ಭಾನುವಾರ, 10 ಆಗಸ್ಟ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
03/08/2025 - 09/08/2025
ವಾರ ಭವಿಷ್ಯ | 2025ರ ಆಗಸ್ಟ್ 10–16: ತಾಯಿಯ ಕೋಪ ನಿಮ್ಮನ್ನು ಕಾಡುತ್ತದೆ
Published 9 ಆಗಸ್ಟ್ 2025, 23:30 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಆರ್ಥಿಕ ಸಂಕಷ್ಟಗಳ ಬಗ್ಗೆ ಮುಂದಾಲೋಚನೆ ಮಾಡುವಿರಿ. ನಿಮ್ಮ ಸ್ವಂತ ಪರಿಶ್ರಮದಿಂದ ಆದಾಯವನ್ನು ಹೆಚ್ಚು ಮಾಡಿಕೊಳ್ಳಬಹುದು. ಹಿರಿಯರ ಜತೆಗೂಡಿ ನಿಮ್ಮ ಕೆಲಸ ಕಾರ್ಯಗಳನ್ನು ಸಾಧಿಸಿಕೊಳ್ಳುವಿರಿ. ಸರ್ಕಾರಿ ವ್ಯವಹಾರಗಳಲ್ಲಿ ಪ್ರಗತಿ ಇರುತ್ತದೆ. ವಿದ್ಯಾರ್ಥಿಗಳು ಹೆಚ್ಚು ಪರಿಶ್ರಮವನ್ನು ಪಡಲೇಬೇಕಾದ ಪರಿಸ್ಥಿತಿಯು ಇರುತ್ತದೆ. ಹರಿತವಾದ ಆಯುಧಗಳ ಜತೆ ಕೆಲಸಮಾಡುವಾಗ ಎಚ್ಚರದಿಂದಿರಿ. ತಾಯಿಯ ಕೋಪ ನಿಮ್ಮನ್ನು ಕಾಡುತ್ತದೆ. ಹೈನುಗಾರಿಕೆ ಮಾಡುವವರಿಗೆ ಸ್ವಲ್ಪ ಹಿನ್ನಡೆಯಾಗಬಹುದು. (ಅಶ್ವಿನಿ ಭರಣಿ ಕೃತಿಕ 1)
ವೃಷಭ
ಆದಾಯವು ಬಹಳ ಉತ್ತಮವಾಗಿರುತ್ತದೆ. ಕೃಷಿ ವಿಷಯ ಓದುತ್ತಿರುವವರಿಗೆ ಬೇಕಾಗಿದ್ದ ಸವಲತ್ತುಗಳು ದೊರೆಯುತ್ತವೆ. ಹಲ್ಲು ನೋವು ಅಥವಾ ಬಾಯಿ ಹುಣ್ಣು ಕಾಡಬಹುದು. ಸಂಗಾತಿಯು ನಿಮ್ಮ ಸಂಸಾರಕ್ಕಾಗಿ ದುಡಿಯುವರು. ನಿರೀಕ್ಷೆ ಮಾಡದಿದ್ದ ಸಂದರ್ಭಗಳಲ್ಲಿ ಆರ್ಥಿಕ ಸಹಾಯ ಲಭಿಸಬಹುದು. ಉದ್ದಿಮೆದಾರರು ತಮ್ಮ ಮಕ್ಕಳಿಗೆ ಅವರ ವ್ಯವಹಾರಗಳಲ್ಲಿ ಅವಕಾಶ ಕೊಡುವರು. ವಿದೇಶಿ ವ್ಯವಹಾರ ಮಾಡುವವರಿಗೆ ಅನುಕೂಲವಿರುತ್ತದೆ. (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಮಿಥುನ
ಬಹಳ ಗೌರವಯುತವಾಗಿ ವರ್ತಿಸುವಿರಿ. ಆದಾಯವು ನಿರೀಕ್ಷೆಯ ಹತ್ತಿರ ಬರುತ್ತದೆ. ಸರ್ಕಾರಿ ಸಂಬಂಧಿತ ಕೆಲಸಗಳಲ್ಲಿ ಆದಾಯವು ಹೆಚ್ಚುತ್ತದೆ. ಜಾಣತನದಿಂದ ಮಾತನಾಡಿ ನಿಮ್ಮ ಕೆಲಸ ಸಾಧಿಸಿಕೊಳ್ಳುವಿರಿ. ನಿಮ್ಮ ಉತ್ತಮ ಕೆಲಸಗಳಿಗೆ ಹಿರಿಯರ ಬೆಂಬಲ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಪಡೆಯುವ ಕಾಲ. ಬಂಧುಗಳೊಡನೆ ಯಾವುದೇ ರೀತಿಯ ವ್ಯವಹಾರಗಳು ಬೇಡ. ಸಂಗಾತಿಯು ನಿಮಗೆ ಆರ್ಥಿಕ ಸಹಕಾರನೀಡುವರು. ಹಿರಿಯ ರಾಜಕಾರಣಿಗಳಿಗೆ ಸೂಕ್ತ ಸ್ಥಾನಮಾನ ದೊರೆಯುತ್ತದೆ. (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕರ್ಕಾಟಕ
ಆತ್ಮವಿಶ್ವಾಸವನ್ನು ಹೆಚ್ಚು ಮಾಡಿಕೊಳ್ಳುವಿರಿ. ಬಹಳ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ. ಆದಾಯವು ಕಡಿಮೆ ಇರುತ್ತದೆ. ಬಂಧುಗಳಿಂದ ಸಹಕಾರ ಸಿಗುವಂತೆ ಕಂಡರೂ, ಸಕಾಲದಲ್ಲಿ ಸಿಗುವುದಿಲ್ಲ. ಆಸ್ತಿ ವಿಚಾರಗಳಲ್ಲಿ ಎಚ್ಚರವಾಗಿರಿ. ಈಗ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮಟ್ಟದ ಫಲಿತಾಂಶವಿರುವುದಿಲ್ಲ. ಹೊಟ್ಟೆ ಸಂಬಂಧಿತ ದೋಷಗಳು ನಿಮ್ಮನ್ನು ಕಾಡಬಹುದು. ವಿದೇಶಕ್ಕೆಆಹಾರ ಪದಾರ್ಥಗಳನ್ನು ರಫ್ತು ಮಾಡುವವರಿಗೆ ಅನಿರೀಕ್ಷಿತ ಆದಾಯವಿರುತ್ತದೆ. ರಾಜಕಾರಣಿಗಳಿಗೆ ಅಭಿವೃದ್ಧಿ ಯೋಗವಿದೆ. (ಪುನರ್ವಸು 4 ಪುಷ್ಯ ಆಶ್ಲೇಷ)
ಸಿಂಹ
ಬಹಳಷ್ಟು ಆಲಸಿತನ ವಾರದ ಆರಂಭದಲ್ಲಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ಆದರೆ ಕೃಷಿಯಿಂದ ಆದಾಯವನ್ನು ನಿರೀಕ್ಷೆ ಮಾಡಬಹುದು. ಬಂಧುಗಳಿಂದ ಸಹಕಾರವನ್ನು ನಿರೀಕ್ಷೆ ಮಾಡಬಹುದು. ವಿದ್ಯಾರ್ಥಿಗಳಿಗೆ ಸ್ವಲ್ಪ ಉತ್ತಮ ಫಲಿತಾಂಶ ಸಿಗುತ್ತದೆ. ನೀವು ವಿದೇಶದಲ್ಲಿರುವ ನಿಮ್ಮ ಸಂಗಾತಿಯನ್ನು ಹೋಗಿ ಕೂಡಿಕೊಳ್ಳಬಹುದು. ರಾಜಕಾರಣಿಗಳಿಗೆ ಹಿನ್ನಡೆಯಾಗುವ ಸಂದರ್ಭವಿದೆ. ಉದ್ಯೋಗದಲ್ಲಿ ಆದಾಯವು ಹೆಚ್ಚುವ ಸಾಧ್ಯತೆ ಇದೆ. (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಕನ್ಯಾ
ವಾರದ ಆರಂಭದಲ್ಲಿ ಬಹಳ ಚೈತನ್ಯಶೀಲರಾಗಿರುವಿರಿ. ಮುನ್ನುಗ್ಗುವ ಹುಮ್ಮಸ್ಸು ನಿಮ್ಮಲ್ಲಿ ತುಂಬಿರುತ್ತದೆ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಹೆಚ್ಚು ಚಟುವಟಿಕೆಯಿಂದ ಕೆಲಸ ಮಾಡಿ ಎಲ್ಲರ ಗಮನ ಸೆಳೆಯುವಿರಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಮಾತ್ರವಿರುತ್ತದೆ. ಶೀತ ಬಾಧೆ ಅಥವಾ ಕೀಲು ನೋವು ಕಾಣಿಸಬಹುದು. ಸಂಗಾತಿಯು ನಿಮ್ಮ ಕೆಲಸ ಕಾರ್ಯಗಳಿಗೆ ಸರಿಯಾಗಿ ಸಹಕಾರ ನೀಡುವುದಿಲ್ಲ. ಸರ್ಕಾರಿ ವ್ಯವಹಾರಗಳಲ್ಲಿ ಲಾಭವಿದೆ. (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ತುಲಾ
ಈ ವಾರ ನಿಮಗೆ ಸ್ವಲ್ಪ ತೃಪ್ತಿದ್ದಾಯಕವಾಗಿರುತ್ತದೆ. ಆದಾಯವು ಕಡಿಮೆ ಇದ್ದು ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ. ಹಿರಿಯರಿಂದ ನಿಮ್ಮ ಕೆಲಸ,ಕಾರ್ಯಗಳಿಗೆ ಸಹಕಾರ ದೊರೆಯಬಹುದು. ಸಿರಾಸ್ತಿಯ ವ್ಯವಹಾರಗಳಲ್ಲಿ ನಷ್ಟ ಉಂಟಾಗುವ ಸಾಧ್ಯತೆಗಳಿವೆ. ವಿದೇಶದಲ್ಲಿ ಓದುತ್ತಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ವಾತಬಾಧೆಗಳು ನಿಮ್ಮನ್ನು ಕಾಡಬಹುದು. ಸಂಗಾತಿಯ ಖರ್ಚು ಬಹಳ ಹೆಚ್ಚಾಗುವ ಸಾಧ್ಯತೆಗಳಿವೆ. ಸರ್ಕಾರದ ಜೊತೆ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಧರ್ಮ ಗುರುಗಳಿಗೆ ಗೌರವ ಇರುತ್ತದೆ. (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ವೃಶ್ಚಿಕ
ವಾರದ ಆರಂಭದಲ್ಲಿ ಕೋಪ–ತಾಪಗಳನ್ನು ಕಾಣಬಹುದು. ಆದಾಯವು ಸಾಮಾನ್ಯ ಗತಿಯಲ್ಲಿ ಇರುತ್ತದೆ. ಪೊಲೀಸ್ ತರಬೇತಿದಾರರಿಗೆ ಬಹಳ ಅನುಕೂಲವಿರುತ್ತದೆ. ವಿದೇಶದಲ್ಲಿರುವವರು ಸ್ಥಿರಾಸ್ತಿಯನ್ನು ಮಾಡಿಕೊಳ್ಳಹುದು. ಕಾಡುತ್ತಿದ್ದ ಅನಾರೋಗ್ಯ ಈಗ ಶಮನವಾಗುತ್ತದೆ. ಸಂಗಾತಿಯಿಂದ ಅನಿರೀಕ್ಷಿತ ಧನ ಲಾಭವಿರುತ್ತದೆ. ಹಣಕಾಸಿನ ವ್ಯವಹಾರ ಮಾಡುವವರಿಗೆ ಅನಿರೀಕ್ಷಿತ ಲಾಭ ಇರುತ್ತದೆ. ವೃತ್ತಿಯಲ್ಲಿ ಬುದ್ಧಿವಂತಿಕೆಯಿಂದ ಮೇಲ್ದರ್ಜೆಗೆ ಏರಬಹುದು. ಕೃಷಿಯಿಂದ ಸ್ವಲ್ಪ ಲಾಭವಿರುತ್ತದೆ. ಸಂಗಾತಿಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. (ವಿಶಾಖಾ 4 ಅನುರಾಧ ಜೇಷ್ಠ)
ಧನು
ಸಮೂಹದಲ್ಲಿ ಹೆಚ್ಚು ಕಾಣಿಸಿಕೊಳ್ಳುವಿರಿ. ಆದಾಯವು ಕಡಿಮೆ ಇರುತ್ತದೆ. ವಿದೇಶಿ ವ್ಯವಹಾರ ಮಾಡುವವರ ಆದಾಯ ಬಹಳಷ್ಟು ಹೆಚ್ಚುತ್ತದೆ. ಸಾಂಪ್ರದಾಯಿಕ ಕೃಷಿ ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ಹೆಚ್ಚುವರಿ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಮೂಲಕ ವೃತ್ತಿಯಲ್ಲಿ ಹೆಸರನ್ನು ಮಾಡಬಹುದು. ವಿದ್ಯಾರ್ಥಿಗಳಿಗೆ ಅಪೇಕ್ಷಿಸಿದ ಫಲಿತಾಂಶ ಸಿಗುವುದು ಕಡಿಮೆ. ಸಂಗಾತಿಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು. ಧರ್ಮ ಪ್ರಚಾರಕರಿಗೆ ಬೇಡಿಕೆ ಹೆಚ್ಚುತ್ತದೆ ಮತ್ತು ಆದಾಯ ಹೆಚ್ಚುತ್ತದೆ. (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಮಕರ
ಯಾವುದೇ ರೀತಿ ಒತ್ತಡಗಳಿಗೆ ಒಳಗಾಗದೆ ನಿಮ್ಮ ಕೆಲಸವನ್ನು ನೀವು ಮಾಡುವಿರಿ. ವಿದೇಶಕ್ಕೆ ಸಿದ್ಧಪಡಿಸಿದ ಆಹಾರ ವಸ್ತುಗಳನ್ನು ಕಳಿಸುವವರಿಗೆ ಆದಾಯ ಹೆಚ್ಚುತ್ತದೆ. ನಿಮ್ಮ ಶತ್ರುಗಳನ್ನು ಮಟ್ಟ ಹಾಕುವ ಕಲೆ ನಿಮಗೆ ಸಿದ್ಧಿಸುತ್ತದೆ. ಸ್ಥಿರಾಸ್ತಿ ಖರೀದಿಸಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷೆಯ ಹತ್ತಿರದ ಫಲಿತಾಂಶ ಬರುತ್ತದೆ. ವಿಶೇಷ ಧಾರ್ಮಿಕ ಆಸಕ್ತಿ ನಿಮ್ಮಲ್ಲಿ ಮೂಡುತ್ತದೆ. ಕೃಷಿಯಿಂದ ನಿಮಗೆ ಲಾಭವಿರುತ್ತದೆ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿಗಳಿದ್ದರೂ ಕೂಡ ಅದನ್ನು ಎದುರಿಸಿ ಮುನ್ನುಗ್ಗುವ ಶಕ್ತಿ ನಿಮಗೆ ಇರುತ್ತದೆ. (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕುಂಭ
ತಂತ್ರಜ್ಞರಿಗೆ ತುಂಬಾ ಬೇಡಿಕೆ ಬರುತ್ತದೆ. ಆದಾಯವು ಕಡಿಮೆ ಇದ್ದರೂ ಕೂಡ ನಿಭಾಯಿಸುವ ಶಕ್ತಿ ಇರುತ್ತದೆ. ಬಂಧುಗಳು ಸಂಪೂರ್ಣ ಸಹಕಾರ ನೀಡುವುದಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ನರ ದೌರ್ಬಲ್ಯ ಅಥವಾ ಕಣ್ಣಿನ ಸಮಸ್ಯೆ ಕೆಲವರನ್ನು ಕಾಡಬಹುದು. ಸರ್ಕಾರಿ ಸಾಲವನ್ನು ಪಡೆದು ಇತರ ಕೈಸಾಲಗಳನ್ನು ತೀರಿಸಿಕೊಳ್ಳಬಹುದು. ಸಂಗಾತಿಯಿಂದ ಧರ್ಮಕ್ಕೆ ಸಂಬಂಧ ಪಟ್ಟ ಉತ್ತಮ ಸಲಹೆಗಳು ದೊರೆಯುತ್ತವೆ. ಆಭರಣ ವ್ಯಾಪಾರಗಾರರಿಗೆ ಉತ್ತಮ ಲಾಭವಿರುತ್ತದೆ. (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಮೀನ
ಕೃಷಿಯಿಂದ ನಿರೀಕ್ಷಿತ ಆದಾಯ ಬರುತ್ತದೆ. ನಿಮ್ಮ ಬಂಧುಗಳು ಕೆಲವೊಮ್ಮೆ ಸಹಕಾರ ನೀಡುವವರು. ಸಂಸಾರದಲ್ಲಿ ಸಂತೋಷವಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ದೊರೆಯುತ್ತದೆ. ಉದರ ಸಂಬಂಧಿ ದೋಷಗಳು ನಿಮ್ಮನ್ನು ಕಾಡಬಹುದು. ನಿಮ್ಮ ಸಂಗಾತಿಯ ಸಹಾಯದಿಂದ ಕೃಷಿ ಮಾಡಬಹುದು. ಆಭರಣ ತಯಾರಕರಿಗೆ ವಿಶೇಷ ಬೇಡಿಕೆ ಬರುತ್ತದೆ. ಕೆಲವರಿಗೆ ತವರಿನಿಂದ ಭೂಮಿ ದೊರೆಯುವ ಸಾಧ್ಯತೆ ಇದೆ. ವೃತ್ತಿಯ ಸ್ಥಳದಲ್ಲಿದ್ದ ಗೊಂದಲಗಳು ನಿವಾರಣೆಯಾಗುತ್ತವೆ. ಕಬ್ಬಿಣದ ವ್ಯಾಪಾರಿಗಳಿಗೆ ಲಾಭ ಹೆಚ್ಚುತ್ತದೆ. (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ADVERTISEMENT
ADVERTISEMENT