ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಲಸಿಕೆ ಹಗರಣ: ಅರ್ಜೆಂಟೀನಾ ಆರೋಗ್ಯ ಸಚಿವ ರಾಜೀನಾಮೆ

Last Updated 20 ಫೆಬ್ರುವರಿ 2021, 11:51 IST
ಅಕ್ಷರ ಗಾತ್ರ

ಬ್ಯೂನಸ್ ಐರಿಸ್‌, ಅರ್ಜೆಂಟೀನಾ:ಸಚಿವರೊಬ್ಬರನ್ನು ವಿನಂತಿಸಿಕೊಂಡ ನಂತರ ಆದ್ಯತೆಯ ಕೊರೊನಾ ಲಸಿಕೆಯನ್ನು ತಮಗೆ ನೀಡಲಾಯಿತು ಎಂದು ಸ್ಥಳೀಯ ಪತ್ರಕರ್ತಹೊರಾಸಿಯೊ ವರ್ಬಿಟ್ಸ್ಕಿ ಎಂಬವರು ತಮ್ಮ ಅಂಕಣ ಮತ್ತು ರೇಡಿಯೊ ಸಂದರ್ಶನದಲ್ಲಿ ಬಹಿರಂಗಪಡಿಸಿದ ಬೆನ್ನಲ್ಲೇ ಅರ್ಜೆಂಟೀನಾದ ಅಧ್ಯಕ್ಷ ಆಲ್ಬರ್ಟೊ ಫರ್ನಾಂಡೀಸ್ ಶುಕ್ರವಾರ ಆರೋಗ್ಯ ಸಚಿವರನ್ನು ವಜಾಗೊಳಿಸಿದ್ದಾರೆ.

ಸರ್ಕಾರದ ಕೋವಿಡ್‌ ಕಾರ್ಯತಂತ್ರದ ಉಸ್ತುವಾರಿ ವಹಿಸಿದ್ದ ಸಚಿವಗೈನ್ಸ್ ಗೊನ್ಜಾಲೆಜ್ ಗಾರ್ಸಿಯಾ ಅವರಿಗೆ ರಾಜೀನಾಮೆ ಸಲ್ಲಿಸುವಂತೆ ಅಧ್ಯಕ್ಷರು ಸೂಚಿಸಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆರೋಗ್ಯ ಸಚಿವಾಲಯದಲ್ಲಿ ಗೈನ್ಸ್‌ ಅವರ ನಂತರದ ಸ್ಥಾನದಲ್ಲಿದ್ದ ಕಾರ್ಲಾ ವಿಝೊಟ್ಟಿ ಸಚಿವರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸುದ್ದಿಸಂಸ್ಥೆ ಟೆಲಮ್‌ ತಿಳಿಸಿದೆ.

ಆರೋಗ್ಯ ಸಿಬ್ಬಂದಿಗೆ ಕೊರೊನಾ ಲಸಿಕೆ ನೀಡುವುದಕ್ಕೂ ಮೊದಲೇ 400ಕ್ಕೂ ಹೆಚ್ಚು ರಾಜಕೀಯ ವ್ಯಕ್ತಿಗಳು ಮತ್ತು ಪ್ರಭಾವಿಗಳು ಕದ್ದುಮುಚ್ಚಿ ಲಸಿಕೆ ಪಡೆದಿರುವ ಹಗರಣ ನಡೆದಿದೆ. ವೈದ್ಯರು, ಆರೋಗ್ಯ ಸಿಬ್ಬಂದಿ ಮತ್ತು ಹಿರಿಯ ನಾಗರಿಕರಿಗೆ ಮೊದಲ ಆದ್ಯತೆಯಲ್ಲಿ ಕೊರೊನಾ ಲಸಿಕೆ ಹಾಕಲಾಗುತ್ತಿದೆ. ಆದರೆ, ಈ ಆದ್ಯತಾ ಗುಂಪಿನಲ್ಲಿ ಇಲ್ಲದ ಮೇಯರ್‌ಗಳು, ಶಾಸಕರು, ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕಾರಣಿಗಳ ಹತ್ತಿರದವರಿಗೂ ಕೊರೊನಾ ಲಸಿಕೆ ನೀಡಿರುವ ವರದಿಗಳು ಬಂದಿರುವ ಕಾರಣಕ್ಕೆ ಆರೋಗ್ಯ ಸಚಿವರನ್ನು ಹುದ್ದೆಯಿಂದ ಕಿತ್ತುಹಾಕಲಾಗಿದೆ ಎನ್ನಲಾಗಿದೆ.

‘ಅಧ್ಯಕ್ಷರ ಸೂಚನೆ ಮೇರೆಗೆ ರಾಜೀನಾಮೆ ಸಲ್ಲಿಸಿರುವೆ. ಆದ್ಯತಾ ಗುಂಪಿನಲ್ಲಿದ್ದವರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಆದರೆ, ತಪ್ಪು ತಿಳಿವಳಿಕೆಯಿಂದ ನನ್ನನ್ನು ಬಲವಂತವಾಗಿ ವಜಾಗೊಳಿಸಲಾಗಿದೆ’ ಎಂದುಗೈನ್ಸ್ ಗೊನ್ಜಾಲೆಜ್ ಗಾರ್ಸಿಯಾ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT