ಶನಿವಾರ, ಜನವರಿ 28, 2023
18 °C
ವಾಗ್ವಾದದ ವೇಳೆ ಶಿಕ್ಷಕಿಗೆ ಗುಂಡು ಹೊಡೆದ 6 ವರ್ಷದ ವಿದ್ಯಾರ್ಥಿ

ಒಂದನೇ ತರಗತಿ ಬಾಲಕನಿಂದ ಶಿಕ್ಷಕಿಗೆ ಗುಂಡೇಟು

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ವರ್ಜೀನಿಯಾ (ಅಮೆರಿಕ): ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಆರು ವರ್ಷದ ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿ  ಶಿಕ್ಷಕಿಗೆ ಗುಂಡು ಹೊಡೆದ ಆಘಾತಕಾರಿ ಘಟನೆ ಅಮೆರಿಕದ ವರ್ಜೀನಿಯಾದಿಂದ ವರದಿಯಾಗಿದೆ.

ಶುಕ್ರವಾರ ಇಲ್ಲಿನ ರಿಚ್‌ನೆಕ್ ಎಲಿಮೆಂಟರಿ ಶಾಲೆಯಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿ ಹಾಗೂ ಶಿಕ್ಷಕಿಯ ನಡುವೆ ವಾಗ್ವಾದ ನಡೆಯುವ ವೇಳೆ, ವಿದ್ಯಾರ್ಥಿ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ 30 ವರ್ಷದ ಶಿಕ್ಷಕಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ತರಗತಿಯಲ್ಲಿದ್ದ ಉಳಿದ ಮಕ್ಕಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯಕ್ಕೆ ಬಳಸಿದ್ದ ಹ್ಯಾಂಡ್‌ಗನ್‌ ಹಾಗೂ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿದೆ. ಇದು ಆಕಸ್ಮಿಕವಾಗಿ ನಡೆದ ಘಟನೆ ಅಲ್ಲ ಎಂದು ಪೊಲೀಸರು ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

1 ರಿಂದ 5ನೇ ತರಗತಿವರೆಗೆ ಇರುವ ರಿಚ್‌ನೆಕ್‌ ಶಾಲೆಯಲ್ಲಿ ಸುಮಾರು 550 ವಿದ್ಯಾರ್ಥಿಗಳಿದ್ದು, ಸೋಮವಾರದವರೆಗೆ ರಜೆ ಸಾರಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು