ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್ ಮಾಧ್ಯಮ‌ ಸಲಹೆಗಾರ್ತಿ ಸ್ಥಾನಕ್ಕೆ ಕೆಲ್ಲಿಯೆನ್ ರಾಜೀನಾಮೆ

Last Updated 26 ಆಗಸ್ಟ್ 2020, 13:01 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮಾಧ್ಯಮ ಸಲಹೆಗಾರ್ತಿ ಕೆಲ್ಲಿಯೆನ್ ಕಾನ್ವೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಅವರು ಕೈಗೊಂಡಿದ್ದಾರೆ.

2016ರಿಂದಕೆಲ್ಲಿಯೆನ್ ಅವರು ಟ್ರಂಪ್‌ ಅವರ ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚುನಾವಣಾ ಪ್ರಚಾರ, ಟಿ.ವಿ ಸಂದರ್ಶನ ಸೇರಿದಂತೆ ಟ್ರಂಪ್‌ ಅವರ ಮಾಧ್ಯಮ ಸಂಬಂಧಿತ ಕಾರ್ಯಗಳ ಉಸ್ತುವಾರಿಯನ್ನು ಕೆಲ್ಲಿಯೆನ್‌ ವಹಿಸಿಕೊಂಡಿದ್ದರು.

ಕೆಲ್ಲಿಯೆನ್‌ ಅವರ ಪತಿ ಜಾರ್ಜ್‌ ಕಾನ್ವೆ ಅಮೆರಿಕದ ಪ್ರಸಿದ್ಧ ವಕೀಲರು. ಆದರೆ, ಅವರು ಸದಾ ಟ್ವಿಟರ್‌ನಲ್ಲಿ ಟ್ರಂಪ್ ಆಡಳಿತದ ಬಗ್ಗೆ ಟೀಕಿಸುತ್ತಿದ್ದರು. ಅಲ್ಲದೇ ಮಗಳು ಕ್ಲೌಡಿಯಾ ಕೂಡ ತಾಯಿ ತನಗೆ ಸಮಯ ನೀಡುತ್ತಿಲ್ಲಾ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಳು.

ಇದರ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಕೆಲ್ಲಿಯೆನ್ ಕಾನ್ವೆ ಅವರು, ‘ಇವತ್ತಿನಿಂದ ನನ್ನ ಎಲ್ಲ ಸಮಯ ನನ್ನ ಮಕ್ಕಳಿಗಾಗಿ ಮೀಸಲಿಡುತ್ತೇನೆ. ಇನ್ಮುಂದೆ ನನ್ನ ಮಕ್ಕಳ ಜೀವನದಲ್ಲಿ ಹೆಚ್ಚು ಅಮ್ಮನ ಪ್ರೀತಿ ಇರುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT