ಭಾನುವಾರ, ಅಕ್ಟೋಬರ್ 24, 2021
28 °C

ವಿಡಿಯೊ: ಮೈಸೂರು ಅರಮನೆಗೆ ಬಂದ ಗಜಪಡೆ| ಗರಿಗೆದರಿದ ದಸರೆ ಸಂಭ್ರಮ

ಮೈಸೂರು:  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಗರಿಗೆದರಿದೆ. ದಸರಾ ಗಜಪಡೆಗೆ ಮಂಗಳ ವಾದ್ಯಗಳು, ಪೂರ್ಣಕುಂಭದ ಮೂಲಕ ಸ್ವಾಗತ ಕೋರಲಾಗಿದೆ. ಅರಣ್ಯ‌ಭವನದಿಂದ ಅರಮನೆಯತ್ತ ಕಾಲ್ನಡಿಗೆಯಲ್ಲಿ ಸಾಗಿದ ಎಂಟು ಆನೆಗಳನ್ನೊಳಗೊಂಡ ಗಜ ಪಡೆಯ ನಡಿಗೆಯನ್ನು ಮೈಸೂರಿಗರು ಕಣ್ತುಂಬಿಕೊಂಡರು. ಅರಮನೆಯಲ್ಲಿ ಭವ್ಯ, ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.