ಕಾಬೂಲ್: ಅಫ್ಗಾನಿಸ್ತಾನದಲ್ಲಿ ತೀವ್ರ ಚಳಿಯಿಂದಾಗಿ ಚಿಕ್ಕಮಕ್ಕಳು ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದರೆ, ಅಸ್ವಸ್ಥ ಶಿಶುಗಳು ಆಸ್ಪತ್ರೆಗಳಲ್ಲಿ ತಾಯಂದಿರ ಬುರ್ಖಾದೊಳಗೆ ಆಶ್ರಯ ಪಡೆದಿವೆ. ಹತಾಶ ಸ್ಥಿತಿಯಲ್ಲಿ ಮುಳುಗಿರುವ ಅಫ್ಗಾನಿಸ್ತಾನದಲ್ಲೀಗ ಆಹಾರ ವಿತರಣಾ ಕೇಂದ್ರಗಳ ಮುಂದೆ ಉದ್ದನೆಯ ಸಾಲುಗಳು ಕಂಡು ಬರುತ್ತಿವೆ.
ಆ. 15ರಂದು ಕಾಬೂಲ್ ಅನ್ನು ತಾಲಿಬಾನ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಅಫ್ಗಾನಿಸ್ತಾನದಲ್ಲಿನ ಆರ್ಥಿಕ ಸ್ಥಿತಿಯು ಕುಸಿದಿದ್ದು, ಅಂತರರಾಷ್ಟ್ರೀಯ ದೇಣಿಗೆಗಳಿಂದ ಗುಟುಕು ಜೀವ ಉಳಿಸಿಕೊಂಡಿದೆ. ಅಫ್ಗಾನಿಸ್ತಾನದ ಈ ಹಿಂದಿನ ಸರ್ಕಾರದ ಬಜೆಟ್‌ಗೆ ಅಂತರರಾಷ್ಟ್ರೀಯ ಸಮುದಾಯದಿಂದ ಶೇ 80ರಷ್ಟು ಹಣದ ನೆರವು ಬಂದಿತ್ತು. ಈಗ ಆ ನೆರವೂ ಕಡಿತಗೊಂಡಿದೆ.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಲಕ್ಷಾಂತರ ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಪೋಷಕರ ಬಳಿ ಹಣವಿಲ್ಲ. ತೀವ್ರ ಚಳಿಯಲ್ಲಿ ಸಹಾಯ ಯಾಚಿಸಿ ಸರ್ಕಾರಿ ಸಚಿವಾಲಯಗಳಲ್ಲಿ ಹೊರಗೆ ಕಾದು ಕುಳಿತಿರುವ ಲಕ್ಷಾಂತರ ಜನರಿಗೆ ಕಟ್ಟಿಗೆ ಉರಿಯ ಶಾಖವೇ ಚಳಿ ಓಡಿಸುವ ಏಕೈಕ ಮೂಲವಾಗಿದೆ.
‘ಅಫ್ಗನ್‌ನಲ್ಲಿನ ಶೇ 60ರಷ್ಟು ಜನರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ. 80 ಲಕ್ಷಕ್ಕೂ ಹೆಚ್ಚಿನ ಜನರು ಬರಗಾಲವನ್ನು ಎದುರಿಸುತ್ತಿದ್ದಾರೆ. ಶೇ 97ರಷ್ಟು ಆಫ್ಗನರು ಶೀಘ್ರದಲ್ಲೇ ಬಡತನ ರೇಖೆಯ ಕೆಳಗಿಳಿಯಲ್ಲಿದ್ದಾರೆ’ ಎಂದು ವಿಶ್ವಸಂಸ್ಥೆಯ ಅಂಕಿ–ಅಂಶಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.