ಹವಾಮಾನ ಬದಲಾದಂತೆ ನಮ್ಮ ಆಹಾರ ಪದ್ಧತಿ, ಉಡುಪು ಕೂಡ ಬದಲಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಬೆಚ್ಚನೆಯ ಉಡುಪು ಹಿತ ನೀಡಲಿದೆ. ಜಾಕೆಟ್, ಸ್ವೆಟರ್, ಸ್ಕಾರ್ಪ್ ಹೀಗೆ ಹಲವು ಬಗೆಯ ಬಟ್ಟೆಗಳಿಗೆ ಮೊರೆ ಹೋಗುವುದು ಸಹಜ. ಹಾಗಾದರೆ ಚಳಿಗಾಲದಲ್ಲಿ ಟ್ರೆಂಡ್ಗೆ ತಕ್ಕ ಹಾಗೆ ಯಾವ ರೀತಿಯ ಜಾಕೆಟ್ಗಳನ್ನು ಧರಿಸಬಹುದು ಎನ್ನುವುದನ್ನು ನೋಡುವುದಾದರೆ…

ಡೆನಿಮ್ ಜಾಕೆಟ್

ದಿನನಿತ್ಯ ಹೊರಗೆ ಹೋಗುವಾಗ ನಮಗಿಷ್ಟದ ಉಡುಪು ಧರಿಸುತ್ತವೆ. ಆದರೆ ಚಳಿಗಾಲದಲ್ಲಿ ಚರ್ಮದ ಬಗ್ಗೆ ತುಸು ಹೆಚ್ಚು ಕಾಳಜಿವಹಿಸಬೇಕಾಗಿರುವುದರಿಂದ ಜಾಕೆಟ್ ಧರಿಸುವುದು ಅಗತ್ಯ. ಅದಕ್ಕೆ ಬೆಸ್ಟ್ ಡೆನಿಮ್ ಜಾಕೆಟ್. ಜೀನ್ಸ್ ಬಟ್ಟೆಯಲ್ಲಿ ಇರುವ ಈ ಜಾಕೆಟ್ಗಳು ಕಪ್ಪು, ಕಡು ನೀಲಿ ಬಣ್ಣಗಳಲ್ಲಿ ಹೆಚ್ಚಾಗಿ ದೊರೆಯುತ್ತವೆ. ಟ್ರೆಂಡಿ ಆಗಿ ಕಾಣುವ ಈ ಜಾಕೆಟ್ಗಳು ಬೆಚ್ಚಗಿನ ಅನುಭವ ನೀಡುತ್ತದೆ.

ಉಣ್ಣೆಯ ಜಾಕೆಟ್

ಕಾಶ್ಮೀರಿ ಜಾಕೆಟ್ ಅಥವಾ ಉಣ್ಣೆಯ ಜಾಕೆಟ್ ಧರಿಸಲೂ ಮೃದು ಮತ್ತು ಸಖತ್ ಸ್ಟೈಲಿಶ್ ಆಗಿಯೂ ಕಾಣಿಸುತ್ತದೆ. ತಲೆಗೆ ಟೋಪಿ ಸಮೇತ ಸಿಗುವ ಈ ಜಾಕೆಟ್ಗಳು ಒಳಭಾಗದಲ್ಲಿ ಮೆತ್ತನೆಯ ಉಣ್ಣೆಯ ಎಳೆಗಳನ್ನು ಹೊಂದಿರುತ್ತವೆ. ಹೀಗಾಗಿ ಧರಿಸಲೂ ಹಿತ.

ಬ್ಲೇಜರ್ ಜಾಕೆಟ್

ಚಳಿಯನ್ನು ನಿಭಾಯಿಸಲು ಬ್ಲೇಜರ್ ಜಾಕೆಟ್ ಉತ್ತಮ. ಕೈತೋಳನ್ನು ಪೂರ್ಣವಾಗಿ ಆವರಿಸಿಕೊಂಡು ತಣ್ಣನೆಯ ವಾತಾವರಣದಿಂದ ಕಾಪಾಡುತ್ತದೆ. ಜಾಕೆಟ್ಗೆ ಒಳಭಾಗದಲ್ಲಿ ಉಣ್ಣೆಯ ಪದರ ಇರುವುದರಿಂದ ಋತುಮಾನಕ್ಕೆ ಉತ್ತಮ ಉಡುಗೆಯಾಗಿದೆ. ಕಚೇರಿಗಳಿಗೆ ತೆರಳುವವರಿಗೆ, ಪ್ರವಾಸ ಮಾಡುವವರಿಗೆ ಇದು ಸ್ಟೈಲಿಶ್ ಲುಕ್ ನೀಡುತ್ತದೆ.

ಕ್ರಾಪ್ ಜಾಕೆಟ್

ಸೊಂಟದವರೆಗೆ ಧರಿಸಬಹುದಾದ ಕ್ರಾಪ್ ಜಾಕೆಟ್ಗಳು ಟ್ರೆಂಡಿಯಾಗಿ ಕಾಣುತ್ತವೆ. ಶಾರ್ಟ್ ಫ್ರಾಕ್ ಅಥವಾ ಸ್ಕರ್ಟ್ಗೂ ಕ್ರಾಪ್ ಜಾಕೆಟ್ ಧರಿಸಬಹುದು. ಒವರ್ ಸೈಜ್ ಶರ್ಟ್ಗೆ ಜೀನ್ಸ್ ಧರಿಸಿ, ಅದರ ಮೇಲೆ ಕ್ರಾಪ್ ಜಾಕೆಟ್ ಮ್ಯಾಚ್ ಮಾಡಿದರೆ ಆಕರ್ಷಕವಾಗಿ ಕಾಣಲಿದೆ.

ಹೂಡಿಗಳು

ಸ್ವೆಟರ್ನಂತೆ ಕಾಣುವ ಹೂಡಿಗಳನ್ನು ಜೀನ್ಸ್ಗಳ ಮೇಲೆ ಧರಿಸಬಹುದು. ಸ್ಟೈಲಿಶ್ ಆಗಿಯೂ ಕಾಣುವ ಹೂಡಿಗಳನ್ನು ಟೀ ಶರ್ಟ್ಗಳ ಮೇಲೆ ಧರಿಸಬಹುದು. ಬೆಚ್ಚಗಿನ ಅನುಭವ ನೀಡುವ ಹೂಡಿಗಳು ವಿವಿಧ ಬಣ್ಣ, ವಿನ್ಯಾಸದಲ್ಲಿ ದೊರೆಯುತ್ತವೆ. ಟೀ ಶರ್ಟ್ಗಳ ಬದಲಾಗಿ ಹೂಡಿಗಳನ್ನು ಧರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.