ಶುಕ್ರವಾರ, ಅಕ್ಟೋಬರ್ 7, 2022
24 °C

ಪಾಕ್‌ಗೆ ನೆರವು ಭಾರತಕ್ಕೆ ನೀಡುತ್ತಿರುವ ಸಂದೇಶ ಅಲ್ಲ: ಅಮೆರಿಕ ಸ್ಪಷ್ಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಪಾಕಿಸ್ತಾನವು ಎಫ್‌–16 ಯುದ್ಧ ವಿಮಾನಗಳನ್ನು ಕೊಳ್ಳಲು ಅಮೆರಿಕ 3,644 ಕೋಟಿ (45 ಕೋಟಿ ಡಾಲರ್) ಹಣಕಾಸಿನ ನೆರವು ನೀಡುತ್ತಿರುವುದು ಭಾರತದ ವಿರುದ್ಧ ನೀಡುತ್ತಿರುವ ಸಂದೇಶ ಅಲ್ಲ. ಬದಲಾಗಿ ಪಾಕಿಸ್ತಾನದೊಂದಿಗೆ ಅಮೆರಿಕ ಹೊಂದಿರುವ ರಕ್ಷಣಾ ಪಾಲುದಾರಿಕೆಯ ಭಾಗವಾಗಿ ಭಯೋತ್ಪಾದನೆ ನಿಗ್ರಹ ಮತ್ತು ಪರಮಾಣು ಭದ್ರತೆಯ ಉದ್ದೇಶವನ್ನು ಹೊಂದಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

‘ಪಾಕಿಸ್ತಾನಕ್ಕೆ ಹಣಕಾಸಿನ ನೆರವು ನೀಡುತ್ತಿರುವುದು ಭಾರತವು ರಷ್ಯಾ ಜೊತೆ ಹೊಂದಿರುವ ಸಂಬಂಧದ ವಿರುದ್ಧದ ಪ್ರತಿಕ್ರಿಯೆ ಅಲ್ಲ’ ಎಂದು ಇಂಡೊ–ಪೆಸಿಫಿಕ್‌ ಭದ್ರತಾ ಇಲಾಖೆಯ ಸಹ ಕಾರ್ಯದರ್ಶಿ ಡಾ.ಎಲೆ ರ‍್ಯಾಟ್ನರ್‌ ಅವರು ತಿಳಿಸಿದ್ದಾರೆ.

ಪಾಕಿಸ್ತಾನ ಎಫ್-16 ಯುದ್ಧ ವಿಮಾನಗಳನ್ನು ಕೊಳ್ಳಲು 3,644 ಕೋಟಿ ಹಣಕಾಸಿನ ನೆರವು ನೀಡಲು ಅಮೆರಿಕ ಸೆ.8ರಂದು ಅನುಮೋದನೆ ನೀಡಿತ್ತು. ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಅವರೊಂದಿಗೆ ದೂರವಾಣಿ ಕರೆ ಮಾಡಿ ಭಾರತದ ಕಳವಳವನ್ನು ವಿವರಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು