ವಿದೇಶಿ ಪ್ರವಾಸಿಗರಿಗೆ ನಮ್ಮ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿದರಷ್ಟೇ ಸಾಕೆ? ಬದುಕಿನ ಬನಿಯ ಅರಸಿ ಬರುವ ಯಾತ್ರಿಕರಿಗೆ, ಪ್ರವಾಸೋದ್ಯಮದ ಪರಿಕಲ್ಪನೆಯ ಆಚೆಗೂ ಮೀರಿದ ಆತ್ಮೀಯತೆಯ ನಂಟನ್ನು ಉಣಬಡಿಸುವ ಜರೂರೂ ಇದೆಯಲ್ಲವೇ? ಅಂತಹದ್ದೊಂದು ಕಾಯಕದಲ್ಲಿ ನಿರತರಾಗಿದ್ದಾರೆ ಮೈಸೂರಿನ ಶಶಿಕಲಾ ಅಶೋಕ್. ವಿದೇಶಿ ಅತಿಥಿಗಳಿಗೆ ಆತಿಥ್ಯವನ್ನಷ್ಟೇ ಅಲ್ಲ ಭಾರತೀಯ ಸಂಸ್ಕೃತಿಯ ಸೊಬಗನ್ನೂ ಪರಿಚಯಿಸುವ ವಿಶೇಷ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದಾರೆ.
ನಮಸ್ತೆ, ಹೇಗಿದ್ದೀರಿ?– ಸೀರೆಯುಟ್ಟು ಸಂಭ್ರಮಿಸುತ್ತಿರುವ ವಿದೇಶಿ ಮಹಿಳೆಯರು
ಮೈಸೂರಿನ ತಾಣಗಳನ್ನು ನೋಡಿ ಖುಷಿಯಾಯಿತು. ಬಾಳೆ ಎಲೆ ಮೇಲಿನ ಊಟ ವಿಸ್ಮಯ ಮೂಡಿಸಿತು. ಸೀರೆ ಮಲ್ಲಿಗೆ ಹೂವು ತೊಟ್ಟು ಪುಳಕಗೊಂಡಿರುವೆ. ಸೀರೆ ಉಡಬೇಕೆಂಬ ಆಸೆ ಕೈಗೂಡಿತು.
– ವಜೇನಿಯಾ, ಜರ್ಮನಿ
ಉದ್ದನೆಯ ಸೀರೆ ಕಂಡು ಅಚ್ಚರಿಗೊಂಡೆವು. ಅದನ್ನು ಉಟ್ಟುಕೊಳ್ಳುವ ವಿಧಾನ ಆಸಕ್ತಿದಾಯಕ.