ಪಾಕ್–ಅಫ್ಗನ್ ಗಡಿಯಲ್ಲಿ ಆತ್ಮಹತ್ಯಾ ದಾಳಿ: ಇಬ್ಬರ ಸಾವು

ಪೇಶಾವರ: ಪಾಕಿಸ್ತಾನದ ವಾಯವ್ಯ ಭಾಗವಾದ ಖೈಬರ್ ಫಂಕ್ತುವ್ವಾ ಪ್ರಾಂತ್ಯದಲ್ಲಿ ಗುರುವಾರ ಸಂಭವಿಸಿದ ಉಗ್ರನ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಒಬ್ಬ ಯೋಧ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
ಅಫ್ಗಾನಿಸ್ತಾನ್ ಗಡಿಯಲ್ಲಿರುವ ಉತ್ತರ ವಾಜಿರಿಸ್ತಾನ್‌ದ ಮಿರಾನ್‌ಶಾ ಪಟ್ಟಣದ ಸೇನಾ ಕಚೇರಿ ಬಳಿ ಈ ಘಟನೆ ನಡೆದಿದೆ.
ಘಟನೆಯಲ್ಲಿ ಯೋಧ ಸೇರಿದಂತೆ ಒಬ್ಬ ನಾಗರಿಕ ಮೃತಪಟ್ಟಿದ್ದು, 9 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಸೇನಾ ವಕ್ತಾರರು ತಿಳಿಸಿದ್ದಾರೆ. ಇದುವರೆಗೆ ಯಾವುದೇ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.
ಘಟನೆ ನಡೆದ ಈ ಪ್ರದೇಶದಲ್ಲಿ ತಾಲಿಬಾನ್ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ನೋಡುತ್ತಿದೆ. ಬಲೂಚಿಸ್ತಾನ್ ಸೇರಿದಂತೆ ಈ ಭಾಗದಲ್ಲಿ ಉಗ್ರರ ದಾಳಿಗಳು ಪುನಾರಾವರ್ತನೆಯಾಗುತ್ತಿವೆ.
ಇನ್ನು ಈ ಘಟನೆಯನ್ನು ಪಾಕ್ ಪ್ರಧಾನಿ ಶಹಬಾಜ್ ಶರೀಫ್ ಅವರು ತೀವ್ರವಾಗಿ ಖಂಡಿಸಿದ್ದು, ಮುಸ್ಲಿಂ ಮೇಲೆ ದಾಳಿ ಮಾಡುವ ಮತ್ತೊಬ್ಬ ಮುಸ್ಲಿಂ ಖಂಡಿತವಾಗಿಯೂ ಮುಸ್ಲಿಂ ಆಗಿರುವುದಿಲ್ಲ ಎಂದು ಪರೋಕ್ಷವಾಗಿ ತಾಲಿಬಾನ್ ವಿರುದ್ಧ ಕಿಡಿಕಾರಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.