ಶುಕ್ರವಾರ, ಜನವರಿ 27, 2023
17 °C

VIDEO | ಐಕ್ಯತಾ ಸಮಾವೇಶ: ಕೋಮುವಾದದ ವಿರುದ್ಧ ದಲಿತರ ಒಗ್ಗಟ್ಟಿನ ಮಂತ್ರ

ದಲಿತ ಸಂಘರ್ಷ ಸಮಿತಿಯಿಂದ ಚದುರಿ ಹೋಗಿದ್ದ 10 ಸಂಘಟನೆಗಳು ಮತ್ತೆ ಒಗ್ಗೂಡಿ ಸಂಘಟಿಸಿದ್ದ ದಲಿತ ಐಕ್ಯತಾ ಸಮಾವೇಶಕ್ಕೆ ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಜನ ಸಾಕ್ಷಿಯಾದರು.ಕೋಮುವಾದಿ ಶಕ್ತಿಗಳು ಹಾಗೂ ರಾಜಕೀಯ ಪಕ್ಷಗಳ ಜತೆ ನಂಟು ಹೊಂದಿರುವವರನ್ನು ಹೊರತುಪಡಿಸಿ ಎಲ್ಲ ಸಮಾನಮನಸ್ಕ ದಲಿತ ಸಂಘಟನೆಗಳು ಮುಂದಿನ ದಿನಗಳಲ್ಲಿ ಒಗ್ಗೂಡಿ ಹೋರಾಡುವ ನಿರ್ಧಾರವನ್ನು ದಲಿತ ನಾಯಕರು ಕೈಗೊಂಡರು. ದೌರ್ಜನ್ಯದ ವಿರುದ್ಧ ಹೋರಾಡುವುದರ ಜೊತೆಗೆ, ಸಂವಿಧಾನ ರಕ್ಷಣೆಗೂ ನಾವೆಲ್ಲ ಒಗ್ಗೂಡಿ ಹೋರಾಡಬೇಕಿದೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗಳು, ರಮಾಬಾಯಿ ಅಂಬೇಡ್ಕರ್ ಕರೆ ನೀಡಿದರು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...