ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಶನ್‌: ಬ್ಲೇಜರ್‌ಗೆ ಮ್ಯಾಚಿಂಗ್‌ ಸ್ಟೋಲ್‌, ಬ್ಯಾಗ್‌

Last Updated 24 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಕಚೇರಿ ಫ್ಯಾಷನ್‌ನಲ್ಲಿ ಬ್ಲೇಜರ್‌ ಟ್ರೆಂಡ್ ಹೆಚ್ಚು ಸದ್ದು ಮಾಡುತ್ತಿದೆ. ಬಾಲಿವುಡ್‌ ನಟಿಯರಾದ ದೀಪಿಕಾ ಪಡುಕೋಣೆ, ಕರೀನಾ ಕಪೂರ್‌ ಮೊದಲಾದವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಬ್ಲೇಜರ್‌ ಧರಿಸಿ, ಯುವತಿಯರಲ್ಲೂ ಈ ಫ್ಯಾಷನ್‌ ಬಗ್ಗೆ ಆಸಕ್ತಿ ಮೂಡಿಸಿದ್ದಾರೆ. ಶರ್ಟ್ ಅಥವಾ ಟೀ ಶರ್ಟ್ ಮೇಲೆ ಧರಿಸುವ ಬ್ಲೇಜರ್ ಅಂದವನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಅದರೊಂದಿಗೆ ಈಗ ಬ್ಲೇಜರ್‌ನಲ್ಲಿ ಹೊಸ ಹೊಸ ವಿನ್ಯಾಸವನ್ನು ಅಳವಡಿಸಿಕೊಳ್ಳಲಾಗಿದೆ. ಫ್ಯಾಷನ್ ಲೋಕದಲ್ಲೂ ಬ್ಲೇಜರ್ ಟ್ರೆಂಡ್ ಹೆಚ್ಚು ಸದ್ದು ಮಾಡುತ್ತಿದ್ದು ಕಚೇರಿ ಕೆಲಸ ಮಾಡುವವರಿಗೆ ಫ್ಯಾಷನ್‌ನೊಂದಿಗೆ ಆಫೀಶಿಯಲ್ ನೋಟ ಕೂಡ ಸಿಗುವಂತೆ ಮಾಡುತ್ತದೆ.

ಹಿಂದೆಲ್ಲಾ ಶಾರ್ಟ್‌ ಸ್ಕರ್ಟ್‌ ಅಥವಾ ಫಾರ್ಮಲ್‌ ಪ್ಯಾಂಟ್ ಜೊತೆಗೆ ಹೆಣ್ಣುಮಕ್ಕಳು ಹೆಚ್ಚಾಗಿ ಬ್ಲೇಜರ್ ಧರಿಸುತ್ತಿದ್ದರು. ಈಗ ಜೀನ್ಸ್‌ ಟಾಪ್‌, ಪೆನ್ಸಿಲ್‌ ಪ್ಯಾಂಟ್‌ ಟಾಪ್‌, ಜೆಗ್ಗಿಂಗ್ಸ್ ಪ್ಯಾಂಟ್ ಟಾಪ್‌ ಜೊತೆಗೂ ಬ್ಲೇಜರ್‌ ಧರಿಸಬಹುದಾಗಿದೆ.

ಬಣ್ಣ ಹಾಗೂ ಚಿತ್ತಾರ: ಹಿಂದೆ ಬ್ಲೇಜರ್ ಎಂದರೆ ಕಪ್ಪು ಬಣ್ಣ, ನೀಲಿ ಹೀಗೆ ಒಂದೆರಡು ಬಣ್ಣದಲ್ಲೇ ಇರುತ್ತಿದ್ದವು. ಈಗ ಎಲ್ಲಾ ಬಣ್ಣ ಹಾಗೂ ಹೂವಿನ ಚಿತ್ತಾರ, ಗೊಂಬೆ ಚಿತ್ತಾರ... ಹೀಗೆ ಹೆಂಗಳೆಯರು ಮೆಚ್ಚುವ ರೀತಿಯಲ್ಲಿ ಬ್ಲೇಜರ್‌ಗಳು ಫ್ಯಾಷನ್ ಮಾರುಕಟ್ಟೆಯನ್ನು ಅಲಂಕರಿಸಿವೆ.

ಬ್ಲೇಜರ್‌ನೊಂದಿಗೆ ಬ್ಯಾಗ್‌

ಬ್ಲೇಜರ್‌ ಧರಿಸಿದಾಗ ಒಂದು ಕ್ಲಾಸಿ ಲುಕ್ ಸಿಗಬೇಕು ಎಂದರೆ ಅದರೊಂದಿಗೆ ಹ್ಯಾಂಡ್‌ ಬ್ಯಾಗ್ ಕೂಡ ಹಾಕಿಕೊಳ್ಳಬೇಕು. ಬ್ಲೇಜರ್‌ ಬಣ್ಣದ್ದೇ ಬ್ಯಾಗ್‌ಗಿಂತ ಅದಕ್ಕೆ ತದ್ವಿರುದ್ಧ ಬಣ್ಣದ ಖರೀದಿಸಿ. ಇದು ಸ್ಟೈಲಿಷ್ ನೋಟ ಸಿಗುವಂತೆ ಮಾಡುವುದು ಸುಳ್ಳಲ್ಲ. ಉದ್ದನೆಯ ಬ್ಯಾಗ್‌ಗಿಂತ ಗಿಡ್ಡನೆಯ ಬ್ಯಾಗ್ ಚೆನ್ನಾಗಿ ಕಾಣುತ್ತದೆ. ಇದರೊಂದಿಗೆ ಸ್ಲಿಂಗ್ ಬ್ಯಾಗ್ ಕೂಡ ಬ್ಲೇಜರ್ ಫ್ಯಾಷನ್‌ಗೆ ಹೆಚ್ಚು ಹೊಂದಿಕೆಯಾಗುತ್ತದೆ.

ಚೈನ್ ವಾಚ್‌

ಬ್ಲೇಜರ್ ಹಾಕಿಕೊಂಡಾಗ ಬೆಲ್ಟ್ ಇರುವ ವಾಚ್ ಧರಿಸುವುದಕ್ಕಿಂತ ಚೈನ್ ವಾಚ್‌ ಧರಿಸುವುದು ಉತ್ತಮ. ಬೆಳ್ಳಿ ಅಥವಾ ಚಿನ್ನದ ಬಣ್ಣದ ಚೈನ್ ಇರುವ ವಾಚ್‌ ಬ್ಲೇಜರ್‌ನೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತದೆ.

ಚಪ್ಪಲಿಗಳು

ಬ್ಲೇಜರ್ ಜೊತೆಗೆ ಸ್ಯಾಂಡಲ್‌, ಶೂ, ಎತ್ತರದ ಹಿಮ್ಮಡಿಯ ಶೂ ಎಲ್ಲವೂ ಹೊಂದುತ್ತವೆ. ಆದರೆ ನೀವು ಯಾವ ಬಗೆಯ ಪ್ಯಾಂಟ್ ಧರಿಸಿದ್ದೀರಿ ಎಂಬುದರ ಮೇಲೆ ನಿಮ್ಮ ಚಪ್ಪಲಿಯನ್ನು ನಿರ್ಧರಿಸುವುದು ಮುಖ್ಯ. ಫಾರ್ಮಲ್‌ ಪ್ಯಾಂಟ್ ಜೊತೆ ಬ್ಲೇಜರ್ ಧರಿಸಿದ್ದರೆ ಶೂ ಧರಿಸುವುದು ಸೂಕ್ತ. ಜೀನ್ಸ್ ಜೊತೆ ಬ್ಲೇಜರ್ ಧರಿಸಿದ್ದರೆ ಶೂ ಹಾಕಿದಾಗ ಹೆಚ್ಚು ಸ್ಟೈಲಿಶ್ ಆಗಿ ಕಾಣಬಹುದು. ಇನ್ನು ಪೆನ್ಸಿಲ್ ಪ್ಯಾಂಟ್ ಜೊತೆ ಹೀಲ್ಸ್‌ ಹಾಕುವುದರಿಂದ ಅಂದವನ್ನು ಹೆಚ್ಚಿಸಿಕೊಳ್ಳಬಹುದು.

ನೆಕ್ಲೇಸ್‌

ಕತ್ತಿಗೆ ಗಿಡ್ಡನೆಯ ನೆಕ್ಲೇಸ್ ಧರಿಸುವುದರಿಂದ ಹೆಚ್ಚು ಸುಂದರವಾಗಿ ಕಾಣಬಹುದು. ಒಂದೇ ಎಳೆ ಅಥವಾ ಎರಡು ಎಳೆಯ ಪೆಂಡೆಂಟ್ ಇರುವ ನೆಕ್ಲೇಸ್ ಧರಿಸುವುದು ಹೆಚ್ಚು ಸೂಕ್ತ. ಮುತ್ತಿನ ಅಥವಾ ಹವಳದ ಗಿಡ್ಡನೆಯ ನೆಕ್ಲೇಸ್ ಅನ್ನೂ ಕೂಡ ಧರಿಸುವ ಮೂಲಕ ಅಂದವನ್ನು ಹೆಚ್ಚಿಸಿಕೊಳ್ಳಬಹುದು.

ಸ್ಟೋಲ್‌

ಬ್ಲೇಜರ್ ಜೊತೆ ಸ್ಟೋಲ್ ಅನ್ನು ಕೂಡ ಮ್ಯಾಚಿಂಗ್ ಮಾಡಿಕೊಳ್ಳಬಹುದು. ಹತ್ತಿ, ಉಣ್ಣೆಯ ವಿವಿಧ ವಿನ್ಯಾಸವಿರುವ ಸ್ಟೋಲ್‌ಗಳು ಬ್ಲೇಜರ್‌ಗೆ ಹೆಚ್ಚು ಹೊಂದುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT