ಚಿಕ್ಕಂದಿನಿಂದ ಎರಡೂ ಕಾಲು ಸರಿಯಿಲ್ಲ. ಪದವಿ ಓದಿದ್ದೇನೆ. ತುಂಬಾ ದಪ್ಪ ಇದ್ದೇನೆ. ಮನೆಯಲ್ಲಿ ಎಲ್ಲರೂ ಅವಮಾನ ಮಾಡುತ್ತಾರೆ. ಸಾಯಬೇಕೆನ್ನಿಸಿದರೂ ಅದರಿಂದ ಏನು ಸಾಧನೆಯಾಗುತ್ತದೆ ಎಂದು ಸುಮ್ಮನಿದ್ದೇನೆ. ಎಷ್ಟೇ ಪ್ರಯತ್ನಿಸಿದರೂ ದೇಹ ಸಣ್ಣ ಆಗ್ತಾ ಇಲ್ಲ. ಯಾರನ್ನೂ ಅವಲಂಬಿಸದೆ ಬದುಕಬೇಕು ಎಂದು ಆಸೆಯಿದ್ದರೂ ಏನನ್ನೂ ಮಾಡಲು ಆಸಕ್ತಿಯಿಲ್ಲ. ನನ್ನ ಜೀವನ ಸರಿಮಾಡಿಕೊಳ್ಳುವುದು ಹೇಗೆ?

ಹೆಸರು, ಊರು ಇಲ್ಲ

ಬಹಳ ನೋವಿನಿಂದ ಪತ್ರ ಬರೆದಿದ್ದೀರಿ. ಸ್ವಾವಲಂಬಿಯಾಗುವ ಉದ್ದೇಶ ಮತ್ತು ಬದುಕಿನಲ್ಲಿ ಸಾಧಿಸಬೇಕೆನ್ನುವ ಛಲವನ್ನು ಮೆಚ್ಚುತ್ತೇನೆ. ನಿಮ್ಮಲ್ಲಿ ದೈಹಿಕ ನ್ಯೂನತೆ ಇದೆ. ಅದನ್ನು ಮಾತ್ರ ಮನಸ್ಸಿನಲ್ಲಿ ತುಂಬಿಕೊಂಡಿರುವುದಕ್ಕಾಗಿ ನಿಮ್ಮೊಳಗಿನ ಇತರ ಉತ್ತಮಗುಣ, ಯೋಗ್ಯತೆಗಳನ್ನು ಗುರುತಿಸುವುದಕ್ಕೆ ನಿಮಗೇ ಸಾಧ್ಯವಾಗುತ್ತಿಲ್ಲ. ನಿಮ್ಮನ್ನು ನೀವೇ ತಿರಸ್ಕರಿಸುತ್ತಾ ಅವಮಾನ ಮಾಡಿಕೊಳ್ಳುತ್ತಿರುವಾಗ ಬೇರೆಯವರಿಂದ ಏನನ್ನು ನಿರೀಕ್ಷಿಸುತ್ತೀರಿ? ಎಲ್ಲರೂ ಅವಮಾನ ಮಾಡುತ್ತಿರುವುದು ನಿಮ್ಮ ದೈಹಿಕ ನ್ಯೂನತೆಗಳಿಗಲ್ಲ. ಆದರೆ ಅವುಗಳನ್ನು ಪೆಡಂಭೂತದಂತೆ ತಲೆಯಲ್ಲಿಟ್ಟುಕೊಂಡು ನಿಷ್ಕ್ರಿಯವಾಗಿ ಕುಳಿತಿರುವುದಕ್ಕೆ. ಮನಸ್ಸಿನಲ್ಲಿ ಆತಂಕವಿದ್ದಾಗ ತೂಕವೂ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ.

ಮೊದಲು ನಿಮ್ಮ ದೈಹಿಕ ಸ್ಥಿತಿಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಿ. ಅದರ ಮಿತಿಯೊಳಗೆ ನಾನು ಏನು ಮಾಡಲು ಸಾಧ್ಯ ಎಂದು ಯೋಚಿಸಿ. ಇದಕ್ಕಾಗಿ ಎಲ್ಲರ ಸಲಹೆ ಸಹಕಾರವನ್ನು ಹಿಂಜರಿಕೆಯಿಲ್ಲದೆ ಕೇಳಿ. ಆರಂಭದ ಸೋಲುಗಳನ್ನು ಒಪ್ಪಿಕೊಂಡು ಹಂತಹಂತವಾಗಿ ಬೆಳೆಯುವ ಯೋಜನೆಯನ್ನು ಹಾಕಿಕೊಳ್ಳಿ. ಕಾಲಿನ ತೊಂದರೆಗಳಿಗೆ ಸರ್ಕಾರದ ನೆರವಿನಿಂದ ಕೃತಕ ಸಾಧನಗಳನ್ನು ಅಳವಡಿಸಿಕೊಳ್ಳಲು ಸಾಧ್ಯವೇ ಎಂದು ವಿಚಾರಿಸಿ. ನಿಮ್ಮೊಳಗೆ ಮೂಡುವ ಸಂತೋಷ, ಸಮಾಧಾನವು ಜೀವನೋತ್ಸಾಹ ಕೊಡುತ್ತದೆಯಲ್ಲದೇ, ತೂಕವನ್ನೂ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

21ರ ಕಾಲೇಜು ವಿದ್ಯಾರ್ಥಿ. 3 ವರ್ಷಗಳಿಂದ ನೀಲಿಚಿತ್ರಗಳನ್ನು ನೋಡುತ್ತಾ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ. ಎಷ್ಟೋ ಸಲ ನಿಯಂತ್ರಿಸಲು ಪ್ರಯತ್ನಿಸಿ ಸೋತಿದ್ದೇನೆ. ಇದರಿಂದ ನನ್ನ ಆಲೋಚನೆಗಳು ವ್ಯತ್ಯಾಸಗೊಂಡು ಸಾಧನೆಗಳಿಗೆ ತೊಂದರೆಯಾಗುತ್ತಿದೆ. ಪರಿಹಾರ ತಿಳಿಸಿ.

-ನವೀನ್, ಊರಿನ ಹೆಸರಿಲ್ಲ.

ಸೂಕ್ಷ್ಮವಾದ ವಿಷಯದ ಕುರಿತು ಪ್ರಶ್ನೆ ಕೇಳಿದ ನಿಮ್ಮ ಧೈರ್ಯವನ್ನು ಮೆಚ್ಚುತ್ತೇನೆ. ನಿಮ್ಮನ್ನು ಕಾಡುತ್ತಿರುವುದು ಹಸ್ತಮೈಥುನದ ಬಗೆಗಿನ ತಪ್ಪು ತಿಳಿವಳಿಕೆಗಳು ಮಾತ್ರ. ವೈಜ್ಞಾನಿಕವಾಗಿ ಹಸ್ತಮೈಥುನ ಸಂಪೂರ್ಣವಾಗಿ ಸಹಜವಾದ, ಆರೋಗ್ಯಕರ ಪ್ರವೃತ್ತಿ. ತಾತ್ಕಾಲಿಕವಾಗಿ ಲೈಂಗಿಕ ಒತ್ತಡವನ್ನು ಕಡಿಮೆ ಮಾಡಿಕೊಂಡು ನಿಮ್ಮ ಜೀವನ ರೂಪಿಸಿಕೊಳ್ಳಲು ಮನಸ್ಸನ್ನು ತೊಡಗಿಸುವುದಕ್ಕೆ ಇದು ಸಹಾಯ ಮಾಡುತ್ತದೆ. ನೈರ್ಮಲ್ಯ ಮತ್ತು ಖಾಸಗಿತನವನ್ನು ಉಳಿಸಿಕೊಂಡರೆ ಇದರಿಂದ ತೊಂದರೆಯೇನಿಲ್ಲ. ಬಲವಂತವಾಗಿ ತಡೆಯಲು ಪ್ರಯತ್ನಿಸಿದರೂ ಸೋತು ಹತಾಶರಾಗಿದ್ದೀರಿ.

ಹಸ್ತಮೈಥುನಕ್ಕೆ ಕಲ್ಪನೆಗಳ ಅಗತ್ಯವಿರುತ್ತದೆ. ಅಂತಹ ಕಲ್ಪನೆಗಳಿಗಾಗಿ ನೀವು ನೀಲಿಚಿತ್ರವನ್ನು ಅವಲಂಬಿಸಿದ್ದೀರಿ. ಪ್ರಾರಂಭದಲ್ಲಿ ರೋಚಕವಾಗಿ ಕಾಣುತ್ತಿದ್ದ ನೀಲಿಚಿತ್ರಗಳ ಭ್ರಮಾಲೋಕ ನಿಮಗೆ ನಶೆಯಾಗಿ ಅಂಟಿಕೊಂಡಿದೆ. ಇದರಿಂದ ಹೊರಬರುವುದು ಕಷ್ಟವೇನಲ್ಲ. ನೀಲಿಚಿತ್ರಗಳನ್ನು ನೋಡುವಾಗ ಲೈಂಗಿಕ ಕ್ರಿಯೆಯನ್ನು ಗಮನಿಸದೆ ಅಲ್ಲಿ ಎಲ್ಲವೂ ಕೃತಕವಾಗಿರುವುದನ್ನು ಗಮನಿಸಿ. ಸಂದರ್ಭಗಳು, ನಟರ ಹಾವಭಾವ, ಉದ್ರೇಕ ಎಲ್ಲವೂ ಬಲವಂತದಿಂದ ಸೃಷ್ಟಿಸಿದ್ದು ಎಂದು ಗಮನಿಸಿ. ಪ್ಲಾಸ್ಟಿಕ್ ಹೂವು ಬಣ್ಣದಲ್ಲಿ ಆಕರ್ಷಕವಾದರೂ ತೋಟದ ಹೂವಿನ ನವಿರು, ನಾಜೂಕು, ಸುವಾಸನೆ ಅದಕ್ಕೆ ಇರುವುದಿಲ್ಲ. ಇದನ್ನು ನೆನಪಿನಲ್ಲಿಟ್ಟುಕೊಳ್ಳಿ. ಹಾಗೆಯೇ ನಿಮ್ಮನ್ನು ಪ್ರೀತಿಸುವ ವ್ಯಕ್ತಿಯ ಜೊತೆಗೆ ಲೈಂಗಿಕ ಕ್ರಿಯೆ ಹೇಗಿರಬಹುದು ಎಂದು ಯೋಚಿಸಿ. ಈ ಪ್ರಯೋಗವನ್ನು ಮತ್ತೆ ಮತ್ತೆ ಆಳವಾಗಿ ಯೋಚಿಸುತ್ತ, ಮಾಡುತ್ತ ಹೋಗಿ. ನಿಧಾನವಾಗಿ ಇವೆರಡರ ವ್ಯತ್ಯಾಸ ಮನದಟ್ಟಾಗುತ್ತ ಬಂದಂತೆ ನೀಲಿಚಿತ್ರಗಳು ಆಕರ್ಷಣೆ ಕಳೆದುಕೊಳ್ಳುತ್ತವೆ.

ಪಿಯು ಮುಗಿಸಿದ್ದೇನೆ. ಪೊಲೀಸ್ ಆಗಬೇಕೆಂಬ ಆಸೆಯಿದೆ. ಮನೆಯಲ್ಲಿ ಸಹಕಾರ ನೀಡುತ್ತಿಲ್ಲ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ.

-ಮಂಜುನಾಥ್, ಊರಿನ ಹೆಸರಿಲ್ಲ

ಮನೆಯಲ್ಲಿ ಸಹಕಾರ ನೀಡುತ್ತಿಲ್ಲ ಎಂದರೆ ನೀವು ಅವರ ಮೇಲೆ ಅವಲಂಬಿತರಾಗಿದ್ದೀರಿ ಎಂದಲ್ಲವೇ? ಅವಲಂಬನೆ ಹಣಕಾಸಿಗೆ ಸಂಬಂಧಿಸಿದ್ದಾದರೆ ನೀವು ಮೊದಲು ಸ್ವಾವಲಂಬಿಯಾಗಿ. ಜೊತೆಗೆ ನಿಮಗೆ ಸಿಗುವ ಸಮಯದ ಮಿತಿಯಲ್ಲಿ ಪೊಲೀಸ್ ಪರೀಕ್ಷೆಯ ತಯಾರಿಯನ್ನೂ ಮಾಡಿ. ನಿಮ್ಮ ಪರಿಶ್ರಮ, ಪ್ರಾಮಾಣಿಕತೆಯು ನಿಧಾನವಾಗಿಯಾದರೂ ಫಲ ನೀಡುತ್ತದೆ. ಪೊಲೀಸ್ ಆಗದಿದ್ದರೂ ನಿಮ್ಮೊಳಗಿನ ಶಕ್ತಿಯ ಅರಿವು ನಿಮಗಾಗಿರುತ್ತದೆ.

ಬೆಟ್ಟವನ್ನೇರಲು ಯಾರಾದರೂ ಹಿಂದಿನಿಂದ ತಳ್ಳಲೇಬೇಕೆಂದು ಹೇಗೆ ನಿರೀಕ್ಷಿಸುತ್ತೀರಿ? ಆಸಕ್ತಿಯಿದ್ದರೆ ನಾವೇ ಶ್ರಮದಿಂದ ಕಾಲುಗಳಿಗೆ ಶಕ್ತಿ ತುಂಬಿ ಮೇಲೆ ಹೋಗಬೇಕಲ್ಲವೇ?

44ರ ವಿವಾಹಿತೆ. ಮಗನಿದ್ದಾನೆ. ಗಂಡನಿಗೆ ವಿವಾಹಬಾಹಿರ ಸಂಬಂಧವಿದೆ. ಅವರೊಡನೆ ಜೀವನ ನಡೆಸಲು ಇಷ್ಟವಿಲ್ಲ. ಅವರು ವಿಚ್ಛೇದನವನ್ನು ಕೊಡುತ್ತಿಲ್ಲ. ಕಾನೂನಿನ ಪ್ರಕಾರ ಅವರಿಂದ ದೂರವಾಗಲು ಸಲಹೆ ನೀಡಿ.

ಹೆಸರು, ಊರು ಬೇಡ

ಸಾಮಾಜಿಕ ಗೌರವಕ್ಕಾಗಿ ಕುಟುಂಬ ಮತ್ತು ಲೈಂಗಿಕ ಸುಖಕ್ಕಾಗಿ ಪರಸ್ತ್ರೀ ಸಿಗುತ್ತಿರುವಾಗ ಪತಿ ಏಕೆ ವಿಚ್ಛೇದನಕ್ಕೆ ಒಪ್ಪಿಕೊಳ್ಳುತ್ತಾರೆ? ಕಷ್ಟದಲ್ಲಿರುವ ನೀವೇ ಮುಂದಿನ ಹೆಜ್ಜೆ ಇಡಬೇಕಲ್ಲವೇ? ನಿಮ್ಮ ಹಿಂಜರಿಕೆಯಿಂದಲೇ ಅವರಿಗೆ ಅನುಕೂಲವಾಗಿದೆಯಲ್ಲವೇ? ಸ್ನೇಹಿತರ ಮತ್ತು ತವರುಮನೆಯವರ ಸಹಾಯ ಪಡೆದು ವಕೀಲರನ್ನು ಸಂಪರ್ಕಿಸಿ. ಅಗತ್ಯವಿದ್ದರೆ ಮಹಿಳಾ ಸಾಂತ್ವನ ಕೇಂದ್ರಗಳನ್ನು ಸಂಪರ್ಕಿಸಿ. ವಿಚ್ಛೇದನ ನಿರ್ಧಾರವಾಗುವವರೆಗೆ ಜೀವನಾಂಶವನ್ನೂ ತಕ್ಷಣದಿಂದ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.