ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕು ಲಿಂಗ ಸಂವೇದನೆಗೆ ಪೂರಕವಾದ ಪಠ್ಯಕ್ರಮ: ಕವಯಿತ್ರಿ ಶ್ರುತಿ ಬಿ.ಆರ್‌.

Last Updated 6 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಸ್ತ್ರೀ ಅಸ್ಮಿತೆ ಎಂಬುದು ಹೆಣ್ಣು ಸಹ ತನ್ನ ಅಭಿಪ್ರಾಯ ಮತ್ತು ಅಪೇಕ್ಷೆಯಂತೆ ನಡೆಯಬಹುದೆಂಬ ಪ್ರಜ್ಞೆಯಾಗಿದೆ. ಕೌಟುಂಬಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಮಹಿಳೆ ಹೊಂದಿರುವ ಸ್ಥಾನಮಾನವೂ ಅವಳ ಅಸ್ಮಿತೆಯ ಪ್ರತೀಕ. ಹೆಣ್ಣು ಮನೆಯಿಂದ ಹೊರಗೆ ಕಾಲಿಡಲು ಸಾಧ್ಯವಿಲ್ಲದ ಕಾಲವೊಂದಿತ್ತು. ಅಂತರಿಕ್ಷಕ್ಕೂ ಹಾರುವ ಅವಕಾಶವಿರುವ ಆಧುನಿಕ ಪ್ರಪಂಚದಲ್ಲಿ ನಾವಿದ್ದೇವೆ. ಯಾವುದೇ ರಂಗದಲ್ಲೂ ಮಹಿಳೆ, ಪುರುಷನಿಗೆ ಸಮನಾಗಿ ಕೆಲವೊಮ್ಮೆ ಪುರುಷನಿಗೂ ಮಿಗಿಲಾಗಿ ಕೆಲಸ ಮಾಡಬಲ್ಲಳೆಂಬುದು ಸಾಬೀತಾದ ಕಾಲಘಟ್ಟವಿದು. ಆದರೂ ಸ್ತ್ರೀ ಅಸ್ಮಿತೆಗೆ ಧಕ್ಕೆ ತರುವ ಹಲವಾರು ಅಂಶಗಳು ಇಂದಿಗೂ ಜ್ವಲಂತವಾಗಿವೆ.

ಮಹಿಳೆಯರು, ಜಾತಿವಾರು ಗುಂಪುಗಳಷ್ಟು ಪ್ರಬಲ ಒತ್ತಡ ಗುಂಪಾಗಿ ಒಟ್ಟಾಗದಿರುವುದು, ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಸಮಸ್ಯೆಗಳಿಂದ ಮಹಿಳೆಯರನ್ನು ರಕ್ಷಿಸಲು ಪ್ರಬಲವಾದ ಕಾನೂನುಗಳನ್ನು ತರುವಲ್ಲಿ ಶಾಸಕಾಂಗ ಇಚ್ಛಾಶಕ್ತಿ ಪ್ರದರ್ಶಿಸದಿರಲು ಕಾರಣವಾಗಿದೆ. ಮಹಿಳೆಯರ ನಿಜವಾದ ರಾಜಕೀಯ ಸಹಭಾಗಿತ್ವ, ಪ್ರಾತಿನಿಧ್ಯ ಹೆಚ್ಚಾಗಬೇಕು. 2020ರ ಲಾಕ್‌ಡೌನ್ ಸಂದರ್ಭದಲ್ಲಿ ಕೌಟುಂಬಿಕ ಹಿಂಸೆ ಪ್ರಕರಣಗಳು ದುಪ್ಪಟ್ಟಾಗಿದ್ದನ್ನು ರಾಷ್ಟ್ರೀಯ ಮಹಿಳಾ ಆಯೋಗದ ತಜ್ಞರ ವರದಿ ಎತ್ತಿತೋರಿತ್ತು. ಕೌಟುಂಬಿಕ ಹಿಂಸೆಯು ಮಾನಸಿಕ ಮತ್ತು ದೈಹಿಕವಾಗಿ ಗಾಸಿಗೊಳಿಸಿ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಬಾಲ್ಯದಿಂದಲೇ ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಲ್ಲೂ ಲಿಂಗ ಸಂವೇದನೆಯನ್ನು (Gender sensitivity) ಬೆಳೆಸಲು ಪೂರಕವಾದ ಪಠ್ಯಕ್ರಮಗಳನ್ನು ರೂಪಿಸುವುದು ಇಂದಿನ ಜರೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT