ಸೋಮವಾರ, ಅಕ್ಟೋಬರ್ 25, 2021
26 °C

ಗಿನ್ನೆಸ್‌ ದಾಖಲೆ ಬರೆದ ಜಪಾನಿನ 107 ವರ್ಷದ ಅವಳಿ ಸಹೋದರಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ (ಎಪಿ): ಜಪಾನಿನ 107 ವರ್ಷ ಮತ್ತು 330 ದಿನಗಳ ವಯಸ್ಸಿನ ಇಬ್ಬರು ಸಹೋದರಿಯರು ವಿಶ್ವದ ಅತ್ಯಂತ ಹಿರಿಯ ಅವಳಿ ಜೀವಗಳೆಂದು ಗಿನ್ನೆಸ್ ವಿಶ್ವ ದಾಖಲೆಗಳಿಂದ ಪ್ರಮಾಣೀಕರಿಸಲ್ಪಟ್ಟಿದ್ದಾರೆ ಎಂದು ಸಂಸ್ಥೆ ಸೋಮವಾರ ತಿಳಿಸಿದೆ.

ಜಪಾನಿನ ರಾಷ್ಟ್ರೀಯ ರಜಾ ದಿನವಾದ ವೃದ್ಧರ ದಿನಾಚರಣೆಯಂದು ಈ ಘೋಷಣೆ ಹೊರಬಿದ್ದಿದೆ.

ಸಹೋದರಿಯರಾದ ಉಮೆನೊ ಸುಮಿಯಮಾ ಮತ್ತು ಕೌಮೆ ಕೊಡಮಾ ಅವರು 1913ರ ನವೆಂಬರ್ 5ರಂದು ಪಶ್ಚಿಮ ಜಪಾನ್‌ನ ಶೋಡೋಶಿಮಾ ದ್ವೀಪದಲ್ಲಿ ಜನಿಸಿದವರು. 11 ಮಂದಿ ಒಡಹುಟ್ಟಿದವರಲ್ಲಿ ಈ ಅವಳಿಗಳು ಮೂರನೆಯ ಮತ್ತು ನಾಲ್ಕನೆಯವರಾಗಿ ಜನ್ಮತಾಳಿದವರು.

ಜಪಾನಿನ ಪ್ರಸಿದ್ಧ ಅವಳಿ ಸಹೋದರಿಯರಾದ ಕಿನ್ ನರಿಟಾ ಮತ್ತು ಜಿನ್ ಕಾನಿ (107 ವರ್ಷಗಳು ಮತ್ತು 175 ದಿನಗಳು) ಅವರ ಹೆಸರಿನಲ್ಲಿ ಇದೇ ಸೆಪ್ಟೆಂಬರ್ 1ರವರೆಗೆ ಇದ್ದ ದಾಖಲೆಯನ್ನು ಮುರಿದಿದ್ದಾರೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಲಿಮಿಟೆಡ್ ಹೇಳಿಕೆಯಲ್ಲಿ ತಿಳಿಸಿದೆ.

12.50 ಕೋಟಿ ಜನಸಂಖ್ಯೆ ಇರುವ ಜಪಾನ್‌ ವಿಶ್ವದಲ್ಲಿ ಅತ್ಯಂತ ವೇಗವಾಗಿ ವಯಸ್ಸಾದ ಜನಸಂಖ್ಯೆ ಹೊಂದುತ್ತಿರುವ ರಾಷ್ಟ್ರವಾಗಿದೆ. ಈ ದೇಶದ ಜನಸಂಖ್ಯೆಯ ಶೇ 29ರಷ್ಟು ಜನರು 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು. ಇವರಲ್ಲಿ ಸುಮಾರು 86,510 ಮಂದಿ ಶತಾಯುಷಿಗಳಾಗಿದ್ದು, ಇವರಲ್ಲಿ ಅರ್ಧದಷ್ಟು ಜನರಿಗೆ ಈ ವರ್ಷ 100 ವರ್ಷ ತುಂಬಿದೆ ಎಂದಿದೆ ಆರೋಗ್ಯ ಮತ್ತು ಕಲ್ಯಾಣ ಸಚಿವಾಲಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು