ಶುಕ್ರವಾರ, ಸೆಪ್ಟೆಂಬರ್ 25, 2020
22 °C
ನೈಜರ್: ಅಪರಿಚಿತ ವ್ಯಕ್ತಿಯಿಂದ ಗುಂಡಿನ ದಾಳಿ

ನೈಜರ್‌ ಜಿರಾಫೆ ಪಾರ್ಕ್‌ಗೆ ಬಂದಿದ್ದ ಫ್ರಾನ್ಸ್‌ ಪ‍್ರವಾಸಿಗರೂ ಸೇರಿ 8 ಮಂದಿ ಕೊಲೆ

ಎಪಿ Updated:

ಅಕ್ಷರ ಗಾತ್ರ : | |

Prajavani

ನಿಯಾಮೆ(ನೈಜರ್‌): ಇಲ್ಲಿಗೆ ಸಮೀಪದ ವನ್ಯಜೀವಿಧಾಮವೊಂದರಲ್ಲಿ ಭಾನುವಾರ ಅಪರಿಚಿತ ವ್ಯಕ್ತಿಯೊಬ್ಬ ಆರು ಮಂದಿ ಫ್ರಾನ್ಸ್‌ ಪ್ರಜೆಗಳು ಮತ್ತು ಇಬ್ಬರು ನೈಜೀರಿಯನ್‌ ಗೈಡ್‌ಗಳನ್ನು ಗುಂಡಿಕ್ಕಿ ಕೊಂದಿದ್ದಾನೆ.

ವನ್ಯಜೀವಿಧಾಮದಲ್ಲಿರುವ ಕೌರೆ ಎಂಬತಿ ಕಾಯ್ದಿಟ್ಟ ಜಿರಾಫೆ ಸಂರಕ್ಷಣಾ ಪ್ರದೇಶದಲ್ಲಿ ಈ ದಾಳಿ ನಡೆದಿದೆ ಎಂದು ನೈಜರ್‌ನ ಸಚಿವರೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷರ ಕಚೇರಿಯೂ ಈ ವಿಷಯವನ್ನು ದೃಢಪಡಿಸಿದೆ. 

ಈ ಪ್ರದೇಶವು ಸಂರಕ್ಷಿತ ರಾಷ್ಟ್ರೀಯ ಉದ್ಯಾನವನವಾಗಿದ್ದು, ರಾಜಧಾನಿಯ ಆಗ್ನೇಯಕ್ಕೆ 70 ಕಿಲೋಮೀಟರ್ (45 ಮೈಲಿ) ದೂರದಲ್ಲಿ. ದಟ್ಟವಾದ ಸಸ್ಯಸಂಪತ್ತನ್ನು ಹೊಂದಿದ್ದು, ಎತ್ತರದ ಮರಗಳಿವೆ. ವಿಶಿಷ್ಟ ಜಿರಾಫೆಗಳನ್ನು ನೋಡುವುದಕ್ಕಾಗಿಯೇ ಪ್ರತಿವರ್ಷ ನೂರಾರು ಜನರು ಈ ವನ್ಯಜೀವಿ ಧಾಮಕ್ಕೆ ಭೇಟಿ ನೀಡುತ್ತಾರೆ. ಈ ಉದ್ಯಾನವು ಟಿಲ್ಲಾಬೆರಿ ಪ್ರದೇಶದಲ್ಲಿದೆ. ಇಲ್ಲಿರುವ ಐಎಸ್‌ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಜಿಹಾದಿಗಳು 2017ರಲ್ಲಿ ನಾಲ್ವರು ಅಮೆರಿಕ ನಾಗರಿಕರು ಮತ್ತು ಇಬ್ಬರು ನೈಜೀರಿಯನ್‌ ಪ್ರಜೆಗಳನ್ನು ಹತ್ಯೆ ಮಾಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು