ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಲಿ ದೋಣಿ ದುರಂತ: ಕನಿಷ್ಠ 40 ವಲಸಿಗರ ಸಾವು

Last Updated 27 ಫೆಬ್ರುವರಿ 2023, 12:48 IST
ಅಕ್ಷರ ಗಾತ್ರ

ರೋಮ್: ಇಲ್ಲಿನ ಕರಾವಳಿ ಪ್ರದೇಶದ ನಗರ ಕ್ರೋಟೋನ್‌ನಲ್ಲಿ ವಲಸಿಗರನ್ನು ತುಂಬಿದ್ದ ದೋಣಿಯೊಂದು ಮುಳುಗಿದೆ. ಪರಿಣಾಮ ಕನಿಷ್ಠ 40 ಮಂದಿ ಮೃತರಾಗಿದ್ದಾರೆ ಎಂದು ಭಾನುವಾರ ವರದಿಯಾಗಿದೆ.

ಹೆಚ್ಚಿನ ಸಂಖ್ಯೆಯ ವಲಸಿಗರನ್ನು ಹೊತ್ತ ದೋಣಿಯು ಭೀಕರ ಅಲೆಗಳ ಹೊಡೆತಕ್ಕೆ ಸಿಲುಕಿತ್ತು. ಪರಿಣಾಮ ದೋಣಿಯ ಮಧ್ಯಭಾಗ ತುಂಡಾಗಿ, ದೋಣಿ ಎರಡು ಭಾಗವಾಯಿತು. ಈ ಅವಘಡದಲ್ಲಿ ಮೃತಪಟ್ಟ 40 ಜನರಲ್ಲಿ ಕೆಲವೇ ತಿಂಗಳ ಮಗು ಕೂಡ ಸೇರಿದೆ. ಇನ್ನೂ ಹೆಚ್ಚಿನ ಸಾವು ಸಂಭವಿಸಿರುವ ಸಾಧ್ಯತೆಯನ್ನು ಅಲ್ಲಿನ ಮಾಧ್ಯಮಗಳು ತಿಳಿಸಿವೆ.

ಇಟಲಿ ಸರ್ಕಾರವು ಸಂಸತ್ತಿನಲ್ಲಿ ನಿನ್ನೆಯಷ್ಟೇ ವಲಸಿಗರ ರಕ್ಷಣೆಗಾಗಿ ವಿವಾದಾತ್ಮಕವಾದ ಹೊಸ ಕಾನೂನನ್ನು ಮಂಡಿಸಿದ್ದು, ಅದರ ಬೆನ್ನಲ್ಲೇ ದೋಣಿ ಮುಳುಗಡೆ ನಡೆದದ್ದು ವಿಪರ್ಯಾಸ.

‘ಹೊಸ ಕಾನೂನು ಒಂದು ಬಾರಿಯಷ್ಟೇ ವಲಸಿಗರು ತುಂಬಿದ ದೋಣಿಯನ್ನು ರಕ್ಷಿಸಬಹುದು. ಆದರೆ ಮೆಡಿಟರೇನಿಯನ್‌ ಸಾಗರದ ನಡುಭಾಗದಲ್ಲಿ ದೋಣಿ ಮುಳುಗಡೆ ನಿರಂತರವಾಗಿ ಸಂಭವಿಸುತ್ತಲಿದೆ .ಬಡತನ ಹಾಗೂ ಬದುಕಿನ ಸಂಘರ್ಷದಿಂದ ಬೇಸತ್ತ ಆಫ್ರಿಕಾ ಜನರು ಯುರೋಪ್‌ನಲ್ಲಿ ಒಳ್ಳೆಯ ಜೀವನ ನಡೆಸಬಹುದೆಂದು ಇಟಲಿ ಮೂಲಕ ಹಾದು ಬರುತ್ತಲಿರುತ್ತಾರೆ. ಈ ಜಲಮಾರ್ಗವನ್ನು ಯುರೋಪ್‌ ಜನ ‘ವಿಶ್ವದಲ್ಲೇ ಅತ್ಯಂತ ಅಪಾಯಕರ ದಾಟುವಿಕೆ‘ ಎಂದು ತಿಳಿಯುತ್ತಾರೆ' ಎಂಬುದು ವಿಶ್ಲೇಷಕರೊಬ್ಬರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT