ಸೋಮವಾರ, ನವೆಂಬರ್ 28, 2022
20 °C

ಅಫ್ಗಾನಿಸ್ತಾನ: 9 ಮಹಿಳೆ ಸೇರಿ19 ಜನರಿಗೆ ಛಡಿಯೇಟು ಶಿಕ್ಷೆ

ಎಪಿ Updated:

ಅಕ್ಷರ ಗಾತ್ರ : | |

ಕಾಬೂಲ್‌: ಅಕ್ರಮ ಸಂಬಂಧ, ಕಳವು, ಮನೆಯಿಂದ ಓಡಿಹೋಗಿರುವುದು ಸೇರಿ ವಿವಿಧ ಆರೋಪಗಳು ಸಾಬೀತಾದ್ದರಿಂದ ಒಂಭತ್ತು ಮಹಿಳೆಯರು ಸೇರಿ 19 ಮಂದಿಗೆ ಅಫ್ಗಾನಿಸ್ತಾನದಲ್ಲಿ ಛಡಿಯೇಟು ಶಿಕ್ಷೆ ನೀಡಲಾಗಿದೆ.

ಈ ಮೂಲಕ ದೇಶದಲ್ಲಿ ಇಸ್ಲಾಮಿಕ್‌ ಕಾನೂನು ಅಥವಾ ಶರಿಯಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು  ಸರ್ಕಾರ ಬದ್ಧವಾಗಿದೆ ಎಂಬ ಸೂಚನೆಯನ್ನು ತಾಲಿಬಾನ್‌ ಆಡಳಿತವು ದೃಢಪಡಿಸಿದೆ. 

ಅಫ್ಗಾನಿಸ್ತಾನದಲ್ಲಿ 2021ರ ಆಗಸ್ಟ್‌ನಲ್ಲಿ ಆಡಳಿತವನ್ನು ವಶಕ್ಕೆ ಪಡೆದಿದ್ದ ತಾಲಿಬಾನ್, ಇದೇ ಮೊದಲ ಬಾರಿಗೆ ಛಡಿಯೇಟು ಶಿಕ್ಷೆ ನೀಡಿರುವುವನ್ನು ಅಧಿಕೃತವಾಗಿ ಪ್ರಕಟಿಸಿದೆ. ಹಿಂದೆ 1990ರ ತಾಲಿಬಾನ್‌ ಆಡಳಿತ ಅವಧಿಯಲ್ಲಿ ಸಾರ್ವಜನಿಕವಾಗಿಯೇ ಛಡಿಯೇಟು, ಕಲ್ಲಿನಿಂದ ಹಲ್ಲೆ ಮಾಡುವ ಶಿಕ್ಷೆಯನ್ನು ಅಪರಾಧಿಗಳಿಗೆ ನೀಡಲಾಗುತ್ತಿತ್ತು. 

ಶರಿಯಾ ಕಾಯ್ದೆಯ ಕಟ್ಟುನಿಟ್ಟಿನ ಜಾರಿಗೆ ನಾವು ಬದ್ಧರಿದ್ದೇವೆ ಎಂದು ತಾಲಿಬಾನ್‌ನ ವಕ್ತಾರರು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಅಧಿಕಾರಿ ಅಬ್ದುಲ್‌ ರಹೀಂ ರಷೀದ್‌ ಪ್ರಕಾರ, 9 ಮಹಿಳೆಯರು, 10 ಪುರುಷರಿಗೆ ಛಡಿಯೇಟು ಶಿಕ್ಷೆ ವಿಧಿಸಲಾಗಿದೆ. ಠಕ್ಕರ್ ಪ್ರಾಂತ್ಯದ ತಲೊಗನ್ ನಗರದ ಪ್ರಮುಖ ಮಸೀದಿಯೊಂದರ ಎದುರು ಹಿರಿಯರು, ವಿದ್ವಾಂಸರು, ನಿವಾಸಿಗಳ ಎದುರೇ ತಲಾ 39 ಛಡಿಯೇಟು ನೀಡುವ ಶಿಕ್ಷೆ ಜಾರಿಗೊಳಿಸಲಾಗಿದೆ.

ಇವರ ವಿರುದ್ಧ ಕೋರ್ಟ್‌ನಲ್ಲಿ ವಿಚಾರಣೆ ನಡೆದು ಅಪರಾಧ ಸಾಬೀತಾಗಿತ್ತು ಎಂದು ತಿಳಿಸಿದ್ದಾರೆ. ಶಿಕ್ಷೆಗೆ ಒಳಗಾದವರು ಯಾರು, ಛಡಿಯೇಟು ಬಳಿಕ ಅವರ ಸ್ಥಿತಿ ಏನಾಗಿತ್ತು ಎಂಬುದರ ವಿವರಗಳನ್ನು ನೀಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು