ಕಾಬೂಲ್: ಅಫ್ಗಾನಿಸ್ತಾನದ ಗಡಿ ಪ್ರದೇಶದಲ್ಲಿನ ಪ್ರಮುಖ ಬಂದರು ‘ಇಸ್ಲಾಂ ಖ್ವಾಲಾ’ ವಶಪಡಿಸಿಕೊಳ್ಳಲಾಗಿದೆ ಎಂದು ತಾಲಿಬಾನ್ ತಿಳಿಸಿದೆ.
‘ಇಸ್ಲಾಂ ಖ್ವಾಲಾ ಬಂದರು ಈಗ ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿದೆ. ಇಂದಿನಿಂದಲೇ ನಾವು ಇಲ್ಲಿಂದ ಕಾರ್ಯಾಚರಣೆ ಆರಂಭಿಸಲಿದ್ದೇವೆ’ ಎಂದು ತಾಲಿಬಾನ್ ವಕ್ತಾರ ಝಬಿಹುಲ್ಲಾ ಮುಹಾಹೀದ್ ತಿಳಿಸಿದ್ದಾರೆ.
ಆದರೆ, ಅಫ್ಗಾನಿಸ್ತಾನ ಸರ್ಕಾರ ಈ ವಿಷಯವನ್ನು ದೃಢಪಡಿಸಿಲ್ಲ.
ಇಸ್ಲಾಂ ಖ್ವಾಲಾ ಅಫ್ಗಾನಿಸ್ತಾನದ ಪ್ರಮುಖ ಬಂದರು. ಇರಾನ್ ಜತೆಗಿನ ವ್ಯಾಪಾರ ವಹಿವಾಟನ್ನು ಈ ಬಂದರು ಮೂಲಕವೇ ಅಫ್ಘಾನಿಸ್ತಾನ ಕೈಗೊಳ್ಳುತ್ತದೆ.
ತೀವ್ರ ಸಂಘರ್ಷದ ಬಳಿಕ ಕಳೆದ ತಿಂಗಳು ಶಿರ್ ಖಾನ್ ಬಂದಾರ್ ಪ್ರದೇಶವನ್ನು ತಾಲಿಬಾನ್ ವಶಪಡಿಸಿಕೊಂಡಿತ್ತು. ಇದು ತಜಿಕಿಸ್ತಾನ್ ಗಡಿ ಪ್ರದೇಶವಾಗಿದೆ. ಈ ಸಂಘರ್ಷದ ಸಂದರ್ಭದಲ್ಲಿ ಅಫ್ಗಾನಿಸ್ತಾನದ ನೂರಾರು ಯೋಧರು ನೆರೆಯ ರಾಷ್ಟ್ರಕ್ಕೆ ಪರಾರಿಯಾಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.