ಬುಧವಾರ, ಆಗಸ್ಟ್ 4, 2021
23 °C

ಟ್ರಾಫಿಕ್‌ ಜಾಗೃತಿ ಮೂಡಿಸಲು ವಿಶಿಷ್ಟ ಪ್ರಯತ್ನ ಮಾಡುತ್ತಿರುವ ಯುವತಿಯ ವಿಡಿಯೊ ವೈರಲ್‌

ಮಧ್ಯಪ್ರದೇಶದ ಇಂದೋರ್‌ನಲ್ಲಿ ಎಂಬಿಎ ವಿದ್ಯಾರ್ಥಿನಿ ಶುಭಿ ಜೈನ್‌ ಎಂಬುವವರು ಟ್ರಾಫಿಕ್‌  ಕುರಿತು ವಿಶಿಷ್ಟ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ವಿಭಿನ್ನ ರೀತಿಯ ಆಂಗಿಕ ಸಂಜ್ಞೆಗಳನ್ನು ನೀಡುತ್ತ ಟ್ರಾಫಿಕ್‌ ನಿಯಮಗಳನ್ನು ಪಾಲಿಸುವಂತೆ ಅವರು ವಾಹನ ಸವಾರರಲ್ಲಿ ಮನವಿ ಮಾಡುತ್ತಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದ್ದು, ವಿದ್ಯಾರ್ಥಿನಿ ಶುಭಿ ಜೈನ್‌ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.