ಮೈಸೂರು ನಗರದ ಮೀನು ಪ್ರಿಯರು ತಾಜಾ ಮೀನಿನ ರುಚಿಯನ್ನು ಸವಿಯಬೇಕೆಂದರೆ ಈ ಮೊದಲು ಕೆ.ಆರ್.ಎಸ್, ಬಲಮುರಿ, ಎಡಮುರಿ ಮತ್ತಿತರಕಡೆಗಳಿಗೆ ಅಥವಾ ಹೋಟೆಲ್ಗಳ ಮೊರೆ ಹೋಗುತ್ತಿದ್ದರು. ಆದರೆ, ಈಗ ಮೈಸೂರು ನಗರದಲ್ಲೇ ಹಲವೆಡೆ ಉತ್ತಮ ಗುಣಮಟ್ಟದ ಮೀನು ಹಾಗೂ ಮೀನಿನ ಖಾದ್ಯಗಳು ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ.

ಅತ್ಯುತ್ತಮ ಪೌಷ್ಟಿಕಾಂಶ ಆಹಾರವಾಗಿರುವ ಮೀನು ಮತ್ತು ಮೀನಿನ ಖಾದ್ಯಗಳನ್ನು ಸಾರ್ವಜನಿಕರಿಗೆ ಯೋಗ್ಯ ಬೆಲೆಯಲ್ಲಿ ಮಾರಾಟ ಮಾಡುವ ಮೂಲಕ ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ಮೀನುಪ್ರಿಯರ ಬೇಡಿಕೆಯನ್ನು ತಣಿಸುತ್ತಿದೆ.

ಮಹಾಮಂಡಳಿಯು ಮೀನು ಮಾರಾಟ ಮಳಿಗೆ (ಕಿಯೋಸ್ಕ್)ಗಳನ್ನು ಸ್ಥಾಪಸಿದ್ದು, ಏಜೆಂಟರ ಮೂಲಕ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ಪ್ರಸ್ತುತ ಭಾರತೀಯ ದೊಡ್ಡಗೆಂಡೆ ಜಾತಿಯ ಮೀನುಗಳಾದ ಕಾಟ್ಲಾ, ರೋಹು, ಮೃಗಾಲ್, ಸಾಮಾನ್ಯಗೆಂಡೆ, ಹುಲ್ಲುಗೆಂಡೆ, ರೂಪ್ಚಂದ್ ಮತ್ತು ತಿಲಾಪಿಯಾ ಮೀನನ್ನು ಮಾರಾಟ ಮಾಡುತ್ತಿದೆ. ಅಲ್ಲದೇ, ಕೆಲವು ಸಮುದ್ರದ ಮೀನುಗಳನ್ನೂ ಮಾರಾಟ ಮಾಡಲೂ ಅವಕಾಶ ನೀಡಲಾಗಿದೆ.

ಮೈಸೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಕಿಯೊಸ್ಕ್ಗಳನ್ನು ಸ್ಥಾಪಿಸಲಾಗಿದ್ದು ವಾರ್ಷಿಕ 1800 ಮೆಟ್ರಿಕ್ ಟನ್ ಮೀನು ಮಾರಾಟ ಗುರಿ ಹೊಂದಲಾಗಿದೆ.

ಮಹಾಮಂಡಳಿಯು ಮೈಸೂರು ನಗರದಲ್ಲಿ ಒಟ್ಟು 44 ಕಿಯೊಸ್ಕ್ಗಳನ್ನು ಸ್ಥಾಪಿಸಿದ್ದು. ಅವುಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ 21 ಕಿಯೊಸ್ಕ್ಗಳಿವೆ. ಮೈಸೂರಿನಲ್ಲಿ ವಾರಕ್ಕೆ 6ರಿಂದ 7 ಟನ್ ಮೀನು ಮಾರಾಟವಾಗುತ್ತಿದ್ದು ವರ್ಷಕ್ಕೆ ಸುಮಾರು ₹4 ಕೋಟಿ ವಹಿವಾಟನ್ನು ನಡೆಸುತ್ತದೆ.

ಇಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಮೀನನ್ನು ಹೈಜನಿಕ್ ಆಗಿ ಶೀತಲಯಂತ್ರದಲ್ಲಿ ಇಡಲಾಗುತ್ತದೆ. ಅಲ್ಲದೇ, ಎಲೆಕ್ಟ್ರಾನಿಕ್ ತಕ್ಕಡಿಯಲ್ಲಿ ಮೀನನ್ನು ತೂಗುವುದರಿಂದ ಗ್ರಾಹಕರಿಗೆ ವಂಚನೆ ಮಾಡಲು ಏಜೆಂಟರ್ಗಳಿಗೆ ಅವಕಾಶವೇ ಇಲ್ಲವಾಗಿದೆ.

ಅಲ್ಲದೇ, ಮೀನಿನ ತ್ಯಾಜ್ಯವನ್ನು ಮೈಸೂರು ಮಹಾನಗರ ಪಾಲಿಕೆಯ ಸೂಚನೆಯಂತೆ ಸೂಕ್ತವಾಗಿ ವಿಲೇವಾರಿ ಮಾಡಲಾಗುತ್ತಿದ್ದು, ಮಹಾಮಂಡಳಿಯ ಮೀನು ಮಾರಾಟ ಮಳಿಗೆಗಳು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿವೆ.

ಮೀನು ಪ್ರಿಯರನ್ನು ಆಕರ್ಷಿಸಲು ಕಿಯೊಸ್ಕ್ಗಳಲ್ಲಿ ಸಂಜೆ ಸಮುದ್ರದ ಮೀನುಗಳೂ ಸೇರಿದಂತೆ ವಿವಿಧ ಖಾದ್ಯಗಳನ್ನೂ ಮಾರಾಟ ಮಾಡಲಾಗುತ್ತಿದೆ. ಫಿಶ್ ಕಬಾಬ್, ಬಂಗುಡೆ ಫ್ರೈ, ಅಂಜಲ್ ಫಿಶ್ ಫ್ರೈ, ಬೋನ್ಲೆಸ್, ಸೀಗಡಿ, ವೈಟ್ ಪಾಂಪ್ರೆಟ್ (ಬಿಳಿ ಮಾಂಜಿ), ಕಾಣೆ ಮೀನು, ಸಿಲ್ವರ್ ಫಿಶ್, ಏಡಿ, ಏಡಿ ಲಾಲಿಪಪ್ ಸೇರಿದಂತೆ ಚಿಕನ್ ಕಬಾಬ್ ಅನ್ನೂ ಹಲವು ಕಿಯೋಸ್ಕ್ಗಳಲ್ಲಿ ಗ್ರಾಹಕರಿಗೆ ಉಣಬಡಿಸಲಾಗುತ್ತದೆ.

ಕುಕ್ಕರಹಳ್ಳಿ ಕೆರೆ ಬಳಿ ಇರುವ ಕಿಯೋಸ್ಕ್ನಲ್ಲಿ ಸದಾ ಜನಜಂಗುಳಿ ತುಂಬಿರುತ್ತದೆ. ಸಂಜೆ ಇಲ್ಲಿಗೆ ವಾಯುವಿಹಾರಕ್ಕೆ ಬರುವರಲ್ಲಿ ಅನೇಕರು ಮೀನಿನ ಪದಾರ್ಥಗಳನ್ನು ಸವಿದೇ ಹೋಗುತ್ತಾರೆ. ಅಲ್ಲದೇ, ಸರಸ್ವತಿಪುರಂನಲ್ಲಿರುವ, ನಂಜುಮಳಿಗೆಯಲ್ಲಿರುವ ಕಿಯೋಸ್ಕ್ ಸಹ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

ದೇವರಾಜ ಮಾರುಕಟ್ಟೆ, ನಂಜುಮಳಿಗೆ, ಹೂಟಗಳ್ಳಿ, ಎನ್.ಆರ್.ಮೊಹಲ್ಲಾ, ಹಿನಕಲ್ ಸೇರಿದಂತೆ ನಗರದ ವಿವಿಧೆಡೆ ಖಾಸಗಿಯವರೂ ಉತ್ತಮ ಮೀನುಗಳನ್ನು ಮಾರಾಟ ಮಾಡುತ್ತಿದ್ದು ಮೈಸೂರಿನಲ್ಲಿ ಮಾಂಸಾಹಾರ ಪ್ರಿಯರಿಗೆ ಮೀನು ನೆಚ್ಚಿನ ಖಾದ್ಯವಾಗಿದೆ.

ಇಳಿಮುಖವಾಗುತ್ತಿದೆ ಮಾರಾಟ

ಇತ್ತೀಚಿನ ದಿನಗಳಲ್ಲಿ ಮೀನುಗಾರರ ಸಹಕಾರ ಸಂಘಗಳಿಂದ ಸಾಕಷ್ಟು ಪ್ರಮಾಣದಲ್ಲಿ ಮೀನು ಪೂರೈಕೆಯಾಗುತ್ತಿಲ್ಲವಾದ ಕಾರಣ ಮೀನು ಮಾರಾಟ ವಹಿವಾಟು ಕುಂಠಿತವಾಗಿದೆ ಎಂದು ಕೆಲವು ಕಿಯೋಸ್ಕ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮೀನು ಸಾಕಿದವರಿಗೆ ಹಾಗೂ ಗುತ್ತಿಗೆದಾರರಿಗೆ ಹಣಕ್ಕೆ ಬದಲು ಮೀನನ್ನೇ ನೀಡುತ್ತಿದ್ದಾರೆ. ಅಲ್ಲದೇ, ಮಹಾಮಂಡಳ ಸರಿಯಾದ ಬೆಂಬಲ ಬೆಲೆಯನ್ನು ನೀಡುತ್ತಿಲ್ಲವಾದ್ದರಿಂದ ಗುತ್ತಿಗೆದಾರರು ಖಾಸಗಿಯವರಿಗೆ ಮೀನನ್ನು ಮಾರಾಟ ಮಾಡುತ್ತಿದ್ದಾರೆ. ಅವರೂ ಸ್ಪರ್ಧಾತ್ಮಕ ಬೆಲೆಗೆ ಮೀನನ್ನು ಗ್ರಾಹಕರಿಗೆ ಮಾರಾಟಮಾಡುತ್ತಿರುವುದರಿಂದ ಕಿಯೋಸ್ಕ್ಗಳಲ್ಲಿ ವ್ಯಾಪಾರ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಏಜೆಂಟರೊಬ್ಬರು.

ನೆರೆ ರಾಜ್ಯಗಳಿಂದ ಮೀನು ಪೂರೈಕೆ

ಸ್ಥಳೀಯ ಮೀನು ಉತ್ಪಾದನೆಯಿಂದ ಸಾರ್ವಜನಿಕರ ಬೇಡಿಕೆಯನ್ನು ಪೂರೈಸಲು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ದಿನ ಮೀನು ಶೇಖರಿಸಿ ಇಡಲು ಸೌಲಭ್ಯಗಳು ಇರದೇ ಇರುವ ಕಾರಣ ರಾಜ್ಯದ ಪ್ರತಿದಿನದ ಮೀನಿನ ಬೇಡಿಕೆಯ ಶೇ 60 ಭಾಗವನ್ನು ಮಹಾಮಂಡಳಿಯು ನೆರೆಯ ಆಂಧ್ರಪ್ರದೇಶದಿಂದ ಪಡೆಯುತ್ತಿದೆ. ಈ ಮೀನುಗಳ ಗುಣಮಟ್ಟ 5–6 ದಿನಗಳವರೆಗೆ ಕೆಡದಿರುವುದು ಲಾಭದ ವಿಚಾರವಾಗಿದೆ.

ಮಹಾಮಂಡಳಿಯು ಮೀನಿನ ಗಾತ್ರಕ್ಕೆ ತಕ್ಕಂತೆ ಮೀನಿನ ಮಾರಾಟ ದರವನ್ನು ಕಿಯಾಸ್ಕ್ ಏಜೆಂಟರಿಗೆ ನಿಗದಿಪಡಿಸುತ್ತದೆ. ಕಿಯಾಸ್ಕ್ ಏಜೆಂಟರು ಸಾರ್ವಜನಿಕರಿಂದ ಪ್ರತಿ ಕೆಜಿ ಮೀನಿಗೆ ₹ 20 ರ ಲಾಭಾಂಶ ಮತ್ತು ₹10 ಸ್ವಚ್ಛತಾ ಶುಲ್ಕವನ್ನು ಪಡೆಯುತ್ತಾರೆ. ಇತ್ತೀಚೆಗೆ ಖಾಸಗಿಯವರೂ ಮೀನು ಮಾರಾಟ ಮಾಡುತ್ತಿದ್ದು ಅವರಿಂದಲೂ ಪೈಪೋಟಿ ಎದುರಿಸಬೇಕಾಗಿದೆ ಎನ್ನುತ್ತಾರೆ ಮೀನುಗಾರಿಕೆ ಮಹಾಮಂಡಳಿಯ ಮಾರುಕಟ್ಟೆ ಮೇಲ್ವಿಚಾರಕ ಎಂ.ಇ.ಮಲ್ಲಿಕಾರ್ಜುನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.