ಇಂಡೊನೇಷ್ಯಾದ ಕರಾವಳಿಯಲ್ಲಿ ದೋಣಿ ಮುಳುಗಿ 26 ಮಂದಿ ನಾಪತ್ತೆ

ಜಕಾರ್ತ: ಇಂಡೊನೇಷ್ಯಾದ ಕರಾವಳಿಯಲ್ಲಿ ಇಂಧನ ಖಾಲಿಯಾಗಿ ದೋಣಿಯೊಂದು ಮುಳುಗಿದೆ. ಈ ಘಟನೆಯಲ್ಲಿ 26 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಸುಲವೆಸಿ ಮತ್ತು ಬೊರ್ನಿಯೊ ದ್ವೀಪಗಳನ್ನು ಬೇರ್ಪಡಿಸುವ ಮಕಾಸ್ಸರ್ ಜಲಸಂಧಿಯಲ್ಲಿ ಗುರುವಾರ ಹಡಗು ಮುಳುಗಿತು. ಅದು 43 ಜನರನ್ನು ಹೊತ್ತೊಯ್ಯುತ್ತಿತ್ತು. ಅದರಲ್ಲಿ ಹದಿನೇಳು ಜನರನ್ನು ಜೀವಂತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಾಪತ್ತೆಯಾದ ಇತರರನ್ನು ಹುಡುಕಲು ರಕ್ಷಣಾ ತಂಡವನ್ನು ನಿಯೋಜಿಸಲಾಗಿದೆ. ಶೋಧ ಕಾರ್ಯ ನಡೆಯುತ್ತಿದೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.