ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್‌: ನೆದರ್ಲೆಂಡ್‌ಗಾಗಿ ದುಡಿದ ಅಫ್ಗನ್ನರ ಕುಟುಂಬಕ್ಕೆ ಜೀವಬೆದರಿಕೆ

Last Updated 5 ಅಕ್ಟೋಬರ್ 2021, 12:23 IST
ಅಕ್ಷರ ಗಾತ್ರ

ಹೇಗ್‌, ನೆದರ್‌ಲ್ಯಾಂಡ್‌: ನೆದರ್‌ಲ್ಯಾಂಡ್‌ ದೇಶಕ್ಕಾಗಿ ಕೆಲಸ ಮಾಡಿದ ಅಫ್ಗನ್‌ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗುವಂತೆ ತಾಲಿಬಾನ್‌ ಸಮನ್ಸ್‌ ನೀಡಿದೆ ಎಂದು ಡಚ್‌ ಸಾರ್ವಜನಿಕ ವಾಹಿನಿ ಎನ್‌ಒಎಸ್‌ ಶುಕ್ರವಾರ ವರದಿ ಮಾಡಿದೆ.

ಅಧಿಕಾರಿಗಳ ಕುಟುಂಬದವರಿಗೆತಾಲಿಬಾನ್‌ ಸೈನಿಕರು ಜೀವಬೆದರಿಕೆ ಹಾಕಿದ್ದಾರೆ ಎಂದೂ ವಾಹಿನಿ ಹೇಳಿದೆ.

‘ಅಧಿಕಾರಿಗಳು ತಲೆಮರೆಸಿಕೊಂಡಿದ್ದಾರೆ. ಆದರೆ ಅವರು ನ್ಯಾಯಾಲಯಕ್ಕೆ ಹಾಜರಾಗುವಲ್ಲಿ ವಿಫಲರಾದರೆ ಅವರ ಕುಟುಂಬ ಸದಸ್ಯರು ಜವಾಬ್ದಾರರಾಗುತ್ತಾರೆ. ಇತರ ದೇಶದ್ರೋಹಿಗಳಿಗೆ ಪಾಠ ಕಲಿಸಲು ಅವರಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿ ತಾಲಿಬಾನ್‌ ಸರ್ಕಾರ ಪತ್ರದಲ್ಲಿ ಹೇಳಿದೆ’ ಎಂದು ವಾಹಿನಿ ಪ್ರಸಾರ ಮಾಡಿದೆ.

ಅಫ್ಗಾನಿಸ್ತಾನದಲ್ಲಿ ಬೇರೆ ದೇಶಗಳಿಗೆ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ವಿದೇಶಿಗರಿಂದ ಅಪ್ರಾಮಾಣಿಕ ಮತ್ತು ನಿಷೇಧಿತ ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

‘ನಾವು ನಿಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ. ನಾವು ನಿಮ್ಮನ್ನು ಹಿಡಿಯಲಾಗದಿದ್ದರೆ ನಿಮ್ಮ ಬಂಧುಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ತನ್ನ ಸೈನಿಕರ ಸಾವಿಗೆ ಕಾರಣರಾದವರು ಎಂದು ಭಾವಿಸಿದ ಅಧಿಕಾರಿಗಳಿಗೆ ಮತ್ತೊಂದು ಪತ್ರದಲ್ಲಿ ತಾಲಿಬಾನ್‌ ಎಚ್ಚರಿಸಿದೆ.

ತನ್ನ ಅಧಿಕೃತ ಮುದ್ರೆಗಳನ್ನು ಹೊಂದಿರುವ ಪತ್ರಗಳನ್ನು ತಾಲಿಬಾನ್‌ ರವಾನಿಸಿದೆ ಎಂದು ಎನ್‌ಒಎಸ್‌ ವಾಹಿನಿ ವರದಿ ಹೇಳಿದೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT