ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌ನಲ್ಲಿ ಮತ್ತೊಬ್ಬ ಭಾರತೀಯ ವರ್ತಕರ ಮಳಿಗೆ ಮೇಲೆ ದಾಳಿ

Last Updated 29 ನವೆಂಬರ್ 2022, 8:31 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌: ಅಕ್ಲೆಂಡ್‌ನಲ್ಲಿ ಹಿಂದಿನ ವಾರ ಭಾರತೀಯ ಮೂಲದ ಹೈನುಗಾರಿಕೆ ಮಳಿಗೆ ಕೆಲಸಗಾರ ಜಯೇಶ್‌ ಪಟೇಲ್‌ ಹತ್ಯೆ ಬೆನ್ನಲ್ಲೇ ನ್ಯೂಜಿಲೆಂಡ್‌ನಲ್ಲಿನ ಮತ್ತೋರ್ವ ಭಾರತೀಯ ಮೂಲದ ವ್ಯಕ್ತಿಯೊಬ್ಬರ ಮಳಿಗೆ ಮೇಲೆ ದಾಳಿ ನಡೆದಿದೆ.


ಆಯುಧಗಳನ್ನು ಹೊಂದಿದ್ದ ಡಕಾಯಿತರು ಕೆಲಸಗಾರರನ್ನು ಚಾಕು ತೋರಿಸಿ ಹೆದರಿಸಿದ್ದಾರೆ. ನನ್ನ ಕುತ್ತಿಗೆಗೆಚಾಕು ಹಿಡಿದಿದ್ದಾರೆ ಎಂದು ಹ್ಯಾಮಿಲ್ಟನ್‌ನ ಮಳಿಗೆ ಮಾಲೀಕ ಭಾರತೀಯ ಮೂಲದ ಸಿಧು ನರೇಶ್‌ ಹೇಳಿದ್ದಾರೆ.


ಆಯುಧ ಸಹಿತ ನಾಲ್ವರು ಡಕಾಯಿತರು ಮಳಿಗೆ ಮೇಲೆ ದಾಳಿ ನಡೆಸಿದ್ದಾರೆ. ಇದೇ ಮೊದಲೇನಲ್ಲ. ಹಲವು ಬಾರಿ ದಾಳಿ ನಡೆದಿದೆ. ಮಳಿಗೆಯನ್ನು ಬಹುತೇಶ ನಾಶಗೊಳಿಸಿದ್ದಾರೆ. ವಸ್ತುಗಳನ್ನು ಒಡೆದು ಹಾಕಿದ್ದಾರೆ ಎಂದು ನರೇಶ್‌ ಹೇಳಿದ್ದಾರೆ. ಸುಮಾರು 4000 ಡಾಲರ್‌ ನಗದು ಕದಿಯಲಾಗಿದೆ. ಇವರನ್ನು ತಡೆಯಲು ಯತ್ನಿಸಿದ್ದ ಒಬ್ಬನಿಗೆ ಗಾಯವಾಗಿದೆ ಎಂದು ವರದಿ ತಿಳಿಸಿದೆ.


ಡಕಾಯಿತರು 16 ವರ್ಷಕ್ಕಿಂತ ಕೆಳಗಿನ ಮಕ್ಕಳು ಎಂದು ಅವರು ತಿಳಿಸಿದ್ದಾರೆ. ಭಾರತೀಯ ಮೂಲದ ಜಯೇಶ್‌ ಪಟೇಲ್‌ ತಮ್ಮ ಹೈನುಗಾರಿಕೆ ಮಳಿಗೆಯಲ್ಲಿದ್ದ ನಗದು ಕೊಡಲು ನಿರಾಕರಿಸಿದ್ದಕ್ಕೆ ಹಿಂದಿನ ವಾರ ಡಕಾಯಿತರು ಬರ್ಬರವಾಗಿ ಹತ್ಯೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT