ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್‌ ವಿರುದ್ಧ ಪ್ರತಿಭಟನೆ ಗುಂಡಿಗೆ 3 ಮಂದಿ ಸಾವು

Last Updated 18 ಆಗಸ್ಟ್ 2021, 19:59 IST
ಅಕ್ಷರ ಗಾತ್ರ

ಕಾಬೂಲ್‌: ಅಫ್ಗಾನಿಸ್ತಾನವನ್ನು ಕೈವಶ ಮಾಡಿಕೊಂಡಿರುವ ತಾಲಿಬಾನ್‌ ಸರ್ಕಾರ ರಚನೆಯ ಯತ್ನಗಳನ್ನು ಆರಂಭಿಸಿದ್ದರೆ, ಪಶ್ಚಿಮದ ದೇಶಗಳು ತಮ್ಮ ರಾಜತಾಂತ್ರಿಕರು ಹಾಗೂ ನಾಗರಿಕರನ್ನು ತೆರವುಗೊಳಿಸುವ ಯತ್ನವನ್ನು ತೀವ್ರಗೊಳಿಸಿವೆ. ಈ ನಡುವೆಯೇ ತಾಲಿಬಾನ್‌ ವಿರುದ್ಧಪ್ರತಿಭಟನೆಗಳು ಬುಧವಾರ ಆರಂಭ ಆಗಿವೆ.

ರಾಜಧಾನಿ ಕಾಬೂಲ್‌ನಿಂದ 150 ಕಿ.ಮೀ. ಪೂರ್ವಕ್ಕಿರುವ ಜಲಾಲಾಬಾದ್‌ನಲ್ಲಿ ನಡೆದ ಪ್ರತಿಭಟನೆಯನ್ನು ತಾಲಿಬಾನ್‌ ಹತ್ತಿಕ್ಕಿದೆ. ತಾಲಿಬಾನ್‌ ಹೋರಾಟಗಾರರು ಹಾರಿಸಿದ ಗುಂಡಿಗೆ ಮೂವರು ಬಲಿಯಾಗಿದ್ದಾರೆ ಎಂದುಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂಬ ಮಾಹಿತಿಯನ್ನು ತಾಲಿಬಾನ್‌ ನೀಡಿದೆ.

ಜಲಾಲಾಬಾದ್‌ನ ಚೌಕವೊಂದರಲ್ಲಿ ಅಫ್ಗಾನಿಸ್ತಾನದ ಧ್ವಜ ಹಾರಿಸಲು ಸ್ಥಳೀಯರ ಗುಂಪು ಯತ್ನಿಸಿತು. ಇದರ ನಡುವೆಯೇ ಗುಂಡು ಹಾರಾಟದ ಸದ್ದು ಕೇಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಧ್ವಜ ಹಿಡಿದು ಮೆರವಣಿಗೆ ನಡೆಸುತ್ತಿದ್ದ ಜನರು ಗುಂಡು ಹಾರಾಟದ ಸದ್ದು ಕೇಳಿದ ಬಳಿಕ ಚೆಲ್ಲಾಪಿಲ್ಲಿ
ಯಾಗಿ ಓಡುವ ದೃಶ್ಯಗಳಿರುವ ವಿಡಿಯೊವನ್ನು ಸ್ಥಳೀಯ ಸುದ್ದಿ ಸಂಸ್ಥೆ ಪಜ್‌ವೊಕ್‌ ಅಫ್ಗನ್‌ ನ್ಯೂಸ್‌ ಬಿಡುಗಡೆ ಮಾಡಿದೆ.

ನಾಲ್ವರು ಮೃತಪಟ್ಟಿದ್ದು 13 ಮಂದಿ ಗಾಯಗೊಂಡಿದ್ದಾರೆ ಎಂದು ಮಾಜಿ ‍ಪೊಲೀಸ್‌ ಅಧಿಕಾರಿಯೊ
ಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಎಷ್ಟು ಜನರು ಸತ್ತಿದ್ದಾರೆ ಮತ್ತು ಸಾವು ಹೇಗೆ ಸಂಭವಿಸಿತು ಎಂಬುದನ್ನು ದೃಢಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.

ನ್ಯಾಟೊ ಸಭೆ ನಾಳೆ

*ನ್ಯಾಟೊ ದೇಶಗಳ ವಿದೇಶಾಂಗ ಸಚಿವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಶುಕ್ರವಾರ ಸಭೆ ನಡೆಸಿ ಅಫ್ಗಾನಿಸ್ತಾನ ಪರಿಸ್ಥಿತಿ ಕುರಿತು ಚರ್ಚೆ ನಡೆಸಲಿದ್ದಾರೆ

*ಅಫ್ಗಾನಿಸ್ತಾನದಲ್ಲಿ ಭಾರತದ ಹಿತಾಸಕ್ತಿಯನ್ನು ರಕ್ಷಿಸಲು ಸರ್ಕಾರ ಏನು ಮಾಡಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿವರಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ

*ಫ್ರಾನ್ಸ್‌ ಸಿಬ್ಬಂದಿಯನ್ನು ತೆರವುಗೊಳಿಸಿದ ಮೊದಲ ವಿಮಾದನಲ್ಲಿ 21 ಮಂದಿ ಭಾರತೀಯರು ಇದ್ದರು. ಅವರು ಫ್ರಾನ್ಸ್‌ ರಾಯಭಾರ ಕಚೇರಿಯ ಭದ್ರತಾ ಸಿಬ್ಭಂದಿಯಾಗಿ ಕೆಲಸ ಮಾಡುತ್ತಿದ್ದರು

*ಕಾಬೂಲ್‌ ವಿಮಾನ ನಿಲ್ದಾಣದ ರಕ್ಷಣೆಗೆ ಅಮೆರಿಕ ನಿಯೋಜಿಸಿರುವ ಯೋಧರ ಸಂಖ್ಯೆಯು 4,500ಕ್ಕೂ ಹೆಚ್ಚು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT