ಶುಕ್ರವಾರ, ಆಗಸ್ಟ್ 14, 2020
28 °C

ಧಾರವಾಡ | ಪುನರ್ವಸು ಮಳೆ ಅಬ್ಬರ

ಧಾರವಾಡ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪುನರ್ವಸು ಮಳೆ ಅಬ್ಬರಿಸುತ್ತಿದೆ.

ಗುರುವಾರ ಬೆಳಿಗ್ಗೆಯಿಂದ ಏಕೋಪ್ರಕಾರ ಮಳೆ ಸುರಿಯುತ್ತಲೇ ಇದೆ. ಮಲೆನಾಡು ಪ್ರದೇಶಗಳಾದ ಕಲಘಟಗಿ, ಅಳನಾವರ ಭಾಗದಲ್ಲೂ ಉತ್ತಮ ಮಳೆ ಸುರಿಯುತ್ತಿದೆ. ಕುಂದಗೋಳ, ನವಲಗುಂದ ಹಾಗೂ ಅಣ್ಣಿಗೇರಿಯಲ್ಲಿ ಸಾಧಾರಣವಾಗಿ ಮಳೆಯಾಗುತ್ತಿರುವ ವರದಿಯಾಗಿದೆ.