ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೀರೆಯ ಸೆಳೆತ.. ಏನಿದು ಸ್ಯಾರೀ ಗೌನ್?

Published : 30 ಆಗಸ್ಟ್ 2024, 21:27 IST
Last Updated : 30 ಆಗಸ್ಟ್ 2024, 21:27 IST
ಫಾಲೋ ಮಾಡಿ
Comments

ಹೆಣ್ಣು ಮಕ್ಕಳು ಯಾವುದೇ ಪ್ರಕಾರದ ಉಡುಗೆ ತೊಟ್ಟರೂ ಆಕರ್ಷಕವೇ! ಆದರೆ ಸೀರೆಯ ಸ್ಥಾನವೇ ಬೇರೆ. ಪುಟ್ಟ ಹುಡುಗಿಯಿಂದ ಯುವತಿಯವರೆಗೆ, ವಯಸ್ಕರಿಂದ ವೃದ್ಧರವರೆಗೆ ಸೀರೆಯ ಸೆಳೆತವನ್ನು ಹತ್ತಿಕ್ಕಲಾಗದು.

ಹೋಂ ಮೇಕರ್ ಆಗಲಿ ಉದ್ಯೋಗಸ್ಥೆಯಾಗಲಿ ತಮ್ಮದೇ ಆಯ್ಕೆಗಳಿರುತ್ತವೆ. ಸೀರೆ, ಗುಂಪಿನ ಆಕರ್ಷಕ ಬಿಂದು ಆಗುವುದು ಚಂದ. ಆದರೆ ಉಡುವುದಕ್ಕೆ ಸಮಯ ಹೆಚ್ಚು ಕಬಳಿಸುವುದು. ಕೆಲವು ಸೀರೆಗಳು ತ್ರಾಸವಿಲ್ಲದೆ ನೆರಿಗೆ ಸೆರಗು ಮೂಡುವಲ್ಲಿ ಸಹಕರಿಸಿದರೆ  ಮತ್ತೂ ಕೆಲವು ಕೊಂಚ ತ್ರಾಸ ನೀಡುವುದು. ಅದರಲ್ಲೂ ಈಗಿನ ವೇಗದ, ಅವಸರದ ಯುಗದಲ್ಲಿ ಸೀರೆ ಉಡಲು ತಾಳ್ಮೆಯುಂಟೇ! ಚೂಡಿ, ಲೆಗ್ಗಿನ್, ಸಲ್ವಾರ್ ಯಾ ಪ್ಯಾಂಟ್ ಟಾಪ್  ಧರಿಸಿ ಕಾಲೇಜು ಕಚೇರಿಗಳಿಗೆ ಧಾವಿಸುವುದು ಸಲೀಸು. ಇದಕ್ಕೆಲ್ಲ ಸಮಾಧಾನವೆಂಬಂತೆ ಈಗ ಟ್ರೆಂಡ್ ಆಗಿರುವುದು ಸ್ಯಾರೀ ಗೌನ್. 

ಏನಿದು ಸ್ಯಾರೀ ಗೌನ್?

ಕುಪ್ಪಸ ಮತ್ತು ಲಂಗದ ಭಾಗದೊಂದಿಗೆ ಒಂದುಬದಿಗೆ  ಸೀರೆಯ ಕೊನೆಯ ಸುತ್ತು ಮತ್ತು ಸೆರಗು ಬರುವಂತೆ ಹೆಚ್ಚುವರಿ ಬಟ್ಟೆ/ದಾವಣಿ  ಇರುತ್ತದೆ. ಒಮ್ಮೆಗೇ ಗೌನ್ ಏರಿಸಿ ದಾವಣಿಯನ್ನು ಸೆರಗಿನಂತೆ ಸುತ್ತಿ ಇಳಿಬಿಟ್ಟರೆ ಕ್ಷಣಾರ್ಧದಲ್ಲಿ ಸೇರಿ ಉಟ್ಟಾಗಿರುತ್ತದೆ.  ದಾವಣಿ ಪ್ರತ್ಯೇಕವಾಗಿ ಇರುವಾಗ ಅದರ  ಒಂದು ತುದಿಯನ್ನು ಗೌನ್ ಗೆ ಲೂಪ್ /ಗುಂಡಿಯ ಮೂಲಕ  ಸುಲಭವಾಗಿ ಸಿಕ್ಕಿಸಿಕೊಂಡರೆ ಸೆರಗು ಸಿದ್ಧ.   
ಇದರ ವಿಶೇಷವೆಂದರೆ, ದಾವಣಿಯನ್ನು  ಒಂದು ಭುಜಕ್ಕೆ ಇಳಿಸಿದರೆ ಗೌನ್ ದುಪ್ಪಟ್ಟಾ ಲುಕ್ ಕೊಡುತ್ತದೆ. 

ಸ್ಯಾರೀ  ಗೌನ್‌ ವಿಶೇಷಗಳನ್ನು ಹೇಳಬಹುದಾದರೆ ಗೌನ್‌ನ ಎದೆಯ ಭಾಗದವರೆಗಿನ ಕುಬುಸ ತೋಳಿರುವ, ತೋಳಿರದ, ಮುಕ್ಕಾಲು ತೋಳು, ಮೆಗಾ ಸ್ಲೀವ್.  ಬೋಟ್ ನೆಕ್, ಶೋಲ್ದೆರ್  ಸ್ಟ್ರಾಪ್ಸ್ , ಕಾಲರ್ ನೆಕ್, ಹೀಗೆ ಬಗೆಬಗೆಯಾಗಿ ನಮ್ಮ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು. 

ಇನ್ನು ಗೌನ್ ಭಾಗಕ್ಕೆ ಬಂದರೆ ಲೈನಿಂಗ್ ನೊಂದಿಗೆ  ಸಾದಾ ಲಂಗ, ಅನಾರ್ಕಲಿ, ಎ ಲೈನ್, ಪ್ಲೀಟೆಡ್, ಲೇಯರ್ಡ್‌, tiered ,  ರಫಲ್ಸ್‌, ಹೈಲೋ,  , ಫಿಶ್ ಕಟ್, ಬಾಲ್ ಗೌನ್ ಬ್ರೈಡಲ್ ಗೌನ್ ಹೀಗೆ ಹತ್ತು ಹಲವು ವಿನ್ಯಾಸಗಳು ಮಾರುಕಟ್ಟೆಯಲ್ಲಿ  ಸಿಗುತ್ತವೆ. 

ಎಲ್ಲ ಬಗೆಯ ರೇಷ್ಮೆ, ಕ್ರೇಪ್ ಜಾರ್ಜೆಟ್ ಲೈಕ್ರ ನೆಟ್ಟೆ, ಆರ್ಗಾನ್ಜಾ, ಸ್ಯಾಟಿನ್, ಶಿಮ್ಮೆರ್, ಸೀಕ್ವಿನ್ಸ್, ಇತ್ಯಾದಿ ಬಟ್ಟೆಗಳಲ್ಲಿ ವಿನ್ಯಾಸಗೊಳಿಸಬಹುದು. 

ಇದು ಒಂದುರೀತಿ ಸಾಂಪ್ರದಾಯಿಕ ಹಾಗು ಸಮಕಾಲೀನ ಉಡುಗೆಯಾಗಿದೆ ಉಡುವವರ ಚೆಲುವನ್ನು ವರ್ಧಿಸುವುದೊಂದಿಗೆ, ಸಿಂಗಲ್ ಪೀಸ್ ಆದಕಾರಣ  ಸಮಯವನ್ನು ಉಳಿಸುವುದು ಇದರ ವಿಶೇಷತೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT