ಗುರುವಾರ , ಜೂನ್ 30, 2022
25 °C

ಮೆಕ್ಸಿಕೊ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ 7 ಕಾರ್ಮಿಕರು: ಮುಂದುವರಿದ ಶೋಧ ಕಾರ್ಯ

ಎಪಿ Updated:

ಅಕ್ಷರ ಗಾತ್ರ : | |

Prajavani

ಮೆಕ್ಸಿಕೊ ನಗರ: ಉತ್ತರ ಮೆಕ್ಸಿಕೊ ಗಡಿಯಲ್ಲಿ ನಡೆಯುತ್ತಿರುವ ಸಣ್ಣ ಪ್ರಮಾಣದ ಕಲ್ಲಿದ್ದಲು ಗಣಿಗಾರಿಕಾ ಯೋಜನಾ ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ಏಳು ಕಾರ್ಮಿಕರು ಸ್ಥಳದಲ್ಲಿ ಸಿಲುಕಿಕೊಂಡಿದ್ದಾರೆ.

‘ಪ್ರವಾಹ ಮತ್ತು ಭೂ ಕುಸಿತದಿಂದಾಗಿ, ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ‘ ಎಂದು ಕೊವಾಹುಯಿಲಾ ಕಾರ್ಮಿಕ ಇಲಾಖೆ ತಿಳಿಸಿದೆ.

ಮುಜ್ಕ್ವಿಜ್ ಟೌನ್‌ಶಿಪ್‌ನಲ್ಲಿರುವ ಗಣಿ, ಕಡಿದಾದ ಭೂಮಿಯ ಗೋಡೆಗಳನ್ನು ಹೊಂದಿರುವ ಒಂದು ಬಗೆಯ ಆಳವಾದ, ಕಿರಿದಾದ, ತೆರೆದ ಹಳ್ಳದಂತಿದೆ. ಈ ಪ್ರದೇಶವು ಟೆಕ್ಸಾಸ್‌ನ ಈಗಲ್ ಪಾಸ್‌ನಿಂದ ನೈರುತ್ಯಕ್ಕೆ 130 ಕಿ.ಮೀ ದೂರದಲ್ಲಿದೆ.

ನೆಲದಾಳದಲ್ಲಿ ಸಿಲುಕಿರುವ ಕಾರ್ಮಿಕರ ಶೋಧ ಕಾರ್ಯ ಮುಂದುವರಿದಿದೆ. ಏಳು ಮಂದಿಯನ್ನು ರಕ್ಷಿಸಲು, ಹಳ್ಳದಿಂದ ನೀರನ್ನು ಹೊರ ತೆಗೆಯಲಾಗುತ್ತಿದೆ ಎಂದು ಫೆಡರಲ್ ಸಿವಿಲ್ ಡಿಫೆನ್ಸ್ ಆಫೀಸ್‌ ತಿಳಿಸಿದೆ.

ಕೊವಾಹುಯಿಲಾದಲ್ಲಿರುವ ಈ ಗಣಿಗಾರಿಕಾ ಪ್ರದೇಶದಲ್ಲಿ ಹಿಂದೆಯೂ ಅಪಘಾತಗಳು ಸಂಭವಿಸಿವೆ. ಈ ಯೋಜನೆಯ ಸಬಿನಾಸ್‌ ಗಣಿಯಲ್ಲಿ 2006ರ ಫೆಬ್ರವರಿಯಲ್ಲಿ ಮೀಥೇನ್ ಅನಿಲ ಸ್ಪೋಟಗೊಂಡಿತ್ತು. ಇದರಿಂದ 65 ಕಾರ್ಮಿಕರು ಮೃತಪಟ್ಟಿದ್ದರು.

ಇದನ್ನೂ ಓದಿ... ಕೋವಿಡ್‌ ಲಸಿಕೆ ಪಡೆದ ವಿದೇಶಿ ಪ್ರವಾಸಿಗರನ್ನು ಸ್ವಾಗತಿಸಿದ ಫ್ರಾನ್ಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು