ಬುಧವಾರ, ಜೂನ್ 16, 2021
23 °C

ಬೆಂಗಳೂರು ತಲುಪಿದ 120 ಟನ್‌ ಆಮ್ಲಜನಕ

ಬೆಂಗಳೂರು: ರಾಜ್ಯದಲ್ಲಿ ಆಮ್ಲಜನಕ ಸಿಗದೆ ಕೋವಿಡ್‌ ರೋಗಿಗಳು ಸಾವಿನ ಕದ ತಟ್ಟುತ್ತಿರುವ ಮಧ್ಯೆಯೇ, ಒಡಿಶಾದ ಟಾಟಾನಗರದಿಂದ ಸೋಮವಾರ ನಸುಕಿನ 3 ಗಂಟೆಗೆ ಹೊರಟ ಒಟ್ಟು 120 ಟನ್‌ ದ್ರವೀಕೃತ ವೈದ್ಯಕೀಯ ಆಮ್ಲಜನಕದ ಕಂಟೈನರ್‌ಗಳನ್ನು ಹೊತ್ತ ರೈಲು ಮಂಗಳವಾರ ಬೆಳಿಗ್ಗೆ ವೈಟ್‌ಫೀಲ್ದ್‌ ತಲುಪಿದೆ.

ರೈಲು ಅತ್ಯಂತ ತುರ್ತು ಆಗಿ ತಲುಪಬೇಕೆಂಬ ಉದ್ದೇಶದಿಂದ ಗ್ರೀನ್‌ ಕಾರಿಡಾರ್‌ ಕಲ್ಪಿಸಲಾಗಿತ್ತು. ತಲಾ 20 ಟನ್‌ನಂತೆ ದ್ರವೀಕೃತ ವೈದ್ಯಕೀಯ ಆಮ್ಲಜನಕ ತುಂಬಿದ ಆರು ಕಂಟೈನರ್‌ಗಳ ರೈಲು ವೈಟ್‌ಫೀಲ್ಡ್‌ನಲ್ಲಿರುವ ಇನ್‌ಲ್ಯಾಂಡ್‌ ಕಂಟೈನರ್‌ ಡಿಪೋ (ಐಸಿಡಿ) ತಲುಪಿದೆ.