ವಾಷಿಂಗ್ಟನ್: ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿರುವ ಮೆಕ್ಸಿಕೊ ಹಾಗೂ ಕೆನಡಾ ಪ್ರಜೆಗಳು ನವೆಂಬರ್‌ನಿಂದ ರಸ್ತೆ ಮಾರ್ಗದ ಮೂಲಕ ದೇಶ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಅಮೆರಿಕ ಹೇಳಿದೆ.

ಈ ಕುರಿತು ಶ್ವೇತಭವನದ ಅಧಿಕಾರಿ ಮಾಹಿತಿ ನೀಡಿದ್ದು, ‘ ರಸ್ತೆ ಮಾರ್ಗವಲ್ಲದೇ, ಅಂತರರಾಷ್ಟ್ರೀಯ ವಿಮಾನಗಳ ಮೂಲಕ ಬರುವ ಇತರ ದೇಶಗಳ ಪ್ರಜೆಗಳಿಗೂ ಅಮೆರಿಕ ಪ್ರವೇಶಿಸಲು ಅನುಮತಿ ನೀಡಲಾಗುವುದು. ಇದಕ್ಕೆ ಸಂಬಂಧಿಸಿದ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು’ ಎಂದು ಹೇಳಿದ್ದಾರೆ.

ಕೊರೊನಾ ಸೋಂಕು ಪ್ರಸರಣ ತಡೆಯುವ ಸಲುವಾಗಿ ಐರೋಪ್ಯ ದೇಶಗಳು, ಬ್ರಿಟನ್ ಹಾಗೂ ಚೀನಾದ ಪ್ರಜೆಗಳು ದೇಶಕ್ಕೆ ಭೇಟಿ ನೀಡದಂತೆ ಕಳೆದ ವರ್ಷ ಮಾರ್ಚ್‌ನಲ್ಲಿ ಅಮೆರಿಕ ನಿರ್ಬಂಧ ವಿಧಿಸಿತ್ತು. ನಂತರ, ಭಾರತ, ಬ್ರೆಜಿಲ್ ಹಾಗೂ ನೆರೆಯ ಮೆಕ್ಸಿಕೊ, ಕೆನಡಾ ದೇಶಗಳ ಪ್ರಜೆಗಳಿಗೂ ತನ್ನ ಗಡಿಯನ್ನು ಮುಚ್ಚಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.