ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಗೊಂಬೆ ಹೇಳುತೈತೆ ಜಾನು ಜೀವನ

Published : 31 ಜನವರಿ 2025, 23:30 IST
Last Updated : 31 ಜನವರಿ 2025, 23:30 IST
ಫಾಲೋ ಮಾಡಿ
Comments
ಲಿಂಗತ್ವ ಅಲ್ಪಸಂಖ್ಯಾತರಾದರೆ ಬದುಕಲು ಭಿಕ್ಷಾಟನೆ ಅನಿವಾರ್ಯ ಎಂಬ ಸಮುದಾಯದ ಸಲಹೆಯ ನಡುವೆಯೂ ಜಾನು ಅವರು ಆರಿಸಿಕೊಂಡಿದ್ದು ಗೊಂಬೆ ಕಲಾವಿದೆ ವೃತ್ತಿಯನ್ನು
ಮಾತನಾಡುವ ಬೊಂಬೆಯೊಂದಿಗೆ ಲಿಂಗತ್ವ ಅಲ್ಪಸಂಖ್ಯಾತ ಕಲಾವಿದೆ ಜಾನು

ಮಾತನಾಡುವ ಬೊಂಬೆಯೊಂದಿಗೆ ಲಿಂಗತ್ವ ಅಲ್ಪಸಂಖ್ಯಾತ ಕಲಾವಿದೆ ಜಾನು

-ಪ್ರಜಾವಾಣಿ ಚಿತ್ರ/ ರಂಜು ಪಿ.

ಜೀವದ ಗೆಳತಿ ಅವಂತಿಕಾ
‘ಮಾತನಾಡುವ ಗೊಂಬೆ ಕಲೆ ಸುಲಭದ್ದಲ್ಲ. ಇಲ್ಲಿ ಎರಡು ಮನಸ್ಸಿರಬೇಕು. ಹಾಸ್ಯಪ್ರಜ್ಞೆ ಧಾರಾಳವಾಗಿರಬೇಕು. ಆ ಕ್ಷಣಕ್ಕೆ ನಕ್ಕು ನಗಿಸುವ ಚಾಕಚಕ್ಯತೆ ಬೇಕು. ಪ್ರಸಕ್ತ ವಿದ್ಯಮಾನಗಳ ಪರಿಚಯವಿರಬೇಕು. ಜತೆಗೆ ಗೊಂಬೆಯ ಧ್ವನಿ ಹೊರಹೊಮ್ಮುವುದು ತಿಳಿಯದಂತಿರಬೇಕು. ನಮ್ಮ ಕೈಗಳ ಚಲನೆ ನೋಡುಗರಿಗೆ ಗೋಚರವಾಗದಂತಿರಬೇಕು. ಜನ್ಮದಿನ ಕಾರ್ಯಕ್ರಮ, ಅಣ್ಣಮ್ಮ ಉತ್ಸವ, ಗಣೇಶೋತ್ಸವಗಳಲ್ಲಿ ಅವಕಾಶಗಳು ಸಿಕ್ಕಿವೆ. ಕೆಲವರು ಹಣ ನೀಡುತ್ತಾರೆ. ಇನ್ನೂ ಕೆಲವರು ವೇದಿಕೆ ಕೊಟ್ಟಿದ್ದೇವಲ್ಲಾ ಅದೇ ದೊಡ್ಡ ಅವಕಾಶ ಎನ್ನುತ್ತಾರೆ. ಆದರೆ, ಅವಂತಿಕಾ ಜೊತೆ ಕಾರ್ಯಕ್ರಮ ನೀಡುವುದೇ ನನ್ನ ಪಾಲಿಗೆ ಹೆಮ್ಮೆ. ನಾನು ಏನೇ ಉಡುಪು ಖರೀದಿಸಿದರೂ, ಅದೇ ಮಾದರಿಯ ಉಡುಪನ್ನು ಅವಂತಿಕಾಗೂ ಹೊಲಿಸುತ್ತೇನೆ. ಇಷ್ಟರ ಮಟ್ಟಿಗೆ ನಮ್ಮ ಸ್ನೇಹ ಗಾಢವಾಗಿದೆ’ ಎಂದು ಜಾನು ನಕ್ಕರು.
ಮಾತನಾಡುವ ಬೊಂಬೆಯೊಂದಿಗೆ ಲಿಂಗತ್ವ ಅಲ್ಪಸಂಖ್ಯಾತ ಕಲಾವಿದೆ ಜಾನು

ಮಾತನಾಡುವ ಬೊಂಬೆಯೊಂದಿಗೆ ಲಿಂಗತ್ವ ಅಲ್ಪಸಂಖ್ಯಾತ ಕಲಾವಿದೆ ಜಾನು

-ಪ್ರಜಾವಾಣಿ ಚಿತ್ರ/ ರಂಜು ಪಿ.

ಇನ್‌ಸ್ಟಾದಲ್ಲಿ 60 ಸಾವಿರ ಫಾಲೋವರ್ಸ್‌
ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಜಾನು, ಅಲ್ಲಿ ತಮ್ಮ ಕಲೆಯ ಪ್ರದರ್ಶನದ ವಿಡಿಯೊ ಹಂಚಿಕೊಳ್ಳುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸುಮಾರು 60 ಸಾವಿರ ಫಾಲೋವರ್‌ಗಳನ್ನು ಇವರು ಹೊಂದಿದ್ದಾರೆ. ಜಾನು ಮತ್ತು ಅವಂತಿಕಾರ ಸಂಭಾಷಣೆಗೆ ಬಹಳಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿರುವುದೇ ನನಗೆ ಸಿಕ್ಕಿರುವ ಪ್ರಶಸ್ತಿಗಳು ಎಂದೆನ್ನುತ್ತಾರೆ ಜಾನು.
ಮಾತನಾಡುವ ಬೊಂಬೆಯೊಂದಿಗೆ ಲಿಂಗತ್ವ ಅಲ್ಪಸಂಖ್ಯಾತ ಕಲಾವಿದೆ ಜಾನು

ಮಾತನಾಡುವ ಬೊಂಬೆಯೊಂದಿಗೆ ಲಿಂಗತ್ವ ಅಲ್ಪಸಂಖ್ಯಾತ ಕಲಾವಿದೆ ಜಾನು

-ಪ್ರಜಾವಾಣಿ ಚಿತ್ರ/ ರಂಜು ಪಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT