ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ನೌಕಾಪಡೆಯಿಂದ 15 ಭಾರತೀಯ ಮೀನುಗಾರರ ಬಂಧನ

Last Updated 6 ನವೆಂಬರ್ 2022, 12:49 IST
ಅಕ್ಷರ ಗಾತ್ರ

ಕೊಲಂಬೊ: ತನ್ನ ದೇಶದ ಸಮುದ್ರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದ ಆರೋಪದಡಿ ಶ್ರೀಲಂಕಾ ನೌಕಾಪಡೆ 15 ಭಾರತೀಯ ಮೀನುಗಾರರನ್ನು ಬಂಧಿಸಿ, ಎರಡು ಟ್ರಾಲರ್ ದೋಣಿಗಳನ್ನು ವಶಪಡಿಸಿಕೊಂಡಿದೆ.

ಮನ್ನಾರ್ ದ್ವೀಪದ ವಾಯವ್ಯ ಭಾಗದ ಜನವಸತಿ ಪ್ರದೇಶವಾದ ತಲೈಮನ್ನಾರ್‌ನಲ್ಲಿ ಶನಿವಾರ ಮೀನುಗಾರರನ್ನು ಬಂಧಿಸಲಾಗಿದ್ದು, ಅವರನ್ನು ಮೀನುಗಾರಿಕಾ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ನೌಕಾಪಡೆ ಮೂಲಗಳು ತಿಳಿಸಿದೆ.

ಭಾರತ ಹಾಗೂ ಶ್ರೀಲಂಕಾ ವ್ಯಾಪ್ತಿಯಲ್ಲಿರುವ ಸಮುದ್ರದ ಗಡಿಯಲ್ಲಿ ಉಭಯದೇಶಗಳ ಮೀನುಗಾರರು ಅಕ್ರಮವಾಗಿ ಮೀನುಗಾರಿಕೆ ಮಾಡುವ ಆರೋಪ, ಪ್ರತ್ತ್ಯಾರೋಪಗಳು ಸಾಕಷ್ಟು ಬಾರಿ ಕೇಳಿ ಬಂದಿದ್ದು, 32ನೇ ಅಂತಾರಾಷ್ಟ್ರೀಯ ಮರೈನ್‌ ಗಡಿ ಕುರಿತ ಸಭೆಯಲ್ಲೂ ಚರ್ಚೆ ನಡೆದಿದೆ. ಅಲ್ಲದೇ ಈ ಕುರಿತು ಉಭಯ ದೇಶಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆಯುತ್ತಿದ್ದರೂ ಈವರೆಗೂ ಪರಿಹಾರ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT