ಬುಧವಾರ, ಏಪ್ರಿಲ್ 14, 2021
23 °C

2020: ಹೆಚ್ಚು ತಾಪಮಾನ ದಾಖಲಾದ ವರ್ಷ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ಕಳೆದ ದಶಕದಲ್ಲಿ ಗರಿಷ್ಠ ತಾಪಮಾನ ದಾಖಲಾದ ಮೂರು ವರ್ಷಗಳ ಪೈಕಿ 2020ನೇ ವರ್ಷವೂ ಒಂದು. ಹವಾಮಾನದಲ್ಲಿನ ಈ ಬದಲಾವಣೆ ಮಾನವ ನಿರ್ಮಿತ ಎಂದು ವಿಶ್ವಸಂಸ್ಥೆಯ ಹವಾಮಾನ ಸಂಸ್ಥೆ ಹೇಳಿದೆ.

ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) 2011–2020ರ ಅವಧಿಯಲ್ಲಿ ದಾಖಲಿಸಿದ ಹವಾಮಾನಕ್ಕೆ ಸಂಬಂಧಿಸಿದ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಿದ್ದು, ಈ ಹಿಂದಿನ ದಶಕಗಳಿಗೆ ಹೋಲಿಸಿದರೆ 2011–2020 ಅವಧಿಯ ವರ್ಷಗಳಲ್ಲಿ ಹೆಚ್ಚು ತಾಪಮಾನ ದಾಖಲಾಗಿದೆ ಎಂದಿದೆ.

‘2015ರ ನಂತರದ ವರ್ಷಗಳಲ್ಲಿ ಹೆಚ್ಚು ತಾಪಮಾನ ದಾಖಲಾಗಿದೆ. ಈ ಪೈಕಿ 2016, 2019 ಹಾಗೂ 2020 ಗರಿಷ್ಠ ತಾಪಮಾನ ದಾಖಲಾದ ವರ್ಷಗಳಾಗಿವೆ. ಈ ಮೂರು ವರ್ಷಗಳಲ್ಲಿನ ತಾಪಮಾನಕ್ಕೂ, ಜಾಗತಿಕ ತಾಪಮಾನಕ್ಕೂ ಹೆಚ್ಚು ವ್ಯತ್ಯಾಸ ಇರಲಿಲ್ಲ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಹೇಳಿದ್ದಾರೆ.

‘ಹವಾಮಾನದಲ್ಲಿನ ಈ ಬದಲಾವಣೆ ಜನರ ಬದುಕಿನ ಮೇಲೆ ಪರಿಣಾಮ ಬೀರುವುದು. ಈ ಶತಮಾನದಲ್ಲಿ ಜಾಗತಿಕ ತಾಪಮಾನದಲ್ಲಿ 3–5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳ ಕಂಡುಬಂದರೆ ಅಚ್ಚರಿಯಿಲ್ಲ. ಇದೇ ಗತಿಯಲ್ಲಿ ತಾಪಮಾನ ಹೆಚ್ಚುತ್ತಾ ಹೋದರೆ ಮುಂದೊಂದು ದಿನ ಭಾರಿ ದುರಂತ ತಪ್ಪಿದ್ದಲ್ಲ’ ಎಂದೂ ಅವರು ಎಚ್ಚರಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು