ಭುವನೇಶ್ವರ: ಉದಯೋನ್ಮುಖ ಸ್ಪ್ರಿಂಟರ್ ಅನಿಮೇಶ್ ಕುಜೂರ್, ಅನುಭವಿ ಜಾವೆಲಿನ್ ಥ್ರೋತಾರೆ ಅನ್ನುರಾಣಿ ಮತ್ತು ಲಾಂಗ್ಜಂಪ್ ಪಟು ಮುರಳಿ ಶ್ರೀಶಂಕರ್ ಅವರು ನಿರೀಕ್ಷೆಯಂತೆ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮೆರೆದರು.

ಕರ್ನಾಟಕದ ವಿಜಯಕುಮಾರಿ ಜಿ.ಕೆ. ಅವರು ಮಹಿಳೆಯರ 400 ಮೀಟರ್ ಓಟದಲ್ಲಿ ಪ್ರಶಸ್ತಿ ಗೆದ್ದರು. ರಾಜ್ಯದ ಸ್ನೇಹಾ ಎಸ್.ಎಸ್. (11.70) ಅವರು ಮಹಿಳೆಯರ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಜಯಿಸಿದರು. 200 ಮೀಟರ್ ಓಟದಲ್ಲಿ ಉನ್ನತಿ ಅಯ್ಯಪ್ಪ ಮತ್ತು ಲಾಂಗ್ಜಂಪ್ನಲ್ಲಿ ಲೋಕೇಶ್ ಸತ್ಯನಾಥನ್ ಕಂಚಿನ ಪದಕ ಗೆದ್ದರು.

ರಾಷ್ಟ್ರೀಯ ದಾಖಲೆ ಹೊಂದಿರುವ 22 ವರ್ಷದ ಕುಜೂರ್ 200 ಮೀಟರ್ ಓಟದ ಫೈನಲ್ನಲ್ಲಿ 20.77 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಕೊರಿಯಾದ ಕೊ ಸೆಯುಂಗ್ವಾನ್ (20.95 ಸೆ.) ಮತ್ತು ಭಾರತದ ಮತ್ತೊಬ್ಬ ಸ್ಪರ್ಧಿ ರಘುಲ್ ಕುಮಾರ್ (21.17 ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

ಜೆಎಸ್ಡಬ್ಲ್ಯೂ ತಂಡವನ್ನು ಪ್ರತಿನಿಧಿಸುವ ಶ್ರೀಶಂಕರ್ 8.13 ಮೀಟರ್ ಸಾಧನೆ ಮೆರೆದರು. ರಾಷ್ಟ್ರೀಯ ಚಾಂಪಿಯನ್ 17 ವರ್ಷದ ಶಹನವಾಜ್ ಖಾನ್ (8.04) ತೀವ್ರ ಪೈಪೋಟಿ ನೀಡಿ ಬೆಳ್ಳಿ ತಮ್ಮದಾಗಿಸಿಕೊಂಡರು. ಇದೇ ಮೊದಲ ಬಾರಿ ಅವರು 8 ಮೀಟರ್ (ಹಿಂದಿನ ಅತ್ಯುತ್ತಮ ಸಾಧನೆ 7.90 ಮೀ) ಗಡಿ ದಾಟಿದರು.

26 ವರ್ಷದ ಶ್ರೀಶಂಕರ್ ಗಾಯದ ದೀರ್ಘ ವಿರಾಮದ ನಂತರ ಗೆದ್ದ ಸತತ ನಾಲ್ಕನೇ ಪ್ರಶಸ್ತಿ ಇದಾಗಿದೆ. ಅವರಿಗೆ ಟೋಕಿಯೊ ವಿಶ್ವ ಚಾಂಪಿಯನ್ಷಿಪ್ ಅರ್ಹತಾ ಮಟ್ಟ (8.27ಮೀ) ತಲುಪಲು ಸಾಧ್ಯವಾಗಲಿಲ್ಲ. ಲೋಕೇಶ್ (7.85 ಮೀ) ಕಂಚು ಗೆದ್ದರು.

ಏಷ್ಯನ್ ಗೇಮ್ಸ್ ಚಾಂಪಿಯನ್ ಅನ್ನುರಾಣಿ ಅವರು ಮಹಿಳೆಯರ ಜಾವೆಲಿನ್ನಲ್ಲಿ ನಾಲ್ಕನೇ ಪ್ರಯತ್ನದಲ್ಲಿ 62.01 ಮೀಟರ್ ಭರ್ಜಿ ಎಸೆದರು. ಇದರಿಂದಾಗಿ ಸೆಪ್ಟೆಂಬರ್ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಷಿಪ್ಗೆ ಅರ್ಹತೆ ಪಡೆಯುವ ಸಾಧ್ಯತೆಗಳು ಬಲಗೊಂಡವು.

ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ಭಾರತದ ಸ್ಪರ್ಧಿಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಬೆಂಗಳೂರಿನಲ್ಲಿ ನೀರಜ್ ಚೋಪ್ರಾ ಆಯೋಜಿಸಿದ್ದ ಎನ್ಸಿ ಕ್ಲಾಸಿಕ್ನಲ್ಲಿ ಮೂರನೇ ಸ್ಥಾನ ಪಡೆದ ಶ್ರೀಲಂಕಾದ ರುಮೇಶ್ ಪತಿರಗೆ ಮೊದಲ ಪ್ರಯತ್ನದಲ್ಲೇ ಈಟಿಯನ್ನು 86.50 ಮೀಟರ್ ದೂರ ಎಸೆದು ಚಿನ್ನಕ್ಕೆ ಗುರಿಯಿಟ್ಟರು. ಆ ಮೂಲಕ ವಿಶ್ವ ಚಾಂಪಿಯನ್ಷಿಪ್ನ ನೇರ ಅರ್ಹತೆ (85.50 ಮೀ) ಸಂಪಾದಿಸಿದರು.

ಭಾರತದ 20 ವರ್ಷದ ಶಿವಂ ಲೋಹಕರೆ 80.95 ಮೀಟರ್ ಸಾಧನೆಯೊಂದಿಗೆ ಬೆಳ್ಳಿ ಪದಕ ಗೆದ್ದರು. ಶ್ರೀಲಂಕಾದ ಸುಮೇಧಾ ರಣಸಿಂಘೆ (80.65 ಮೀ) ಮೂರನೇ ಸ್ಥಾನ ಪಡೆದರು. ಭಾರತದ ರೋಹಿತ್ ಯಾದವ್ (80.35 ಮೀ) ಮತ್ತು ಏಷ್ಯನ್ ಚಾಂಪಿಯನ್ಷಿಪ್ ಬೆಳ್ಳಿ ವಿಜೇತ ಸಚಿನ್ ಯಾದವ್ (79.80 ಮೀ) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದರು.

ಮಹಿಳೆಯರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಶೈಲಿ ಸಿಂಗ್ 6.28 ಮೀಟರ್ ದೂರ ಜಿಗಿದು ಪ್ರಶಸ್ತಿ ಗೆದ್ದರು. ಮಲೇಷ್ಯಾದ ಮುಹಮ್ಮದ್ ಅಜೀಮ್ ಬಿನ್ ಪುರುಷರ 100 ಮೀಟರ್ ಓಟದಲ್ಲಿ (10.35 ಸೆ) ಮಿಂಚು ಹರಿಸಿ ಚಿನ್ನ ಗೆದ್ದರು. ಮಹಿಳೆಯರ ವಿಭಾಗದಲ್ಲಿ ಎನ್ಸಿಒಇ ತಿರುವನಂತಪುರದ ಅಭಿನಯ ರಾಜರಾಜನ್ (11.57 ಸೆ) ಚಾಂಪಿಯನ್ ಆದರು.

ಒಟ್ಟು 21.89 ಲಕ್ಷ ಬಹುಮಾನ ಮೊತ್ತವನ್ನು ಹೊಂದಿದ್ದ ಈ ಕೂಟದಲ್ಲಿ 17 ದೇಶಗಳಿಂದ 150ಕ್ಕೂ ಹೆಚ್ಚು ಕ್ರೀಡಾಪಟುಗಳು 19 ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದರು. ಇದರಲ್ಲಿ ಭಾರತದ 90 ಮಂದಿ ಸ್ಪರ್ಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.