ಪಿತ್ತ ಜನಕಾಂಗ ಕ್ಯಾನ್ಸರ್ ಒಂದು ಅಪಾಯದ ಸ್ಥಿತಿ. ಅನೇಕ ಪ್ರಕರಣಗಳಲ್ಲಿ ಅದು ಯಾವುದೇ ಲಕ್ಷಣಗಳನ್ನು ಹೊರಹಾಕದೇ ಒಳಗೇ ಬೆಳೆದು ಜೀವವನ್ನೇ ಬಲಿ ತೆಗೆದುಕೊಳ್ಳಬಹುದು. ಆದ್ದರಿಂದ ಯಾವುದೇ ರೀತಿಯ ಸಿರಾಸಿಸ್ನಂತಹ ಅಪಾಯ ಇರುವವರು ನಿಗದಿತ ಅವಧಿಯಲ್ಲಿ ಅಗತ್ಯ ಪರೀಕ್ಷೆಗೆ ಒಳಗಾಗುತ್ತ ಇರುವುದು ಮುಖ್ಯ.

*ಪಿತ್ತಜನಕಾಂಗದ ಬಗ್ಗೆ ತಿಳಿಸಿ.
ಹೊಟ್ಟೆಯ ಬಲ ಮೇಲ್ಭಾಗದಲ್ಲಿರುವ ಪಿತ್ತಜನಕಾಂಗ (ಲಿವರ್) ದೇಹದ ಹಲವಾರು ಸೂಕ್ಷ್ಮ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿದೆ. ಚಯಾಪಚಯ ಕ್ರಿಯೆಯನ್ನು ಸುಗಮಗೊಳಿಸುತ್ತದೆ, ಕೊಬ್ಬು ಕರಗುವಿಕೆಗೆ ಸಹಾಯ ಮಾಡುತ್ತದೆ. ಸಮತೋಲಿತ ಆಹಾರ ಸೇವನೆ, ನಿತ್ಯ ವ್ಯಾಯಾಮ, ಮದ್ಯಪಾನ–ಧೂಮಪಾನದಿಂದ ದೂರ ಇರುವುದು ಮುಂತಾದ ಕ್ರಮಗಳನ್ನು ಅನುಸರಿಸುವ ಮೂಲಕ ಪಿತ್ತಜನಕಾಂಗದ ಆರೋಗ್ಯ ಕಾಪಾಡಿಕೊಳ್ಳಬೇಕು.

*ಪಿತ್ತಜನಕಾಂಗದ ಕ್ಯಾನ್ಸರ್ ಹೇಗೆ ಬೆಳೆಯುತ್ತದೆ?
ಪಿತ್ತಜನಕಾಂಗದ (ಯಕೃತ್ತು) ಅಂಗಾಂಶದಲ್ಲಿ ಹುಟ್ಟುವ ಒಂದು ವಿಧವಾದ ಗಡ್ಡೆಯೇ ಪಿತ್ತಜನಕಾಂಗದ ಕ್ಯಾನ್ಸರ್. ಪಿತ್ತಜನಕಾಂಗದ (ಯಕೃತ್ತು) ಅಂಗಾಂಶ ದಲ್ಲಿ ಹುಟ್ಟಿ ಪಿತ್ತಜನಕಾಂಗದ ಕೋಶಗಳಿಗೆ ಹರಡಿ ಬೆಳೆಯುವ ಕ್ಯಾನ್ಸರ್ ಅನ್ನು ಪ್ರಾಥಮಿಕ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಆದರೆ ಇತರ ಅಂಗದಲ್ಲಿ ಹುಟ್ಟಿ ಪಿತ್ತಜನಕಾಂಗಕ್ಕೆ ಹರಡುವ ಕ್ಯಾನ್ಸರ್ ಪ್ರಕಾರವನ್ನು ಸ್ಥಾನಾಂತರದ ಲಿವರ್ ಕ್ಯಾನ್ಸರ್ ಎನ್ನಲಾಗುತ್ತದೆ. ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡದೇ ಹೋದಲ್ಲಿ ಇದು ಬೆಳೆದು ರೋಗಿಯನ್ನು ಬಲಿ ತೆಗೆದುಕೊಳ್ಳಬಹುದು.

*ಪಿತ್ತಜನಕಾಂಗದ ಕ್ಯಾನ್ಸರ್ಗೆ ಕಾರಣವಾಗುವ ಅಂಶಗಳು ಯಾವವು?
ಹುಟ್ಟು ನ್ಯೂನತೆಗಳು, ಅತಿಯಾದ ಮದ್ಯಪಾನ ಸೇವನೆ, ವೈರಲ್ ಹೆಪಟೈಟೀಸ್, ಹೆಪಟೈಟೀಸ್ ಬಿ ವೈರಸ್ (ಎಚ್ಬಿವಿ) ಮತ್ತು ಹೆಪಟೈಟೀಸ್ ಸಿ ವೈರಸ್ (ಎಚ್ಸಿವಿ) ಇಂಥವುಗಳಿಂದ ಉಂಟಾಗುವ ಗಂಭೀರ ಸೋಂಕು ಮುಂತಾದ ಕಾರಣಗಳಿಂದ ಪಿತ್ತಜನಕಾಂಗದ ಕ್ಯಾನ್ಸರ್ ಅಪಾಯ ಹೆಚ್ಚುವ ಸಾಧ್ಯತೆ ಇರುತ್ತದೆಂದು ಹೇಳಬಹುದು. ಆದರೆ ಈ ಸೋಂಕುಗಳಿರುವ ಎಲ್ಲರೂ ಕ್ಯಾನ್ಸರ್ಗೆ ಒಳಗಾಗುತ್ತಾರೆಂದು ಅರ್ಥವಲ್ಲ. ಕೆಲವೊಮ್ಮೆ ಇಂಥದ್ದೇ ಕಾರಣ ಎಂದು ಕಂಡುಹಿಡಿಯಲು ಸಾಧ್ಯವಾಗದೇ ಇರಬಹುದು. ಅಲ್ಲದೇ, ಬೊಜ್ಜು, ಮಧುಮೇಹ ಸಹ ಈ ಅಪಾಯವನ್ನು ಅಧಿಕಗೊಳಿಸುತ್ತದೆ.

*ಪಿತ್ತಜನಕಾಂಗದ ಕ್ಯಾನ್ಸರ್ನ ಲಕ್ಷಣಗಳಾವುವು?
ತೂಕ ನಷ್ಟ, ಹಸಿವಿನ ನಷ್ಟ, ಕೆಲವೊಮ್ಮೆ ಹೊಟ್ಟೆಯ ಭಾಗದಲ್ಲಿ ನೋವು, ಜ್ವರ, ಜಾಂಡೀಸ್(ಕಾಮಾಲೆ ರೋಗ) ಇತ್ಯಾದಿ ಲಕ್ಷಣಗಳನ್ನು ಗುರುತಿಸಬಹುದು. ಆದರೆ ಈ ಎಲ್ಲಾ ಲಕ್ಷಣಗಳು ಅಥವಾ ಇವುಗಳಲ್ಲಿ ಕೆಲವು ಲಕ್ಷಣಗಳು ಕಂಡುಬಂದ ಮಾತ್ರಕ್ಕೆ ಅದು ಕ್ಯಾನ್ಸರ್ ಎಂಬ ನಿರ್ಣಯಕ್ಕೆ ಬಾರದೇ ಮೊದಲು ತಜ್ಞರನ್ನು ಸಂಪರ್ಕಿಸಬೇಕು. ಅಲ್ಲದೇ ಈ ಕ್ಯಾನ್ಸರ್ನಲ್ಲಿ ಕೆಲವೊಮ್ಮೆ ಯಾವುದೇ ಲಕ್ಷಣಗಳು ಕಂಡುಬಾರದೇ ಇರಬಹುದು. ಸಿರಾಸಿಸ್ ನಂತಹ ಅಪಾಯವಿರುವವರು ನಿಗದಿತ ಅವಧಿಯಲ್ಲಿ ತಪಾಸಣೆಗೆ ಒಳಗಾಗಬೇಕು.

*ಪಿತ್ತಜನಕಾಂಗದ ಕ್ಯಾನ್ಸರ್ ಅನ್ನು ಹೇಗೆ ಪತ್ತೆ ಮಾಡಲಾಗುತ್ತದೆ?
ಸಾಮಾನ್ಯವಾಗಿ ಅಲ್ಟ್ರಾಸೌಂಡ್ ಸ್ಕ್ಯಾನ್ನಂತಹ ಬಿಟಿ ಇಮೇಜಿಂಗ್, ಸಿಟಿ ಸ್ಕ್ಯಾನ್, ಎಂಆರ್ಐಗಳಿಂದ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಬಹುದು.

*ಚಿಕಿತ್ಸೆಯ ಆಯ್ಕೆಗಳಾವುವು?
ಗಡ್ಡೆಯನ್ನು ಸ್ವಲ್ಪ ಸಾಮಾನ್ಯ ಪಿತ್ತಜನಕಾಂಗ ಅಂಗಾಂಶಗಳೊಂದಿಗೆ ತೆಗೆದುಹಾಕಬಹುದು. ಇದು ಅತ್ಯುತ್ತಮ ಆಯ್ಕೆ. ಆದರೆ ಪಿತ್ತಜನಕಾಂಗದ ರೋಗದಿಂದ ಅಥವಾ ಗಡ್ಡೆ ಇರುವ ಸ್ಥಳದಿಂದಾಗಿ ಅಥವಾ ಪಿತ್ತಜನಕಾಂಗಕ್ಕೆ ರಕ್ತ ಪೂರೈಸುವ ರಕ್ತನಾಳಗಳನ್ನು ಒಳಗೊಂಡಿರುವ ಸಂದರ್ಭಗಳಲ್ಲಿ ಇದು ಸಾಧ್ಯವಾಗದೇ ಇದ್ದರೆ ಬದಲಿ ಚಿಕಿತ್ಸೆಯ ಅಗತ್ಯ ಇರುತ್ತದೆ.

ಗಡ್ಡೆ ಆರಂಭಿಕ ಹಂತದಲ್ಲಿದ್ದು, ರೋಗಿಗೆ ದೀರ್ಘಕಾಲದ ಪಿತ್ತಜನಕಾಂಗದ ರೋಗ ಇದ್ದರೆ ಬದಲಿ ಪಿತ್ತಜನಕಾಂಗ ಜೋಡಣೆ ಅತ್ಯುತ್ತಮ ಆಯ್ಕೆಯಾಗಿರುತ್ತದೆ. ಇದು ಸಾಧ್ಯವಾಗದೇ ಇದ್ದರೆ ರೇಡಿಯೋ ಫ್ರಿಕ್ವೆನ್ಸಿ ವೇವ್ನಿಂದ ಉಂಟಾಗುವ ತಾಪದ ಮೂಲಕ ಗಡ್ಡೆಯನ್ನು ಕತ್ತರಿಸಿ ತೆಗೆಯುವುದು, ಅಥವಾ ಏಂಜಿಯೋಗ್ರಾಫಿಕ್ ಎಂಬೊಲೈಸೇಷನ್ ಮೂಲಕ ಗಡ್ಡೆಗೆ ರಕ್ತ ಪೂರೈಕೆಯನ್ನು ತಡೆಯುವುದು ಇನ್ನೊಂದು ಚಿಕಿತ್ಸೆ.

*ಚಿಕಿತ್ಸೆಯ ಅಡ್ಡ ಪರಿಣಾಮಗಳಾವುವು?
ಇಲ್ಲಿ ಮೊದಲು ಗಡ್ಡೆಯಿಂದಾಗಿ ರೋಗಿಯ ಜೀವಕ್ಕೆ ಇರುವ ಅಪಾಯವನ್ನು ತಗ್ಗಿಸುವುದು ಪ್ರಮುಖ ಆದ್ಯತೆಯಾಗಿರುತ್ತದೆ. ರೋಗದಿಂದ ರೋಗಿಯನ್ನು ಉಳಿಸಿದ ನಂತರ ಸಣ್ಣ ಪ್ರಮಾಣದ ತೊಂದರೆಗಳನ್ನು ಗಮನಿಸಬಹುದು. ಚಿಕಿತ್ಸೆಯ ಮಾದರಿಯನ್ನು ಆಧರಿಸಿ ಇದು ಬದಲಾಗಬಹುದು. ಬದಲಿ ಪಿತ್ತಜನಕಾಂಗ ಕಸಿ ಮಾಡಿಸಿಕೊಂಡಾಗ ರೋಗಿ ರೋಗನಿರೋಧಕ ಶಕ್ತಿಯನ್ನು ನಿಯಂತ್ರಿಸುವಂತಹ ಇಮ್ಯುನೊಸಪ್ರೆಸೆಂಟ್ ಔಷಧಿಗಳನ್ನು ಜೀವನದುದ್ದಕ್ಕೂ ಸೇವಿಸುತ್ತಿರಬೇಕಾಗುತ್ತದೆ.

*ಪಿತ್ತಜನಕಾಂಗದ ಕಸಿಯ ಸವಾಲುಗಳಾವುವು?
ಕಸಿಗಾಗಿ ಅಂಗಗಳ ಅಲಭ್ಯತೆ, ತಾಂತ್ರಿಕ ಸಂಕೀರ್ಣ ತೊಂದರೆಗಳು, ಅಗತ್ಯ ಮೂಲಸೌಲಭ್ಯದ ಅಲಭ್ಯ ಹಾಗೂ ವೆಚ್ಚ ಪ್ರಮುಖ ಸವಾಲುಗಳಾಗಿವೆ.

*ಅಂಗದಾನ ಮಾಡಿದ ನಂತರ ದಾನಿಯ ಸ್ಥಿತಿ ಹೇಗೆ? ಅವನು/ಅವಳು ಸಾಮಾನ್ಯ ಜೀವನವನ್ನು ನಡೆಸಬಹುದೇ?
ಜೀವಂತ ದಾನಿಯ ಪಿತ್ತಜನಕಾಂಗ ಕಸಿ ಸಂದರ್ಭದಲ್ಲಿ ದಾನಿಯಾದವನು ಶಸ್ತ್ರಚಿಕಿತ್ಸೆಯ ನಂತರ ಸಾಮಾನ್ಯ ಜೀವನವನ್ನು ನಡೆಸಬಹುದು. ಅವರಲ್ಲಿ ಪಿತ್ತಜನಕಾಂಗ ಪುನರು ಜ್ಜೀವನಗೊಂಡು ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತದೆ.

*ಪಿತ್ತಜನಕಾಂಗದ ಕಸಿ ಶಸ್ತ್ರಕ್ರಿಯೆಯಲ್ಲಿ ಯಶಸ್ಸಿನ ಪ್ರಮಾಣ ಎಷ್ಟಿದೆ?
ಪಿತ್ತಜನಕಾಂಗದ ಕಸಿಗೆ ಒಳಗಾ ಗುವ ರೋಗಿಯ ಸ್ಥಿತಿಯೊಂದಿಗೆ ಇದು ಬದಲಾಗುತ್ತದೆ. ಶೇ.90ರಷ್ಟು ತಕ್ಷಣ ಯಶಸ್ಸು ಕಂಡರೆ, ಇನ್ನುಳಿದ ಪ್ರಕರಣಗಳಲ್ಲಿ ದೀರ್ಘ ಕಾಲದ ನಂತರ ಯಶಸ್ಸು ಕಂಡು ಬರುತ್ತದೆ.

*ಪಿತ್ತಜನಕಾಂಗದ ಆರೋಗ್ಯಕ್ಕೆ ಸೂಕ್ತವಾದ ಆಹಾರ ಪದಾರ್ಥಗಳ ಬಗ್ಗೆ ಸಲಹೆ ನೀಡಿ
ಸಾಮಾನ್ಯ ವ್ಯಕ್ತಿಗೆ ಪಿತ್ತಜನಕಾಂಗದ ಆರೋಗ್ಯಕ್ಕಾಗಿ ಯಾವುದೇ ವಿಶೇಷ ಆಹಾರಗಳು ಇಲ್ಲ. ಆದರೆ ವ್ಯಕ್ತಿ ಮದ್ಯವನ್ನು ತ್ಯಜಿಸುವುದು ಮತ್ತು ಆರೋಗ್ಯಕರ ಆಹಾರಾಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.