ಕರಿಬೇವು, ಜೀರಿಗೆ ಎಲ್ಲವನ್ನೂ ಸೇರಿಸಿ ಕೈಯಲ್ಲಿ ಚೆನ್ನಾಗಿ ಕಲೆಸಿ. ಕಲೆಸುವಾಗ ಒಂದು ಚಮಚ ಎಣ್ಣೆ ಸೇರಿಸಿಕೊಳ್ಳಬೇಕು, ಇದಾದ ಮೇಲೆ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ನಂತರ ಆ ಹಿಟ್ಟನ್ನು ಉಂಡೆ ಮಾಡಿಕೊಂಡು ಅಗಲವಾಗಿ ತಟ್ಟಿಕೊಳ್ಳಿ. ಪ್ಲಾಸ್ಟಿಕ್ ಕವರ್ ಒಂದಕ್ಕೆ ಎಣ್ಣೆ ಸವರಿ ಅದರಲ್ಲಿ ನಿಪ್ಪಟ್ಟಿನ ಹಿಟ್ಟನ್ನು ಇಟ್ಟು ಕಲ್ಲಿನ ಸಹಾಯದಿಂದ ಒತ್ತಿ, ಇದು ನಿಪ್ಪಟ್ಟಿನ ಆಕಾರಕ್ಕೆ ಬಂದಿರುತ್ತದೆ. ಎಣ್ಣೆ ಕಾದ ಮೇಲೆ ನಿಪ್ಪಟ್ಟನ್ನು ಸಣ್ಣ ಉರಿಯಲ್ಲಿ ಇರಿಸಿಕೊಂಡು ಕರಿಯಿರಿ.

ಲೇಖಕಿ: ‘ವೈಷ್ಣವಿ ಚಾನೆಲ್’ ಯೂಟ್ಯೂಬ್ ಚಾನೆಲ್‌ನ ನಿರ್ವಾಹಕಿ

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...