ವಾಷಿಂಗ್ಟನ್:ತಾಲಿಬಾನ್ ಉಗ್ರ ಸಂಘಟನೆಯು ಅಫ್ಗಾನಿಸ್ತಾನದಲ್ಲಿ ಹಲವು ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದಿದೆ. ಇದರಿಂದಾಗಿ ಅಫ್ಗಾನ್‌ನಲ್ಲಿನಾಗರಿಕ ಯುದ್ಧಮತ್ತು ಆ ಸಂಘಟನೆಯ ವಿರುದ್ಧ ದಂಗೆಗಳು ಆರಂಭವಾಗಬಹುದು ಎಂದು ರಾಜಕೀಯ ವಿಶ್ಲೇಷಕ ಹರ್ಲನ್ ಉಲ್ಮನ್ ಹೇಳಿದ್ದಾರೆ.

ಚಿಂತಕರ ಚಾವಡಿ ʼಅಟ್ಲಾಂಟಿಕ್ ಕೌನ್ಸಿಲ್ʼನ ಹಿರಿಯ ಸಲಹೆಗಾರರಾಗಿರುವ ಹರ್ಲನ್, ʼದಿ ಹಿಲ್ʼ ಪತ್ರಿಕೆಗೆ ಬರೆದಿರುವ ಲೇಖನದಲ್ಲಿ ಹೀಗೆ ಉಲ್ಲೇಖಿಸಿದ್ದಾರೆ.

ʼಕಾಬೂಲ್ ಸರ್ಕಾರ ಪತನವಾದರೆ ಅಥವಾ ಅಧಿಕಾರವನ್ನು ಬಿಟ್ಟುಕೊಟ್ಟರೆ, ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಪ್ರಭುತ್ವವು ನಿಸ್ಸಂಶಯವಾಗಿ ಮತ್ತೊಮ್ಮೆ ಸೋಲು ಅನುಭವಿಸಿದಂತಾಗುತ್ತದೆ. ತಾಲಿಬಾನ್‌ಗೆ ಸಿಕ್ಕ ಜಯ ಆ ದೇಶಕ್ಕೆ ದೊರೆತ ʼಉತ್ತಮ ಭವಿಷ್ಯʼ ಎಂದು ಅರ್ಥವಲ್ಲ.ಪ್ರಾಂತ್ಯಗಳಲ್ಲಿ ಸಂಘಟನೆಯ ಆಡಳಿತವು ಬದಲಾಗುವ ಸಾಧ್ಯತೆ ಇದೆʼ ಎಂದಿದ್ದಾರೆ.

ಇದನ್ನೂ ಓದಿ:ಅಫ್ಗಾನಿಸ್ತಾನದ ದಕ್ಷಿಣ ಭಾಗವನ್ನು ದಾಟಿ ಮೂರು ನಗರಗಳನ್ನು ವಶಪಡಿಸಿಕೊಂಡ ತಾಲಿಬಾನ್

ʼಕೆಲವು ಸಂದರ್ಭಗಳಲ್ಲಿ, ತಾಲಿಬಾನ್‌ಗೆ ಅವಕಾಶಗಳನ್ನು ನೀಡಿ ಅಥವಾ ಅದರ ನಿಯಂತ್ರಣಗಳನ್ನು ಮೀರಿ ಸ್ಥಳೀಯ ನಾಯಕರೇ ಅಧಿಕಾರದಲ್ಲಿ ಉಳಿಯುತ್ತಾರೆ. ಇದು ಸ್ಥಳೀಯ ದಂಗೆಗಳನ್ನು ಅಥವಾ ತಾಲಿಬಾನ್ ವಿರುದ್ಧದ ಬಂಡಾಯವನ್ನು ಏಕಾಏಕಿ ಉಂಟುಮಾಡಬಹುದು.ಈ ಹೋರಾಟಗಳು ನಿರಂತರವಾಗಿ ಮತ್ತು ವ್ಯಾಪಕವಾಗಿ ನಡೆಯಬಹುದೇ ಎಂಬುದು, ತಾಲಿಬಾನ್‌ನ ಆಡಳಿತ, ಅದರ ಹಿಂಸಾಚಾರ ಮತ್ತು ಸಂಘರ್ಷದ ಬಳಿಕವೂ ಹೋರಾಟವನ್ನು ಮುಂದುವರಿಸುವ ಅಫ್ಗಾನಿಸ್ತಾನದ ಸಾಮರ್ಥ್ಯದ ಮೇಲೆ ನಿಂತಿದೆʼ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನವು ತನ್ನ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಮೂಲಕ ತಾಲಿಬಾನ್ ಮೇಲೆ ಪ್ರಭಾವ ಉಂಟುಮಾಡುವ ಯತ್ನಿಸಲಿದೆ. ಇದರಿಂದಾಗಿ ಅಮೆರಿಕ ಜೊತೆಗಿನಹದಗೆಟ್ಟಿರುವಸಂಬಂಧವನ್ನು ಸುಧಾರಿಸುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರಯತ್ನಕ್ಕೆ ಸೋಲಾಗಲಿದೆ ಎಂದೂ ವಿಶ್ಲೇಷಿಸಿದ್ದಾರೆ.

ಮುಂದುವರಿದು,ʼಅಫ್ಗಾನ್‌ನಲ್ಲಿ ತಾಲಿಬಾನ್‌ಗೆ ಬೆಂಬಲ ನೀಡುವುದಿಲ್ಲ ಎಂಬಪಾಕಿಸ್ತಾನದ ನಕಲಿತನದ ಬಗ್ಗೆ ಅಮೆರಿಕಕ್ಕೆ ಯಾವುದೇ ಭ್ರಮೆಗಳಿಲ್ಲ. ಉಗ್ರವಾದ ಹೆಚ್ಚಾದಂತೆ, ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರ ಸಾಮರ್ಥ್ಯದ ಬಗ್ಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕಳವಳ ಹೆಚ್ಚುತ್ತದೆʼ ಎಂದು ಉಲ್ಮನ್ ಬರೆದಿದ್ದಾರೆ.

ಇವನ್ನೂ ಓದಿ
*‘ಅಫ್ಗಾನಿಸ್ತಾನದಲ್ಲಿ ಬಲಪ್ರಯೋಗದ ಮೂಲಕ ರಚನೆಯಾಗುವ ಸರ್ಕಾರಕ್ಕೆ ಮಾನ್ಯತೆ ಇಲ್ಲ’
*ಅಫ್ಗಾನಿಸ್ತಾನ–ತಾಲಿಬಾನ್ ಮಾತುಕತೆಯಿಂದ ಸಂಘರ್ಷ ಶಮನ: ಗುಟೆರಸ್
*ಕಂದಹಾರ್ ಆಯ್ತು, ಅಫ್ಗಾನಿಸ್ತಾನದ ಲಷ್ಕರ್ ಗಾಹ್ ನಗರವನ್ನೂ ವಶಪಡಿಸಿಕೊಂಡ ತಾಲಿಬಾನ್
*ಅಫ್ಗಾನಿಸ್ತಾನ: ಕಂದಹಾರ್ ನಗರ ತಾಲಿಬಾನ್ ವಶಕ್ಕೆ
*ಘಜ್ನಿ ಪ್ರಾಂತ್ಯ ತಾಲಿಬಾನ್ ವಶ
*ತಾಲಿಬಾನ್ನೊಂದಿಗೆ ಅಧಿಕಾರ ಹಂಚಿಕೆಗೆ ಮುಂದಾದ ಅಫ್ಗಾನಿಸ್ತಾನ ಸರ್ಕಾರ
*ಅಫ್ಗಾನಿಸ್ಥಾನದಿಂದ 4 ಲಕ್ಷ ಜನರು ಸ್ಥಳಾಂತರ: ವಿಶ್ವಸಂಸ್ಥೆ ಕಳವಳ
*ತಾಲಿಬಾನ್ ಕೈ ಸೇರಿದ ಭಾರತದ ಹೆಲಿಕಾಪ್ಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.