ಶುಕ್ರವಾರ, ಜೂನ್ 25, 2021
24 °C

ನೋಡಿ: ತಾಯಿ ಹುಲಿ ಜೊತೆ ಮರಿ ಹುಲಿಗಳ ಆಟ, ಸಿಂಹಿಣಿಯ ಜೊತೆ ಮರಿ ಸಿಂಹಗಳ ಘನ ಗಾಂಭೀರ್ಯದ ನಡಿಗೆ

ಪ್ರಕೃತಿ ತನ್ನ ಮಡಿಲಲ್ಲಿ ನಿಬ್ಬೆರಗಾಗಿಸುವ ಸೌಂದರ್ಯ ಮತ್ತು ಕೌತುಕಗಳನ್ನು ಅಡಗಿಸಿಕೊಂಡಿರುತ್ತದೆ. ಅವುಗಳನ್ನು ಹುಡುಕಿಕೊಂಡು ತೆರಳುವ ಹವ್ಯಾಸಿಗಳಿಗೆ ಅದು ಕಣ್ಣಿಗೆ ಬೀಳುತ್ತದೆ. 

ಮರಿ ಹುಲಿಯು ತಾಯಿ ಜೊತೆ ಆಟವಾಡುವ ವಿಡಿಯೊವನ್ನು ಬೆಸ್ಟ್ ಆಫ್ ನೇಚರ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಗಮನ ಸೆಳೆಯುತ್ತಿದೆ. ತಾಯಿ ಹುಲಿ ಬಳಿ ಬರುವ ಮರಿ ಹುಲಿ, ಪ್ರೀತಿಯಿಂದ ಮುಖಕ್ಕೆ ಮುಖ ತಾಗಿಸಿ ಮುಂದೆ ಬಂದು ಕೂರುತ್ತದೆ.

ಮತ್ತೊಂದು ವಿಡಿಯೋದಲ್ಲಿ ಸಿಂಹಿಣಿಯ ಜೊತೆ ಎರಡು ಮರಿ ಸಿಂಹಗಳು ಘನ ಗಾಂಭೀರ್ಯದಿಂದ ನಡೆದುಹೋಗುತ್ತಿರುವುದು ಆಕರ್ಷಕವಾಗಿದೆ.