ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ಲಾಮಿಕ್ ನಿಯಮದಡಿ ಮಹಿಳೆಯರ ಹಕ್ಕುಗಳನ್ನು ಗೌರವಿಸುತ್ತೇವೆ: ತಾಲಿಬಾನ್

Last Updated 17 ಆಗಸ್ಟ್ 2021, 16:37 IST
ಅಕ್ಷರ ಗಾತ್ರ

ಕಾಬೂಲ್: ಅಫ್ಗಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳನ್ನು ಗೌರವಿಸಲಿದ್ದೇವೆ. ಆದರೆ, ಇದು ಇಸ್ಲಾಮಿಕ್ ನಿಯಮಗಳ ಅಡಿಯಲ್ಲಿರಲಿದೆ. ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗುವುದಿಲ್ಲ ಎಂದು ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ.

ಅಫ್ಗಾನಿಸ್ತಾನ ವಶಪಡಿಸಿಕೊಂಡ ಬಳಿಕ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಜಾಹಿದ್, 1990ರ ದಶಕದಲ್ಲಿ ದೇಶದಲ್ಲಿ ಕ್ರೂರ ಆಡಳಿತ ನೀಡಿದ್ದ ತಾಲಿಬಾನ್ ಈಗ ಬದಲಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಡಲು ಯತ್ನಿಸಿರುವುದು ಕಂಡುಬಂದಿದೆ.

‘ತಾಲಿಬಾನ್ ಮಹಿಳೆಯರ ಹಕ್ಕುಗಳನ್ನು ಗೌರವಿಸಲಿದೆ. ಆದರೆ ಅದು ಇಸ್ಲಾಮಿಕ್ ನಿಯಮಗಳಿಗೆ ಅನುಗುಣವಾಗಿರಲಿದೆ. ಖಾಸಗಿ ಮಾಧ್ಯಮಗಳು ಸ್ವತಂತ್ರವಾಗಿ ಇರಬೇಕೆಂಬುದು ತಾಲಿಬಾನ್ ಇಚ್ಛೆಯಾಗಿದೆ. ಆದರೆ ಪತ್ರಕರ್ತರು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಬಾರದು. ಅಫ್ಗಾನಿಸ್ತಾನವನ್ನು ಸುಭದ್ರಗೊಳಿಸಲಿದ್ದೇವೆ. ಹಿಂದಿನ ಸರ್ಕಾರದ ಜತೆ ಕೆಲಸ ಮಾಡಿದವರ ಮತ್ತು ವಿದೇಶಿ ಸರ್ಕಾರಗಳು ಅಥವಾ ಪಡೆಗಳ ಜತೆ ಕೆಲಸ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುವುದಿಲ್ಲ’ ಎಂದೂ ಮುಜಾಹಿದ್ ಹೇಳಿದ್ದಾರೆ.

ಆದರೆ, ಅಫ್ಗಾನಿಸ್ತಾನದ ಅನೇಕರಲ್ಲಿ ಇನ್ನೂ ಆತಂಕ ಮನೆ ಮಾಡಿದೆ. ಹಿಂದಿನ ತಲೆಮಾರಿನ ಜನರು ತಾಲಿಬಾನ್‌ನ ಕ್ರೂರ ಆಡಳಿತ ಅನುಭವಿಸಿರುವುದು ಈ ಭೀತಿಗೆ ಕಾರಣ ಎನ್ನಲಾಗಿದೆ.

ಅಫ್ಗಾನಿಸ್ತಾನದ ಎಲ್ಲರಿಗೂ ತಾಲಿಬಾನ್‌ ಕ್ಷಮಾದಾನ ಘೋಷಿಸಿದ್ದು, ಮಹಿಳೆಯರೂ ತನ್ನ ಸರ್ಕಾರದಲ್ಲಿ ಭಾಗಿಯಾಗಬೇಕು ಎಂದು ತಾಲಿಬಾನ್‌ ಅಧಿಕಾರಿಯೊಬ್ಬರು ಒತ್ತಾಯಿಸಿರುವುದಾಗಿ ಈಗಾಗಲೇ ವರದಿಯಾಗಿದೆ. ಅಫ್ಗಾನಿಸ್ತಾನದ ಸರ್ಕಾರಿ ಸ್ವಾಮ್ಯದ ದೂರದರ್ಶನ ವಾಹಿನಿಯಲ್ಲಿ ಇಸ್ಲಾಮಿಕ್ ಎಮಿರೇಟ್‌ನ ಸಾಂಸ್ಕೃತಿಕ ಆಯೋಗದ ಸದಸ್ಯ ಎನಾಮುಲ್ಲಾ ಸಮಂಗಾನಿ ಈ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT